ಮೋದಿ ಪ್ರಮಾಣ ವಚನ-ಎಲ್ಲೆಡೆ ಸಂಭ್ರಮ

•ಮುಗಿಲು ಮುಟ್ಟಿದ ಮೋದಿ ಪರ ಘೋಷಣೆ•ಸಿಹಿ ಹಂಚಿಕೆ•ಉತ್ತಮ ಆಡಳಿತದ ವಿಶ್ವಾಸ

Team Udayavani, May 31, 2019, 11:37 AM IST

1-June-11

ದಾವಣಗೆರೆ: ಜಯದೇವ ವೃತ್ತದಲ್ಲಿ ಬಿಜೆಪಿ ವಿಜಯೋತ್ಸವ.

ದಾವಣಗೆರೆ: ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಎರಡನೇ ಬಾರಿಗೆ ಎನ್‌ಡಿಎ ಮೈತ್ರಿಕೂಟ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಗಣ್ಯರು, ಅಭಿಮಾನಿಗಳು ಗುರುವಾರ ಸಂಜೆ ಜಯದೇವ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.

ದೇಶದ ಪ್ರಧಾನಿಯಾಗಿ ಸತತ ಎರಡನೇ ಬಾರಿಗೆ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಜಯದೇವ ವೃತ್ತದಲ್ಲಿ ನೆರೆದ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿದರು.

ಮುಗಿಲು ಮುಟ್ಟುವಂತೆ ಭಾರತ್‌ ಮಾತಾ ಕೀ ಜೈ…, ಮೋದಿ… ಮೋದಿ… ಎಂಬ ಘೋಷಣೆ ಕೂಗಿದರು. ಬಿಜೆಪಿ ಮುಖಂಡರು, ಕಾರ್ಯಕರ್ತರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಜಯದೇವ ವೃತ್ತದಲ್ಲಿ ಅನೇಕರಿಗೆ ಪೇಢೆ, ಇತರೆ ಸಿಹಿ ವಿತರಿಸುವ ಮೂಲಕ ಸಂತಸಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್‌. ರಾಜಶೇಖರ್‌, ವಿಶ್ವದ ಬಹು ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಸತತ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭ ಸುವರ್ಣ ಅಕ್ಷರದಲ್ಲಿ ಬರೆದಿಡುವಂತದ್ದು ಎಂದು ಬಣ್ಣಿಸಿದರು.

ಕಳೆದ ಚುನಾವಣೆಯಲ್ಲಿ ದೇಶದ ಜನರು ನರೇಂದ್ರ ಮೋದಿ ಅವರ ಮೇಲೆ ಭಾರೀ ವಿಶ್ವಾಸ ಇಟ್ಟು ಆಯ್ಕೆ ಮಾಡಿದ್ದರು. ಐದು ವರ್ಷಗಳ ಅವಧಿಯಲ್ಲಿ ಮೋದಿ ಅವರು ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದರು ಎಂಬುದಕ್ಕೆ ಸಾಕ್ಷಿ ಎನ್ನುವಂತೆ ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಅವರ ಮೇಲೆ ಮತ್ತೂಮ್ಮೆ ನಂಬಿಕೆ, ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ಖಂಡಿತವಾಗಿಯೂ ಅವರು ಜನರ ಆಶೋತ್ತರಗಳಿಗೆ ಸ್ಪಂದಿಸಿ, ನವ ಭಾರತದ ನಿರ್ಮಾಣ ಮಾಡುವರು ಎಂದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಮಾಜಿ ಶಾಸಕ ಎಂ. ಬಸವರಾಜನಾಯ್ಕ, ಪಿ.ಸಿ. ಶ್ರೀನಿವಾಸ್‌, ಎಚ್.ಸಿ. ಜಯಮ್ಮ, ಎಚ್.ಎನ್‌. ಶಿವಕುಮಾರ್‌, ರಾಜನಹಳ್ಳಿ ಶಿವಕುಮಾರ್‌, ವೈ. ಮಲ್ಲೇಶ್‌, ಧನಂಜಯ ಕಡ್ಲೇಬಾಳು, ಕೆ.ಎನ್‌. ಓಂ.ಕಾರಪ್ಪ, ಎಲ್.ಡಿ. ಗೋಣೆಪ್ಪ, ಹಾಲಮ್ಮ, ಸುಶೀಲಮ್ಮ ಮಂಜುನಾಥ್‌, ಭಾಗ್ಯ ಪಿಸಾಳೆ, ಶಂಕರಗೌಡ ಬಿರಾದಾರ್‌, ಶಿವನಗೌಡ ಪಾಟೀಲ್, ಗೌತಮ್‌ ಜೈನ್‌, ಟಿಂಕರ್‌ ಮಂಜಣ್ಣ, ಅಜ್ಜಂಪುರಶೆಟ್ರಾ ಮೃತ್ಯುಂಜಯ, ಕೆ. ಹೇಮಂತ್‌ಕುಮಾರ್‌, ಕಲ್ಲಿಂಗಪ್ಪ, ವೀರೇಶ್‌ ಪೈಲ್ವಾನ್‌, ಮೋಹನ್‌, ರಾಜು ಇತರರು ಇದ್ದರು.

