ನಾಳೆಯಿಂದ ಮೀನುಗಾರಿಕೆಗೆ 61 ದಿನ ರಜೆ
ಮೀನಿನ ಕೊರತೆ, ತೂಫಾನ್, ಬಂದ್‌ನಿಂದಾಗಿ ಬೋಟ್ ದಡದಲ್ಲಿದ್ದದ್ದೇ ಹೆಚ್ಚು
Team Udayavani, May 31, 2019, 6:09 AM IST
ಮಲ್ಪೆ: ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರು ಮಲ್ಪೆಯಲ್ಲಿ ಈ ಬಾರಿಯೂ ಮೀನಿನ ಕ್ಷಾಮದಿಂದಾಗಿ ಅವಧಿಗೆ ಮುನ್ನವೇ ಬೋಟುಗಳು ದಡ ಸೇರಲಾರಂಭಿಸಿವೆ. ಮತೊÕéàದ್ಯಮಕ್ಕೆ ಜೂ. 1ರಿಂದ ಜು. 31ರ ವರೆಗೆ ಕಡ್ಡಾಯ ರಜೆ. ಈ ಅವಧಿಯಲ್ಲಿ ಸರಕಾರ ಯಾಂತ್ರಿಕ ಮೀನುಗಾರಿಕೆಗೆ ನಿಷೇಧವನ್ನು ವಿಧಿಸುತ್ತದೆ.
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಆಳಸಮುದ್ರ, ಪಸೀìನ್, ತ್ರಿಸೆವೆಂಟಿ, ಸಣ್ಣ ಟ್ರಾಲ್‌ಬೋಟ್‌ಗಳು ಸೇರಿದಂತೆ ಈಗಾಗಲೇ ಶೇ. 85 ರಷ್ಟು ದೋಣಿಗಳು ದಡ ಸೇರಿದ್ದು ಶೇ. 15ರಷ್ಟು ದೋಣಿಗಳು ಮಾತ್ರ ಮೀನುಗಾರಿಕೆ ಮುಗಿಸಿ ಇನ್ನಷ್ಟೇ ದಡ ಸೇರಲಿವೆ.
ಮೀನಿನ ಕೊರತೆಯಿಂದಾಗಿ ಶೇ.30ರಷ್ಟು ಬೋಟುಗಳು ಮೇ ತಿಂಗಳ ಮೊದಲ ವಾರದಲ್ಲಿ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಬಂದರಿನಲ್ಲಿ ಲಂಗರು ಹಾಕಿವೆ. ಸಮುದ್ರಕ್ಕೆ ಇಳಿದರೆ ಮೀನು ಸಿಗದೆ ಕಾರ್ಮಿಕರ ಸಂಬಳಕ್ಕೂ ಕೂಡ ಸಾಲದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎನ್ನುತ್ತಾರೆ ಬೋಟ್ ಮಾಲಕರು.
ಬೋಟ್ ದಡದಲ್ಲಿ ಉಳಿದದ್ದೆ ಹೆಚ್ಚು
ಈ ಬಾರಿ ಋತು ಆರಂಭದಿಂದ ಅಂತ್ಯದವರೆಗೂ ಒಂದಲ್ಲ ಒಂದು ಸಮಸ್ಯೆ ಯಿಂದಾಗಿ ನಿರೀಕ್ಷೆಯಷ್ಟು ಮೀನುಗಾರಿಕೆ ನಡೆದಿಲ್ಲ. ಆರಂಭದ ದಿನದಲ್ಲಿ ತೂಫಾನ್‌ನಿಂದಾಗಿ ಕೆಲ ಸಮಯ ಕಡಲಿಗಿಳಿಯುವುದಕ್ಕೆ ಸಾಧ್ಯವಾಗಿಲ್ಲ. ಮಧ್ಯೆ ಮಧ್ಯೆ ಓಖೀ, ಗಜ, ಫೋನಿ ಚಂಡಮಾರುತದಿಂದಲೂ ಹಿನ್ನಡೆಯಾಗಿತ್ತು. ಮೀನುಗಾರಿಕೆಯನೇ° ತಲ್ಲಣಗೊಳಿಸಿ ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ, ಬುಲ್‌ಟ್ರಾಲ್ ಮತ್ತು ಬೆಳಕು ಕೇಂದ್ರಿತ ಮೀನುಗಾರಿಕೆ ಸಮಸ್ಯೆಗಳಿಂದಾಗಿ ತಿಂಗಳುಗಳ ಕಾಲ ಮೀನುಗಾರಿಕೆ ನಡೆಯದೇ ಬೋಟ್‌ಗಳನ್ನು ದಡದಲ್ಲೇ ನಿಲ್ಲಿಸಿ ಕಾಲ ಕಳೆಯುವಂತಾಗಿತ್ತು. ಋತು ಅಂತ್ಯದ ವೇಳೆಯೂ ಮೀನು ಕೊರತೆ ತೀವ್ರವಾಗಿ ಮುಂದುವರಿದಿದ್ದು ಮೀನುಗಾರಿಕೆ ಉದ್ಯಮಕ್ಕೆ ಭಾರೀ ಹೊಡೆತ ಉಂಟಾಗಿತ್ತು.
