ಕೆಪಿಎಸ್: 100ಕ್ಕೂ ಹೆಚ್ಚು ಮಕ್ಕಳು ಸೇರ್ಪಡೆ
Team Udayavani, May 31, 2019, 6:00 AM IST
ಕೆಯ್ಯೂರು: ಕೆಯ್ಯೂರು ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಸಂಸ್ಥೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಬದಲಾಗಿದೆ. ಸರಕಾರದ ಆದೇಶದಂತೆ 2019-20ನೇ ಶೈಕ್ಷಣಿಕ ವರ್ಷದಿಂದ ಒಂದು ಭೌಗೋಳಿಕ ಸ್ಥಳದಲ್ಲಿ ಪೂರ್ವ ಪ್ರಾಥಮಿಕ, ಎಲ್.ಕೆ.ಜಿ., ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ಒಟ್ಟುಗೂಡಿಸಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತಿಸಲಾಗಿದೆ.
ಈ ಶೈಕ್ಷಣಿಕ ವರ್ಷದಿಂದಲೇ ಪೂರ್ವ ಪ್ರಾಥಮಿಕ ಶಿಕ್ಷಣದಡಿಯಲ್ಲಿ ಎಲ್.ಕೆ.ಜಿ. ಮತ್ತು 1ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ವಿಭಾಗವು ಆರಂಭಗೊಂಡಿದೆ. ಶಿಕ್ಷಕರನ್ನು ತರಬೇತಿಗೊಳಿಸಿ ಸಜ್ಜುಗೊಳಿಸಲಾಗಿದೆ.
ಮೂಲ ಸೌಕರ್ಯ ಅಗತ್ಯ
ಕೆಯ್ಯೂರು ಪದವಿಪೂರ್ವ ಕಾಲೇಜು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆಗೊಂಡಿದೆ. ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜು ಶಿಕ್ಷಣ ವ್ಯವಸ್ಥೆಯನ್ನು ಒಂದೇ ಆವರಣದಲ್ಲಿ ತರುವ ಚಿಂತನೆಯೂ ಸೂಕ್ತವಾಗಿದೆ. ಕಳೆದ ವರ್ಷ 1ನೇ ತರಗತಿ ಮಕ್ಕಳ ಸಂಖ್ಯೆ 28 ಆಗಿತ್ತು. ಈ ಬಾರಿ 1ನೇ ತರಗತಿ ಮಕ್ಕಳ ಸಂಖ್ಯೆ ಇಂಗ್ಲಿಷ್ ಮೀಡಿಯಂ 39, ಕನ್ನಡ ಮೀಡಿಯಂ 6 ಹೀಗೆ ಒಟ್ಟು 45 ಮಕ್ಕಳು ಸೇರ್ಪಡೆಯಾಗಿದ್ದಾರೆ. ಎಲ್.ಕೆ.ಜಿ.ಗೆ 40 ಮಕ್ಕಳು, ಯು.ಕೆ.ಜಿ.ಗೆ 33 ಮಕ್ಕಳು ಸೇರ್ಪಡೆಯಾಗಿದ್ದಾರೆ. ಮಕ್ಕಳ ಕಲಿಕೆಗೆ ಈ ವರ್ಷಕ್ಕೆ ಸಾಕಾಗುವಷ್ಟು ಕೊಠಡಿ ಇದೆ. ಮುಂದಿನ ವರ್ಷಕ್ಕೆ ಸಮಸ್ಯೆಯಾಗಬಹುದು. ಎಲ್.ಕೆ.ಜಿ., ಯು.ಕೆ.ಜಿ.ಗೆ ಶಿಕ್ಷಕರನ್ನು 10 ತಿಂಗಳ ಅವಧಿಗೆ ಸರಕಾರ ನಿಯೋಜಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 100ಕ್ಕೂ ಅಧಿಕ ಮಕ್ಕಳು ಹೊಸದಾಗಿ ಸೇರ್ಪಡೆಯಾಗಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.