ಟಾಪ್ ನ್ಯೂಸ್

Udupi: ಹೆದ್ದಾರಿ ಕಾಮಗಾರಿ ಶೀಘ್ರ ನಡೆಸಲು ಸಂಸದ ಕೋಟ ಸೂಚನೆ

Udupi: ಹೆದ್ದಾರಿ ಕಾಮಗಾರಿ ಶೀಘ್ರ ನಡೆಸಲು ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ಸೂಚನೆ

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

Kottigehara: ಔಷಧಿ ಸಿಂಪಡಣೆ ವೇಳೆ ದೋಟಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಮೃತ್ಯು

Kottigehara: ಔಷಧಿ ಸಿಂಪಡಣೆ ವೇಳೆ ದೋಟಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಮೃತ್ಯು

Tragedy: ಕೂಲಿ ಆಸೆಗೆ ತೆಂಗಿನ ಮರ ಏರಿದ್ದ ಅವಿವಾಹಿತ ಯುವಕ ಆಯತಪ್ಪಿ ಬಿದ್ದು ಮೃತ್ಯು

Tragedy: ಕೂಲಿ ಆಸೆಗೆ ತೆಂಗಿನ ಮರ ಏರಿದ್ದ ಅವಿವಾಹಿತ ಯುವಕ ಆಯತಪ್ಪಿ ಬಿದ್ದು ಮೃತ್ಯು

Paris Masters: ರೋಹನ್‌ ಬೋಪಣ್ಣ – ಮ್ಯಾಥ್ಯೂ ಎಬ್ಡೆನ್ ಕ್ವಾರ್ಟರ್‌ಗೆ

Paris Masters: ರೋಹನ್‌ ಬೋಪಣ್ಣ – ಮ್ಯಾಥ್ಯೂ ಎಬ್ಡೆನ್ ಕ್ವಾರ್ಟರ್‌ಗೆ

Test Cricket: 3ನೇ ಟೆಸ್ಟ್‌ನಲ್ಲಿ ಹರ್ಷಿತ್‌ ಆಡಲ್ಲ, ಬುಮ್ರಾ ಕಣಕ್ಕೆ: ನಾಯರ್‌ ಸುಳಿವು

Test Cricket: 3ನೇ ಟೆಸ್ಟ್‌ನಲ್ಲಿ ಹರ್ಷಿತ್‌ ಆಡಲ್ಲ, ಬುಮ್ರಾ ಕಣಕ್ಕೆ: ನಾಯರ್‌ ಸುಳಿವು

Test Bowling Rankings: 3ನೇ ಸ್ಥಾನಕ್ಕೆ ಕುಸಿದ ಬುಮ್ರಾ

Test Bowling Rankings: 3ನೇ ಸ್ಥಾನಕ್ಕೆ ಕುಸಿದ ಬುಮ್ರಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

road-mishap-11

Karkala: ಕಾರ್‌ ಡೋರ್‌ಗೆ ಢಿಕ್ಕಿ ವ್ಯಕ್ತಿಗೆ ಗಾಯ

Udupi: ಹೆದ್ದಾರಿ ಕಾಮಗಾರಿ ