ಮೋದಿ ಅಭಿಮಾನಿಯಿಂದ 28 ಕಿಮೀ ದೀಡ್ ನಮಸ್ಕಾರ!
Team Udayavani, May 31, 2019, 3:00 AM IST
ಕೊಟ್ಟೂರು: ಮೋದಿ ಅಭಿಮಾನಿಯೊಬ್ಬ ಸುಮಾರು 28 ಕಿ.ಮೀ. ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದ್ದಾರೆ. ಹನಸಿ ಗ್ರಾಮದ ರಾಜಶೇಖರ ಸುಣಗಾರ ಎಂಬುವರು ಮೋದಿ ಅವರು ಮತ್ತೂಮ್ಮೆ ಪ್ರಧಾನಿಯಾದರೆ ದೀಡ್ ನಮಸ್ಕಾರ ಹಾಕುವುದಾಗಿ ಹರಕೆ ಹೊತ್ತಿದ್ದರು.
ಹೀಗಾಗಿ, ಗುರುವಾರ ಬೆಳಗ್ಗೆ ಹಗರಿಬೊಮ್ಮನಹಳ್ಳಿ ತಾಲೂಕಿನ ಹನಸಿ ಗ್ರಾಮದಿಂದ ಕೊಟ್ಟೂರೇಶ್ವರ ಸ್ವಾಮಿ ದೇವಾಲಯದವರೆಗೆ (28 ಕಿ.ಮೀ. ದೂರ) ದೀಡು ನಮಸ್ಕಾರ ಹಾಕಿದರು. ಬೆಳಗ್ಗೆ 6 ಗಂಟೆಗೆ ಸ್ವಗ್ರಾಮ ಹನಸಿಯಲ್ಲಿನ ಪರಮೇಶ್ವರ ದೇವಸ್ಥಾನದಿಂದ ದೀಡ್ ನಮಸ್ಕಾರ ಆರಂಭಿಸಿ ಕಲ್ಲಹಳ್ಳಿ,
ಬೆಣಕಲ್ಲು, ದೂಪದಹಳ್ಳಿ ಮತ್ತು ಹ್ಯಾಳಾ ಗ್ರಾಮದ ಮೂಲಕ ಬೆಳಗ್ಗೆ 11ರ ಹೊತ್ತಿಗೆ ಕೊಟ್ಟೂರಿಗೆ ಆಗಮಿಸಿದರು. ನಂತರ ತಮ್ಮ ಪತ್ನಿ ಅನಿತಾ ಮತ್ತು ಗ್ರಾಮದ ಬೆಂಬಗಲಿರೊಂದಿಗೆ ಹಿರೇಮಠದ ಕೊಟ್ಟೂರೇಶ್ವರ ದೇವಸ್ಥಾನಕ್ಕೆ ಆಗಮಿಸಿ, ದೇವರಿಗೆ ಪೂಜೆ ಸಲ್ಲಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.