ಸಿನಿಮಾದಲ್ಲಿ ನಟನೆಗಷ್ಟೇ ಮೊದಲ ಆದ್ಯತೆ
ಸುಧಾರಾಣಿ ಸಿನಿ ಪಾಲಿಸಿ
Team Udayavani, May 31, 2019, 6:00 AM IST
ಕ್ಲಾಸ್ ಮತ್ತು ಮಾಸ್ ಲುಕ್ ಎರಡಕ್ಕೂ ಒಪ್ಪುವಂಥ ಅಪರೂಪದ ನಟಿ ಸುಧಾರಾಣಿ. ಬಾಲನಟಿಯಾಗಿ ಚಿತ್ರರಂಗಕ್ಕೆ ಅಡಿಯಿಟ್ಟು, ಆನಂತರ ನಾಯಕ ನಟಿಯಾಗಿ ಗುರುತಿಸಿಕೊಂಡ ಸುಧಾರಾಣಿ ಕನ್ನಡ ಚಿತ್ರರಂಗದಲ್ಲಿ 90ರ ದಶಕದಲ್ಲಿ ಸಿನಿಪ್ರಿಯರ ಹಾಟ್ ಫೇವರೆಟ್ ಹೀರೋಯಿನ್. ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟು ಕೆಲಕಾಲ ಚಿತ್ರರಂಗದಿಂದ ದೂರವಿದ್ದ ಸುಧಾರಾಣಿ, ಇತ್ತೀಚಿನ ವರ್ಷಗಳಲ್ಲಿ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈಗ ಸುಧಾರಾಣಿಯವರನ್ನು ಅರಸಿಕೊಂಡು ಹಲವು ಚಿತ್ರಗಳು, ವಿವಿಧ ಪಾತ್ರಗಳು ಬರುತ್ತಿವೆ. ಸದ್ಯ ಸುಧಾರಾಣಿ ಚಿತ್ರರಂಗದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದರೂ, ತಮ್ಮದೇ ಆದ ಒಂದಷ್ಟು ನಿಲುವುಗಳನ್ನು ಇಟ್ಟುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡುವ ಸುಧಾರಾಣಿ, ‘ನಾನು ಸಿನಿಮಾವನ್ನು ಈಗಲೂ ಪ್ರೀತಿಸುತ್ತೇನೆ. ಅಭಿನಯವನ್ನು ಇಷ್ಟಪಡುತ್ತೇನೆ. ಆದರೆ ಚಿತ್ರಗಳಿಗೆ ಮೊದಲಿನಷ್ಟು ಸಮಯ ಕೊಡಲು ಆಗುತ್ತಿಲ್ಲ. ಮೊದಲೆಲ್ಲ ಆ್ಯಕ್ಟಿಂಗ್ ಒಂದೇ ಕೆಲಸವಾಗಿತ್ತು. ಆದ್ರೆ ಈಗ ಹಾಗಿಲ್ಲ. ಸಿನಿಮಾ ಹೊರತುಪಡಿಸಿ ನಮ್ಮದೇ ಆದ ಒಂದಷ್ಟು ಬ್ಯುಸಿನೆಸ್ ಇದೆ ಅದರ ಕಡೆಗೆ ಗಮನ ಕೊಡಬೇಕು. ಜೊತೆಗೆ ಫ್ಯಾಮಿಲಿ ಕಡೆಗೆ ಗಮನ ಕೊಡಬೇಕು’ ಎನ್ನುತ್ತಾರೆ. ಹಾಗಾಗಿ, ತಮ್ಮನ್ನು ಹುಡುಕಿಕೊಂಡು ಬರುವ ಪಾತ್ರಗಳನ್ನು ಸಾಕಷ್ಟು ಅಳೆದು-ತೂಗಿ, ಜೊತೆಗೆ ತಮ್ಮ ಸಮಯ ನೋಡಿಕೊಂಡು ಒಪ್ಪುತ್ತಾರಂತೆ.