ಪಸೀìನ್ 5 ತಿಂಗಳ ಮೊದಲೇ ಸ್ಥಗಿತ
ಪಸೀìನ್ ಬೋಟುಗಳು ಬೆಳಕು ಹಾಯಿಸಿ ನಡೆಸುವ ಮೀನುಗಾರಿಕೆ ಸರಕಾರ ನಿಷೇಧ ಹೇರಿದ್ದ ಹಿನ್ನೆಲೆಯಲ್ಲಿ ಮಲ್ಪೆ ಬಂದರಿನಲ್ಲಿ ಶೇ. 70ರಷ್ಟು ಬೋಟುಗಳು 5 ತಿಂಗಳ ಹಿಂದೆಯೇ ಸ್ಥಗಿತಗೊಳಿಸಿದರೆ, ಉಳಿದವುಗಳು ಎರಡೂವರೆ ತಿಂಗಳ ಹಿಂದೆಯೇ ದಡ ಸೇರಿದೆ. ಆದಾಯಕ್ಕಿಂತ ವೆಚ್ಚವೇ ಜಾಸ್ತಿಯಾಗಿದೆ. ಬೇಗನೇ ಮೀನುಗಾರಿಕೆ ಸ್ಥಗಿತಗೊಂಡಿದ್ದರಿಂದ ಹೊರ ರಾಜ್ಯದ ಮೀನುಗಾರರಲ್ಲದೆ ಸ್ಥಳೀಯ ಮೀನುಗಾರರಿಗೂ ಕೆಲಸ ಇಲ್ಲದಂತಾಗಿತ್ತು ಎನ್ನುತ್ತಾರೆ ಪಸೀìನ್ ಮೀನುಗಾರ ಸಂಘದ ಕಾರ್ಯದರ್ಶಿ ಕೃಷ್ಣ ಎಸ್. ಸುವರ್ಣ.
ಸ್ಥಳಾವಕಾಶದ ಸಮಸ್ಯೆ
ಮಲ್ಪೆ ಬಂದರಿನ 1200 ಆಳ ಸಮುದ್ರ, 160 ಪರ್ಸಿನ್, 400 ತ್ರಿಸೆವೆಂಟಿ ಸೇರಿದಂತೆ ಇತರ ಸಣ್ಣಗಾತ್ರದ ಬೋಟುಗಳು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳು ತ್ತದೆ. ಮಲ್ಪೆ ಬಂದರಿನಲ್ಲಿ ಈಗಿರುವ ಬೋಟ್‌ಗಳಿಗೆ ಲಂಗರು ಹಾಕಲು ಸ್ಥಳಾವಕಾಶದ ಕೊರತೆ ಉಂಟಾಗಿದೆ.
ಕಾನೂನು ಉಲ್ಲಂಘಿಸಿದರೆ ದಂಡನೆ
ಉಡುಪಿ ಜಿಲ್ಲೆಯ ಕರಾವಳಿಯಲ್ಲಿ ಜೂ. 1ರಿಂದ ಜು. 31ರ ವರೆಗೆ ಯಾಂತ್ರೀಕೃತ ಮೀನುಗಾರಿಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಎಲ್ಲ ಮೀನುಗಾರರು ಕಡ್ಡಾಯವಾಗಿ ಸರಕಾರದ ಆದೇಶವನ್ನು ಪಾಲಿಸಬೇಕಾಗಿದೆ. ಕಾನೂನು ಉಲ್ಲಂಘಿಸಿದರೆ ದಂಡನೆಗೆ ಹೊಣೆಯಾಗುತ್ತಾರೆ. ನಾಡದೋಣಿಗಳು 10 ಅಶ್ವಶಕ್ತಿ ಎಂಜಿನ್ ಬಳಸಿ ಮೀನುಗಾರಿಕೆ ನಡೆಸಲು ಅವಕಾಶ ಇದೆ.
