ಕುಂಚ-ಗಾನ-ನೃತ್ಯ ವೈಭವ


Team Udayavani, May 31, 2019, 6:00 AM IST

v-3

ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಮತ್ತು ಶಾಂತಿವನ ಟ್ರಸ್ಟ್‌ (ರಿ.) ಸಹಯೋಗದೊಂದಿಗೆ ನಡೆದ 17ನೇ ವರ್ಷದ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕರಿಸುವ ಸಮಾರಂಭದಲ್ಲಿ ಖ್ಯಾತ ಕಲಾವಿದರಿಂದ ಕುಂಚ-ಗಾನ-ನೃತ್ಯ ವೈಭವ ವಿಶಿಷ್ಟ ಕಾರ್ಯಕ್ರಮ ಅನಾವರಣಗೊಂಡಿತು. ಪ್ರಸಕ್ತ ಸಾಲಿನ ಅಂಚೆ ಕುಂಚ ಸ್ಪರ್ಧೆಗೆ “ಮಹಾತ್ಮಾ ಗಾಂಧೀಜಿ’ ವಿಷಯ ನೀಡಲಾಗಿತ್ತು. ಪುರಸ್ಕಾರ ವಿತರಣಾ ಸಮಾರಂಭದ ವೇದಿಕೆಯ ಎಡಭಾಗದಲ್ಲಿ ಗಂಜೀಫಾ ಕಲಾವಿದ ಮೈಸೂರಿನ ಗಂಜೀಫಾ ರಘುಪತಿ ಭಟ್‌ ಅವರು ಕಾವ್ಯಶ್ರೀ ಅಜೇರು ಅವರ ಯಕ್ಷ ಗಾಯನಕ್ಕೆ ಗಾಂಧಿಜಿಯವರ ಚಿತ್ರವನ್ನು ಕುಂಚದಲ್ಲಿ ಮೂಡಿಸಿ ಬೆರಗುಗೊಳಿಸಿದರೆ, ವೇದಿಕೆಯ ಬಲಭಾಗದಲ್ಲಿ ಕರ್ನಾಟಕದ ಮೊದಲ ವೇಗದ ಚಿತ್ರಕಲಾವಿದೆ ಖ್ಯಾತಿಯ ಮಂಗಳೂರಿನ ಶಬರಿ ಗಾಣಿಗ ಕಪ್ಪು ಕ್ಯಾನ್‌ವಾಸ್‌ ಮೇಲೆ ಕುಂಚದಿಂದ ಚಿತ್ರ ಮೂಡಿಸಿ ಬಿಳಿ ಬಣ್ಣದ ಸಿಂಚನದಿಂದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಕರ್ಷಕ ಭಾವಚಿತ್ರವನ್ನೇ ಚಿತ್ರಿಸಿ ಎಲ್ಲರನ್ನೂ ಬೆರಗಾಗಿಸಿದ್ದಾರೆ. ಕುಂಚ ಕಲಾಕೃತಿಗೆ ಸ್ಫೂರ್ತಿಯಾಗಿ ವೇದಿಕೆಯ ಮುಂಭಾಗದಲ್ಲಿ ಕಾವ್ಯಶ್ರೀ ಅಜೇರು ಅವರ ಯಕ್ಷ ಗಾಯನ ಮತ್ತು ಉಜಿರೆ ಶ್ರೀ ಧ.ಮಂ. ಕಾಲೇಜಿನ ಯಕ್ಷಕಲಾ ತಂಡದ ಯಕ್ಷನೃತ್ಯದ ಮನೋಜ್ಞ ಅಭಿನಯ ಮೆಚ್ಚುಗೆಗೆ ಪಾತ್ರವಾಗಿತ್ತು.

