ಬೋಧಕರಿಗೆ ಡಿಜಿಟಲ್ ತಂತ್ರಜ್ಞಾನ ಮಾಹಿತಿ ಅಗತ್ಯ
Team Udayavani, May 31, 2019, 11:35 AM IST
ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ವ್ಯವಸ್ಥಾಪನ ಪ್ರಾಧ್ಯಾಪಕರ ಸಂಘ ಹಮ್ಮಿಕೊಂಡ ಕಾರ್ಯಾಗಾರವನ್ನು ಕುಲಪತಿ ಪ್ರೊ| ಶಿವಾನಂದ ಹೊಸಮನಿ ಉದ್ಘಾಟಿಸಿದರು.
ಬೆಳಗಾವಿ: ಉಪನ್ಯಾಸಕರಲ್ಲಿ ವೃತ್ತಿ ಬಗ್ಗೆ ಶಿಸ್ತು, ಬದ್ಧತೆ ಮತ್ತು ಪ್ರಾಮಾಣಿಕತೆ ಅಗತ್ಯ. ಶಿಕ್ಷಕ ವೃತ್ತಿಗೆ ನಿವೃತ್ತಿ ಎನ್ನುವುದು ಇಲ್ಲ. ಶಿಕ್ಷಕರು ತಮ್ಮ ನಿವೃತ್ತಿ ನಂತರವೂ ತಮ್ಮ ಜ್ಞಾನವನ್ನು ಇತರರಿಗೆ ನೀಡಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಶಿವಾನಂದ ಹೊಸಮನಿ ಹೇಳಿದರು.
ಮಹಾಂತೇಶ ನಗರದ ಮಹಾಂತ ಸಭಾ ಭವನದಲ್ಲಿ ಎಂಎನ್‌ಅರ್‌ಎ ಶಿಕ್ಷಣ ಮಹಾವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ವ್ಯವಸ್ಥಾಪನಾ ವಿಭಾಗದ ಪ್ರಾಧ್ಯಾಪಕರ ಸಂಘದ ವತಿಯಿಂದ ಗುರುವಾರ ನಡೆದ ಕಲಿಯುವಿಕೆ, ಕಲಿಸುವಿಕೆ ಮತ್ತು ಮೌಲ್ಯಮಾಪನ ಕುರಿತು ಹಮ್ಮಿಕೊಳ್ಳಲಾದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಯುವಿಕೆ ಮತ್ತು ಕಲಿಸುವಿಕೆಗೆ ಎಂದೂ ಕೊನೆ ಎನ್ನುವುದು ಇಲ್ಲ. ಇವು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಇಂದಿನ ಅಧುನಿಕ ಜಗತ್ತಿನಲ್ಲಿ ಉಪನ್ಯಾಸಕರು ಕೂಡ ಡಿಜಿಟಲ್ ತಂತ್ರಜ್ಞಾನ ಬಗ್ಗೆ ತಿಳಿದುಕೊಳ್ಳಬೇಕು. ಆಧುನಿಕ ತಂತ್ರಜ್ಞಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಕಂಪ್ಯೂಟರ್ ಸಾಕ್ಷರತೆ ಎಲ್ಲ ಉಪನ್ಯಾಸಕರಿಗೆ ಅಗತ್ಯವಾಗಿದೆ. ವಿದ್ಯಾರ್ಥಿಗಳ ಅಭಿವೃದ್ಧಿಯಲ್ಲಿ ಪಾಲಕರಷ್ಟೇ ಜವಾಬ್ದಾರಿ ಶಿಕ್ಷಕರ ಮೇಲೆಯೂ ಇದೆ. ಹೀಗಾಗಿ ಶಿಕ್ಷಕರು ಉತ್ತಮ ಮಾರ್ಗದರ್ಶಕರು ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ವ್ಯವಸ್ಥಾಪನೆ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಡಾ| ಚಂದ್ರಶೇಖರ ಗುಡಸಿ ಅಧ್ಯಕ್ಷತೆ ವಹಿಸಿದ್ದರು.
ಬೆಂಗಳೂರಿನ ನ್ಯಾಕ್ ಕೇಂದ್ರದ ಡಾ| ವಿ.ಬಿ. ಹಿರೇಮಠ, ಡಾ| ಎಸ್.ಒ. ಹಲಸಗಿ, ಡಾ| ಸಿ.ವಿ. ಕೊಪ್ಪದ, ಡಾ| ಬಿ.ಎಸ್. ಮಾಳಿ, ಪ್ರೊ| ಡಿ.ಎಸ್. ಗುಡದಿನ್ನಿ, ಸಿಂಡಿಕೇಟ್ ಸದಸ್ಯ ಡಾ| ಎಸ್.ಎಂ. ಜೋಶಿ ಪ್ರೊ| ಬಸವರಾಜ ಗಲಗಲಿ ಸೇರಿದಂತೆ ಇತರರು ಇದ್ದರು.
ಬೆಂಗಳೂರಿನ ನ್ಯಾಕ್ ಕೇಂದ್ರದ ಮೌಲ್ಯಮಾಪಕ ಡಾ| ವಿ.ಬಿ.ಹಿರೇಮಠ ಅವರು ಕಲಿಯುವಿಕೆ, ಕಲಿಸುವಿಕೆ ಮತ್ತು ಮೌಲ್ಯಮಾಪನ ಕುರಿತು ವಿಶೇಷ ಉಪನ್ಯಾಸ ನೀಡಿದರು. ನಿವೃತ್ತ ಪ್ರಾಚಾರ್ಯ ಡಾ| ಜಿ.ಜಿ. ಕರಲಟ್ಟಿ, ಡಾ| ಪ್ರಹ್ಲಾದ ಹುಯಿಲಗೋಳ ಮತ್ತು ಪ್ರೊ| ಪಿ.ಕೆ. ರೆಡ್ಡೇರ ಮತ್ತು ಪಿಎಚ್‌ಡಿ ಪಡೆದ ಡಾ| ಜ್ಯೋತಿ ಬಿರಾದಾರ, ಡಾ| ಎಂ.ಬಿ. ಯಾದಗುಡಿ ಅವರನ್ನು ಸನ್ಮಾನಿಸಲಾಯಿತು. ಡಾ| ಆರ್.ಎಂ. ಪಾಟೀಲ ಸ್ವಾಗತಿಸಿದರು. ಡಾ| ನಿರ್ಮಲಾ ಬಟ್ಟಲ ವಂದಿಸಿದರು. ಡಾ| ವಿದ್ಯಾ ಜೀರಗೆ ನಿರೂಪಿಸಿದರು.
ಡಾ| ರಾಜಶೇಖರ ಹುರಕಡ್ಲಿ, ಪ್ರೊ| ಎಸ್.ಟಿ. ಧನೋಡೆ, ಮಾರುತಿ ಡೊಂಬರ, ಮಂಟೂರ, ಡಾ| ಸುಭಾಸ ಕಚಕರಟ್ಟಿ ಸೇರಿದಂತೆ ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ವಾಣಿಜ್ಯ ಮತ್ತು ವ್ಯವಸ್ಥಾಪನಾ ವಿಭಾಗದ ಉಪನ್ಯಾಸಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Belagavi: ಎಸ್‌ಡಿಎ ರುದ್ರಣ್ಣ ಮೊಬೈಲ್ ಪತ್ತೆ: ಪೊಲೀಸರಿಂದ ತನಿಖೆ ಚುರುಕು
Belagavi; ರುದ್ರಣ್ಣ ಯಡವಣ್ಣವರ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಲಿ: ಹೆಬ್ಬಾಳಕರ್
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.