ಸೆಂಟ್ರಲ್ ಮಾರುಕಟ್ಟೆ ಸಮೀಪ ಕಸದ ಸಮಸ್ಯೆ
ಪಾಲಿಕೆಯಿಂದ ಅಸಮರ್ಪಕ ಕಸ ನಿರ್ವಹಣೆ
Team Udayavani, May 31, 2019, 6:00 AM IST
ಮಹಾನಗರ: ಕೆಲವು ದಿನಗಳಿಂದ ನಗರದ ಸೆಂಟ್ರಲ್ ಮಾರುಕಟ್ಟೆ ವ್ಯಾಪ್ತಿಯಲ್ಲಿ ಕಸದ ನಿರ್ವಹಣೆ ಸಮ ರ್ಪಕವಾಗಿ ನಡೆಯದೆ ಸ್ಥಳೀಯರು ಸಮಸ್ಯೆ ಎದುರಿಸುತ್ತಿದ್ದಾರೆ.
ಮಳೆಗಾಲ ಎದುರುಗೊಳ್ಳುವ ಈ ಕಾಲದಲ್ಲಿ ಪಾಲಿಕೆಯು ಕಸದ ನಿರ್ವಹಣೆಗೆ ವಿಶೇಷ ಆದ್ಯತೆ ನೀಡಬೇಕಾಗಿದ್ದರೂ, ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಸೆಂಟ್ರಲ್ ಮಾರುಕಟ್ಟೆ, ಬಿ.ಬಿ. ಅಲಬಿ ರಸ್ತೆ, ಭವಂತಿ ಸ್ಟ್ರೀಟ್ ರಸ್ತೆ, ಮೈದಾನ 3, 4ನೇ ಅಡ್ಡರಸ್ತೆಯ ವ್ಯಾಪ್ತಿಯಲ್ಲಿ ಈ ಸಮಸ್ಯೆ ಇದ್ದು, ಪ್ರತೀ ನಿತ್ಯ ಇಲ್ಲಿಂದ ಕಸ ನಿರ್ವಹಣೆ ಆಗುತ್ತಿಲ್ಲ ಎಂಬ ದೂರು ಬಂದಿದೆ. ಕೆಲವೊಮ್ಮೆ ಎರಡು-ಮೂರು ದಿನಕ್ಕೊಮ್ಮೆ ಇಲ್ಲಿಂದ ಕಸ ವಿಲೇವಾರಿ ಮಾಡುತ್ತಿರುವುದರಿಂದ ತ್ಯಾಜ್ಯದ ರಾಶಿ ಈ ಭಾಗದಲ್ಲಿ ತುಂಬಿಕೊಂಡಿದೆ ಎಂಬುದು ಅವರ ಆರೋಪ.
ಸೆಂಟ್ರಲ್ ವಾರ್ಡ್‌ನ ಮಾಜಿ ಕಾರ್ಪೊರೇಟರ್ ಪೂರ್ಣಿಮಾ ಸುದಿನ ಜತೆಗೆ ಮಾತನಾಡಿ, ಮನಪಾ ಜನಪ್ರತಿನಿಧಿಗಳ ಆಡಳಿತ ಮುಗಿದ ಬಳಿಕ ಸೆಂಟ್ರಲ್ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಜಾಸ್ತಿಯಾಗಿದೆ. ಇಲ್ಲಿ ಪ್ರತೀ ದಿನ ಕಸ ತೆಗೆಯುತ್ತಿಲ್ಲ. ಕೇವಲ ಒಂದು ವಾಹನದ ಮೂಲಕ ಕಸ ತೆಗೆಯುವ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಹೀಗಾಗಿ ಬಹುತೇಕ ಭಾಗದ ಕಸ ಇಲ್ಲಿ ಹಾಗೆಯೇ ಉಳಿಯುತ್ತಿದೆ. ಅಧಿಕಾರಿಗಳಲ್ಲಿ ಈ ಬಗ್ಗೆ ವಿಚಾರಿಸಿದಾಗ ಅವರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದರು.
ಇನ್ನಷ್ಟು ಸಮಸ್ಯೆ ಆಗುವ ಸಾಧ್ಯತೆ
ಕಸವೆಲ್ಲ ರಸ್ತೆ ಬದಿಯಲ್ಲಿಯೇ ಬಾಕಿ ಉಳಿದ ಕಾರಣದಿಂದ ಮಳೆಗಾಲದಲ್ಲಿ ಇನ್ನೊಂದು ಸಮಸ್ಯೆಗೆ ಆಹ್ವಾನ ಮಾಡಿ ದಂತಾಗಿದೆ. ಕಸದ ಮೇಲೆ ಮಳೆ ನೀರು ಬಿದ್ದು ಅದರಿಂದ ಇನ್ನೊಂದು ಅನಾಹುತವಾಗುವ ಸಾಧ್ಯತೆಯಿದೆ. ಜತೆಗೆ, ಮಳೆ ನೀರಿನಲ್ಲಿ ಕಸವೆಲ್ಲ ತೋಡಿಗೆ ಸೇರುವ ಆತಂಕವೂ ಇದೆ. ಮೊನ್ನೆ ಸುರಿದ ಸಣ್ಣ ಮಳೆಯಲ್ಲಿಯೇ ಕೆಲವು ಭಾಗದ ಕಸ ಗೌರಿಮಠದ ಸಮೀಪದ ತೋಡಿಗೆ ಸೇರಿ, ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಸಮಸ್ಯೆಯಾಗಿತ್ತು. ಮುಂದೆಯೂ ಕಸದ ಸಮಸ್ಯೆ ಹೀಗೆಯೇ ಉಲ್ಬಣಿಸಿದರೆ ಇನ್ನಷ್ಟು ಸಮಸ್ಯೆ ಆಗುವ ಸಾಧ್ಯತೆಯಿದೆ.
ಪ್ರತಿದಿನ ಕಸ ನಿರ್ವಹಣೆ
ಸೆಂಟ್ರಲ್ ಮಾರುಕಟ್ಟೆ ಸೇರಿದಂತೆ ಆ ವ್ಯಾಪ್ತಿಯಲ್ಲಿ ಕೆಲವು ದಿನದ ಹಿಂದೆ ಕಸದ ನಿರ್ವಹಣೆ ಕುರಿತಾದಂತೆ ಸಮಸ್ಯೆಗಳಿತ್ತು. ವಾಹನಗಳ ಕೊರತೆಯಿಂದ ಕಸ ತೆಗೆಯುವ ವೇಳೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿತ್ತು. ಆದರೆ, ಈಗ ಈ ಸಮಸ್ಯೆ ಇತ್ಯರ್ಥವಾಗುತ್ತಿದ್ದು, ಪ್ರತೀ ದಿನ ಕಸ ನಿರ್ವಹಣೆಗೆ ಸೂಚಿಸಲಾಗಿದೆ.
– ಶಬರೀನಾಥ್
ಪರಿಸರ ಎಂಜಿನಿಯರ್, ಮನಪಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.