ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದಿರಿ: ರಮಾನಾಥ ರೈ
Team Udayavani, May 31, 2019, 6:10 AM IST
ಬಂಟ್ವಾಳ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರಿಗೆ ಬಂದಿರುವ ಹಲ್ಲೆ ಮತ್ತು ಹತ್ಯೆ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳ ಕೃತ್ಯ ಖಂಡನೀಯ. ಅವರ ಪರವಾಗಿ ಚುನಾಯಿತ ಪ್ರತಿನಿಧಿಗಳಿಂದ ಒತ್ತಡ ಬಂದಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಯಾವುದೇ ಒತ್ತಡಕ್ಕೆ ಮಣಿಯದೆ ಪೊಲೀಸರು ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಮನವಿ ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದಾರೆ.
ಕೊಲೆ ಬೆದರಿಕೆ ಒಡ್ಡಿರುವ ಕಾರ್ತಿಕ್ ಕುಂಬ್ಳೆ ರಾಜಕೀಯವಾಗಿ ಗಡಿ ಜಿಲ್ಲೆಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ 1ನೇ ಆರೋಪಿ, ಬಂಟ್ವಾಳ ಆಸುಪಾಸಿನಲ್ಲಿ ಸುತ್ತಾಡುತ್ತಿದ್ದಾನೆ. ಹಾಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಹಿಂದೆ ನಡೆದ ಶರತ್, ಜಲೀಲ್ ಕರೋಪಾಡಿ, ಹರೀಶ್, ಅಶ್ರಫ್, ನಝೀರ್
ಹತ್ಯೆಗಳ ಆರೋಪಿಗಳು ಯಾರು ಎಂದು ಗಮನಿಸಿ ದರೆ ಅದರಲ್ಲಿ ಎರಡು ಮತೀಯ ಸಂಘಟನೆಗಳಿಗೆ ಸೇರಿದವರಿದ್ದಾರೆ. ಇಂತಹ ಕಾರ್ಯಕರ್ತರ ಪರ ನ್ಯಾಯವಾದಿಗಳು ಕೂಡ ಪಕ್ಷ ನೇಮಿಸಿದವರೇ ಆಗಿ ರುತ್ತಾರೆ. ಕಾಂಗ್ರೆಸ್‌ನ ಯಾರೊಬ್ಬ ಕಾರ್ಯಕರ್ತನೂ ಕೊಲೆ, ಹಲ್ಲೆ ಪ್ರಕರಣದಲ್ಲಿ ಇಲ್ಲ ಎಂದು ಹೇಳಿದರು.
ದೇವರ ದುಡ್ಡು ಉಳಿಸಿದ್ದೇನೆ
ಶಾಲೆಗೆ ಅಕ್ಕಿಯನ್ನು ನಿಲ್ಲಿಸಿದ್ದೇನೆ ಎಂದು ಅಪಪ್ರಚಾರ ಮಾಡಲಾಗಿದೆ. ನಾನು ಅಕ್ಕಿಯನ್ನು ನಿಲ್ಲಿಸಿಲ್ಲ. ಕೊಲ್ಲೂರು ದೇವಸ್ಥಾನದಿಂದ ವರ್ಷಕ್ಕೆ 4 ಕೋಟಿ ರೂ. ಸಲ್ಲಿಕೆಯಾಗುತ್ತಿದ್ದ ದೇವರ ದುಡ್ಡನ್ನು ಉಳಿಸಿದ್ದೇನೆ. ಅದಕ್ಕೆ ಕೊಲ್ಲೂರು ದೇವಿಯ ಆಶೀರ್ವಾದವು ನನ್ನ ಮೇಲಿದೆ ಎಂದರು.
ಲೋಕಸಭಾ ಅಭ್ಯರ್ಥಿಯ ಗೆಲುವು ಸಂಭ್ರಮಾಚರಣೆ ಮೆರವಣಿಗೆಯಲ್ಲಿದ್ದ ತಂಡವು ಬಡಕಬೈಲು ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ ಮನೆಗೆ ಹೋಗಿ ಪುರುಷರು ಮನೆಯಲ್ಲಿ ಇಲ್ಲದ ಸಂದರ್ಭ ಅಂಗಳದಲ್ಲಿ ಪಟಾಕಿ ಸಿಡಿಸಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದೆ. ಇಂಥ ವರ್ತನೆಯನ್ನು ಖಂಡಿಸುತ್ತೇನೆ ಎಂದು ತಿಳಿಸಿದರು.
ಇಡೀ ಪ್ರಕರಣವನ್ನು ಮುಚ್ಚುವಂತೆ ಪೊಲೀಸರ ಮೇಲೆ ಒತ್ತಡ ಹಾಕುತ್ತಿರುವ ಬಗ್ಗೆ ಬಂಟ್ವಾಳ ಉಪ ವಿಭಾಗ ಎಎಸ್‌ಪಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ರಮಾನಾಥ ರೈ ಅಧಿಕಾರದಲ್ಲಿ ಇದ್ದಾಗ ಗಲಾಟೆ ಆಗುತ್ತಿತ್ತು, ಈಗ ಇಲ್ಲ ಎನ್ನುವವರು, ಆಗ ಗಲಾಟೆ ಮಾಡಿದವರು ಯಾರು ಎಂಬುದನ್ನು ಗಮನಿಸಬೇಕು. ಎರಡು ಮತೀಯ ಸಂಘಟನೆಗಳವರು. ಅದರಲ್ಲಿ ಒಂದು ದೇಶದ ರಾಷ್ಟ್ರೀಯ ಪಕ್ಷದ ಅಂಗಸಂಸ್ಥೆ ಎಂದು ತಿಳಿಯಬೇಕು.
-ಬಿ. ರಮಾನಾಥ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.