ಇನ್ನು ಬಿಡುವಿನ ವೇಳೆಯಲ್ಲಿ ಸುಧಾರಾಣಿ ಏನು ಮಾಡುತ್ತಾರೆ ಅನ್ನೋದಕ್ಕೆ ಅವರೇ ಹೇಳುವಂತೆ, ‘ನನಗೆ ಅಡುಗೆ ಮಾಡೋದು ಅಂದ್ರೆ ಇಷ್ಟ. ಮನೆಯಲ್ಲಿದ್ದಾಗ ಬೇಕಿಂಗ್ ಮಾಡುತ್ತೇನೆ. ಪುಸ್ತಕಗಳನ್ನು ಓದುತ್ತೇನೆ. ಅದನ್ನ ಬಿಟ್ಟರೆ ಟ್ರಾವೆಲಿಂಗ್ ಅಂದ್ರೆ ನನಗಿಷ್ಟ. ಅದರಲ್ಲೂ ಫ್ರೆಂಡ್ಸ್ ಜೊತೆ ಸುತ್ತಾಡೋದು ಅಂದ್ರೆ ತುಂಬ ಖುಷಿ. ಇದು ನನ್ನನ್ನ ಯಾವಾಗಲೂ ಎನರ್ಜಿಟಿಕ್ ಆಗಿರುವಂತೆ ಮಾಡುತ್ತದೆ’ ಎನ್ನುತ್ತಾರೆ.
ಹಾಗಾದರೆ, ಸುಧಾರಾಣಿ ಅವರ ಸಮಕಾಲಿನ ಅನೇಕ ನಟಿಯರು ನಿರ್ಮಾಣ, ನಿರ್ದೇಶನದತ್ತ ಮುಖ ಮಾಡಿರುವ ಸಾಕಷ್ಟು ನಿದರ್ಶನಗಳಿವೆ. ಸುಧಾರಾಣಿ ಅವರಿಗೆ ಅಂಥದ್ದೇನಾದರೂ ಕನಸು, ಯೋಚನೆಗಳು ಇವೆಯಾ ಅಂದ್ರೆ ಅದರ ಬಗ್ಗೆ ಮಾತನಾಡುವ ಸುಧಾರಾಣಿ, ‘ಆರಂಭದಲ್ಲಿ ನನಗೆ ನಿರ್ದೇಶನ ಮಾಡಬೇಕು ಎಂಬ ಕನಸಿತ್ತು. ಆದರೆ ಬದಲಾದ ಸಂದರ್ಭದಲ್ಲಿ ಈಗ ನನಗೆ ಅಂಥ ಯಾವುದೇ ಯೋಚನೆ ಇಲ್ಲ. ಇನ್ನು ಸಿನಿಮಾ ನಿರ್ಮಾಣ ಅನ್ನೋದು ತುಂಬ ದೊಡ್ಡ ಜವಾಬ್ದಾರಿ. ಅದನ್ನು ನಿರ್ವಹಿಸಲು ಸಾಕಷ್ಟು ಸಮಯ ಬೇಕು. ಜೊತೆಗೆ ಅನುಭವ ಕೂಡ ಬೇಕು. ಹಾಗಾಗಿ ಸದ್ಯಕ್ಕಂತೂ ನನಗೆ ನಿರ್ಮಾಣ ಅಥವಾ ನಿರ್ದೇಶನದ ಬಗ್ಗೆ ಯಾವುದೇ ಆಸಕ್ತಿಯಾಗಲಿ, ಯೋಚನೆಯಾಗಲಿ ಇಲ್ಲ’ ಎನ್ನುತ್ತಾರೆ.