“ವೈಷ್ಣವ ಜನತೋ ತೇನೆ ಕಹಿಯೆ’ ಗಾಂಧಿ ಸ್ಮತಿ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಿದ ಕಾವ್ಯಶ್ರೀ ಅಜೇರು “ಕುಡುಮದೊಡೆಯ ಮಂಜುನಾಥ’ ಮತ್ತು “ಪದ್ಮವಿಭೂಷಣ ಧರ್ಮಚಕ್ರವರ್ತಿ ವೀರೇಂದ್ರ ಹೆಗ್ಗಡೆ’ ಗಾಯನದೊಂದಿಗೆ ಮುಂದುವರಿಸಿ “ರಘುಪತಿ ರಾಘವ ರಾಜಾರಾಂ ಪತಿತ ಪಾವನ ಸೀತಾರಾಂ’ ಯಕ್ಷ ಗಾಯನದೊಂದಿಗೆ 20 ನಿಮಿಷಗಳ ವಿಶಿಷ್ಟ ಕಾರ್ಯಕ್ರಮ ಸಮಾಪ್ತಿಗೊಳಿಸಿದರು. ಅವರ ಮಧುರ ಕಂಠ ಸಿರಿಗೆ ಪೂರಕವಾಗಿ ಹಿಮ್ಮೇಳದ ಚೆಂಡೆಯಲ್ಲಿ ಸೀತಾರಾಮ ತೋಳ್ಪಾಡಿತ್ತಾಯ, ಮದ್ದಳೆಯಲ್ಲಿ ಜನಾರ್ದನ ತೋಳ್ಪಾಡಿತ್ತಾಯ, ಪುರುಷ ಪಾತ್ರದಲ್ಲಿ ಶ್ರೀಶಕುಮಾರ್‌ ಹೆಗ್ಡೆ ಹಾಗೂ ಸ್ತ್ರೀ ಪಾತ್ರಗಳಲ್ಲಿ ದಿವ್ಯಶ್ರೀ ಮತ್ತು ಸ್ವಾತಿ ಸಹಕರಿಸಿದ್ದರು. ಯಕ್ಷಗುರು ಅರುಣ ಕುಮಾರ್‌ ಧರ್ಮಸ್ಥಳ ನಿರ್ದೇಶಿಸಿ ಕಾರ್ಯಕ್ರಮ ಸಂಯೋಜಿಸಿದ್ದರು. ಕುಂಚ-ಯಕ್ಷಗಾನ-ನೃತ್ಯ ಒಂದಕ್ಕೊಂದು ಎರಕಹೊಯ್ದಂತೆ ಓತಪ್ರೋತವಾಗಿ ಹರಿದು ಬಂದು ಕುತೂಹಲ, ಆಕರ್ಷಣೆಗೆ ಒಳಗಾಗಿತ್ತು. ನಟ ಮುಖ್ಯಮಂತ್ರಿ ಚಂದ್ರು ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ| ಹೆಗ್ಗಡೆಯವರು ಕಲಾವಿದರ ಪ್ರತಿಭೆಯನ್ನು ಮುಕ್ತಕಂಠದಿಂದ ಅಭಿನಂದಿಸಿದರು.

ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಅಂಚೆ ಕುಂಚ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಕಳೆದ 17 ವರ್ಷಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿರುವುದು ಯುವ ಕಲಾವಿದರಿಗೆ ಕ್ಷೇತ್ರದಿಂದ ನೀಡುತ್ತಿರುವ ಪೋ›ತ್ಸಾಹದ ದ್ಯೋತಕವೆನ್ನಬಹುದು.

ಸಾಂತೂರು ಶ್ರೀನಿವಾಸ ತಂತ್ರಿ

ಟಾಪ್ ನ್ಯೂಸ್

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

KAUP: ಸಂವಿಧಾನ ಉಳಿಸಿ ಬೃಹತ್‌ ಜಾಥಾ ಮತ್ತು ಸಾರ್ವಜನಿಕ ಸಭೆ

KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್‌ ರಾಜ್‌ ಮೌರ್ಯ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.