5 ವರ್ಷ ಕಳೆದೂ ಮುಗಿಯದ ಗ್ರಾಪಂ ಕಟ್ಟಡ ಕಾಮಗಾರಿ
Team Udayavani, May 31, 2019, 11:21 AM IST
ಬಾದಾಮಿ: ಪಟ್ಟದಕಲ್ಲ ಗ್ರಾಮ ಪಂಚಾಯತ್ ಕಟ್ಟಡ.
ಬಾದಾಮಿ: ಐತಿಹಾಸಿಕ ತಾಣ ಪಟ್ಟದಕಲ್ಲ ಗ್ರಾಮ ಪಂಚಾಯತ ಕಟ್ಟಡ ಕಾಮಗಾರಿ ಆರಂಭಗೊಂಡು 5 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.
2014 ಏಪ್ರಿಲ್ 10ರಂದು ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ ಅನುದಾನದಡಿಯಲ್ಲಿ ಪಟ್ಟದಕಲ್ಲ ಗ್ರಾಮ ಪಂಚಾಯತ್ ಕಟ್ಟಡ ನಿರ್ಮಿಸಲು ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿತ್ತು. ಸುಮಾರು ರೂ.16 ಲಕ್ಷ 34 ಸಾವಿರ ಅನುದಾನದಲ್ಲಿ ಗ್ರಾಮ ಪಂಚಾಯತ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ ಎಂದು ಬಾಹ್ಯವಾಗಿ ತಿಳಿಸಿದರೂ ಕಟ್ಟಡದ ನೆಲಹಾಸಿಗೆ ಗ್ರಾನೈಟ್ ಜೋಡಿಸಬೇಕಾಗಿತ್ತು. ಇದರ ಬದಲಾಗಿ ಕಡಪಾ ಕಲ್ಲು ಜೋಡಿಸಿದ್ದಾರೆ. ಕಟ್ಟಡದ ನೀಲನಕ್ಷೆ ಪ್ರಕಾರ ಒಳಗಡೆ ಇನ್ನೂ ಒಂದು ಕೊಠಡಿ ನಿರ್ಮಿಸಬೇಕಾಗಿತ್ತು. ಆದರೆ ಕೊಠಡಿ ನಿರ್ಮಿಸಿಲ್ಲ. ಬಾಗಿಲು, ಕಿಟಕಿ, ಉತ್ತಮ ಗುಣಮಟ್ಟದ ವಸ್ತುಗಳನ್ನು ಜೋಡಿಸುವ ಬದಲಾಗಿ ಕಳಪೆ ಗುಣಮಟ್ಟದ ವಸ್ತು ಜೋಡಿಸಲಾಗಿದೆ. ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ವಾರದೊಳಗೆ ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟನೆ ವಿಳಂಬವಾದರೆ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರ ಗಮನಕ್ಕೆ ತರಲಾಗುವುದು ಎಂದು ಪಟ್ಟದಕಲ್ಲ ಗ್ರಾಮದ ಹಿರಿಯರಾದ ಬಸವರಾಜ ಮೆಣಸಿನಕಾಯಿ, ಮಲ್ಲಯ್ಯ ಪೂಜಾರ, ಸುಭಾಸ ಸುಂಕದ, ಸಿದ್ದಪ್ಪ ತೋಟಗೇರ, ಸುರೇಶ ಸುಂಕದ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.