‘ಹಿಂದೆ ಅನೇಕ ಬಾರಿ ತಮಿಳು, ಮಲೆಯಾಳಂ ಸಿನಿಮಾಗಳ ಆಫರ್ ಬಂದಾಗ ರಿಜೆಕ್ಟ್ ಮಾಡಿದ್ದೆ. ಆದ್ರೆ ಈಗ ಅಲ್ಲಿ ಬರುತ್ತಿರುವ ಸಿನಿಮಾಗಳನ್ನ ನೋಡಿದ್ರೆ, ಆವತ್ತು ಅಂಥ ಆಫರ್ನ ರಿಜೆಕ್ಟ್ ಮಾಡಬಾರದಿತ್ತು ಅನಿಸುತ್ತದೆ. ಅಲ್ಲಿ ಬೇರೆ ಬೇರೆ ಜಾನರ್ ಸಿನಿಮಾಗಳು ಬರುತ್ತಿವೆ. ಹೊಸ ಪ್ರಯೋಗಗಳಾಗುತ್ತಿವೆ. ಆದ್ರೆ ನಮ್ಮಲ್ಲಿ ಇನ್ನೂ ಹೀರೋ, ಹೀರೋಯಿನ್ಸ್ ಅಂತಾನೇ ಸಿನಿಮಾ ಮಾಡ್ತಿದ್ದೀವಿ. ಈ ವಿಷಯದಲ್ಲಿ ಇಂಡಸ್ಟ್ರಿ ಇನ್ನೂ ಬದಲಾಗಬೇಕು ಅನಿಸುತ್ತದೆ’ ಎನ್ನುತ್ತಾರೆ ಸುಧಾರಾಣಿ. ಸದ್ಯ ಸುಧಾರಾಣಿಯವರು ಯಾವ ಮಾನದಂಡದ ಮೇಲೆ ಸಿನಿಮಾಗಳನ್ನು ಆಯ್ಕೆ ಮಾಡುತ್ತಾರೆಂಬ ಕುತೂಹಲವಿರುತ್ತದೆ. ಅದಕ್ಕೂ ಸುಧಾರಾಣಿ ಉತ್ತರಿಸಿದ್ದಾರೆ. ‘ಈಗ ಬರುತ್ತಿರುವ ಎಲ್ಲವೂ ಕೆಟ್ಟ ಚಿತ್ರಗಳಲ್ಲ. ಆದ್ರೆ ಒಳ್ಳೆ ಚಿತ್ರಗಳ ಸಂಖ್ಯೆ ಕಡಿಮೆ ಇದೆ. ನನಗೆ ಬರುವ ಆಫರ್‌ಗಳಲ್ಲಿ, ನನ್ನದೇ ಆದ ಕೆಲವೊಂದು ಮಾನದಂಡಗಳನ್ನು ಇಟ್ಟುಕೊಂಡು ಚಿತ್ರವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಚಿತ್ರದ ಕಥೆಯಲ್ಲಿ ಹೊಸತನವಿರಬೇಕು, ವಿಭಿನ್ನತೆಯಿರಬೇಕು, ಮನರಂಜನೆ, ಎಮೋಷನಲ್ ವ್ಯಾಲ್ಯೂ, ಮೆಸೇಜ್ ಎಲ್ಲವೂ ಇರಬೇಕು. ಜೊತೆಗೆ ನೋಡುವವರಿಗೆ ಅದು ಕನೆಕ್ಟ್ ಆಗುವಂತಿರಬೇಕು. ಕಥೆ ನೋಡುಗರನ್ನು ಕಾಡುವಂತಿರಬೇಕು. ಇತ್ತೀಚೆಗೆ ನಾನು ಮಾಡಿದ ‘ಲೈಫ್ ಜೊತೆ ಒಂದ್ ಸೆಲ್ಫಿ’ ಚಿತ್ರದ ಪಾತ್ರ ನನಗೆ ತುಂಬ ಇಷ್ಟವಾಗಿತ್ತು. ಆದರೆ ಸಿನಿಮಾ ಅಷ್ಟಾಗಿ ಜನಕ್ಕೆ ತಲುಪಲಿಲ್ಲ’ ಎನ್ನುತ್ತಾರೆ ಸುಧಾರಾಣಿ.•
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.