-ಪಾರ್ಶ್ವನಾಥ್, ಉಪ ನಿರ್ದೇಶಕರು, ಮೀನುಗಾರಿಕಾ ಇಲಾಖೆ
ಆದಾಯಕ್ಕಿಂತ ಖರ್ಚು ಹೆಚ್ಚುc
ಮೀನಿನ ಕೊರತೆಯಿಂದ ಯಾವುದೇ ರೀತಿಯ ಲಾಭವಾಗಿಲ್ಲ. ಆದಾಯಕ್ಕಿಂತ ಖರ್ಚು ಹೆಚ್ಚಾಗಿದ್ದರಿಂದ ಬೋಟನ್ನು ಬೇಗ ದಡ ಸೇರಿಸುವಂತಾಯಿತು. ಗಟ್ಟಿ ಮನಸ್ಸು ಮಾಡಿ ಕಡಲಿಗಿಳಿಯುವ ಸಾಹಸ ತೋರಿ ಮೀನುಗಾರಿಕೆ ಇಳಿದರೆ ಮೀನು ಸಿಗದೆ ಒಂದಷ್ಟು ಡೀಸೆಲ್ ಖರ್ಚು ಮಾಡಿ ದಡ ಸೇರಬೇಕಾದ ಪರಿಸ್ಥಿತಿ ಉಂಟಾಗಿದೆ.
-ಕೃಷ್ಣಪ್ಪ ಕರ್ಕೇರ, ಮಲ್ಪೆ, ಸ್ಥಳೀಯ ಮೀನುಗಾರರು
ಮೀನಿನ ಪ್ರಮಾಣ ಕಡಿಮೆ
ಶೇ. 10-15ರಷ್ಟು ಬೋಟುಗಳು ಸಮುದ್ರದಲ್ಲಿವೆೆ. ಮೇ 31ರ ಒಳಗೆ ದಡ ಸೇರಲಿವೆೆ. ಮೀನು ಖಾಲಿ ಮಾಡಲು ಜೂ. 3ರ ವರೆಗೆ ಅವಕಾಶ ನೀಡಲಾಗಿದೆ. ಈ ಬಾರಿ ಸಿಕ್ಕ ಮೀನಿನ ಪ್ರಮಾಣ ಕಡಿಮೆ, ಮೀನಿನ ಧಾರಣೆಯಿಂದಾಗಿ ಸಿಕ್ಕಿದ ಮೀನಿಗೆ ಆದಾಯ ಬಂದಿದ್ದರೂ ಡೀಸೆಲ್ ದರ ಏರಿಕೆಯಿಂದಾಗಿ ಆದಾಯಕ್ಕಿಂತ ಖರ್ಚು ಹೆಚ್ಚಾಗಿ ದೋಣಿ ಮಾಲಕರು ನಷ್ಟ ಅನುಭವಿಸಿದ್ದಾರೆ
– ಸತೀಶ್ ಕುಂದರ್, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ
ಪ್ರತಿ ಪ್ರಯಾಣದಲ್ಲೂ ನಷ್ಟ ತಪ್ಪಿದ್ದಲ್ಲ
ಒಂದೆಡೆ ಮೀನಿನ ಕ್ಷಾಮ, ಇನ್ನೊಂದೆಡೆ ವಿವಿಧ ಕಾರಣಕ್ಕೆ ಆಗಾಗ ಬಂದ್ ಕರೆ ನೀಡಿದ್ದರಿಂದ ಮೀನುಗಾರರಾದ ನಮಗೆ ಬಹಳಷ್ಟು ಹೊಡೆತ ಬಿದ್ದಿದೆ. 10ರಿಂದ 12 ದಿನಗಳ ವರೆಗೆ ನಡೆಯುವ ಆಳ ಸಮುದ್ರ ಮೀನುಗಾರಿಕೆಗೆ 6 ಲಕ್ಷ ರೂಪಾಯಿ ಅಧಿಕ ಮೌಲ್ಯದ ಮೀನು ದೊರೆತರೆ ಮಾತ್ರ ಲಾಭ. ಇಲ್ಲವಾದರೇ ಪ್ರತಿ ಪ್ರಯಾಣದಲ್ಲೂ ನಷ್ಟವೇ ಹೆಚ್ಚಾಗುತ್ತದೆ.
-ಶೇಖರ್ ಜಿ. ಕೋಟ್ಯಾನ್, ಬೋಟ್ ಮಾಲಕರು
– ನಟರಾಜ್ ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belve: ಸ್ನಾನಕ್ಕೆಂದು ನದಿಗಿಳಿದಿದ್ದ ಇಬ್ಬರು ಬಾಲಕರು ನೀರುಪಾಲು
Udupi: ಗೀತಾರ್ಥ ಚಿಂತನೆ 110: ಸಾವಿನ ಕಡೆಯ ಪಯಣ ಹುಟ್ಟಿದಂದಿನಿಂದ…
Shirva: ಬೆಳ್ಳೆ ಬಾಸ್ಕರ ಪೂಜಾರಿ ನಿಧನ
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಮಲ್ಪೆ ಸೈಂಟ್‌ಮೇರಿಸ್: ರಕ್ತದೊತ್ತಡ ಕಡಿಮೆಯಾಗಿ ಶಾಲಾ ಬಾಲಕಿ ಗಂಭೀರ: ಸಕಾಲದಲ್ಲಿ ರಕ್ಷಣೆ
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.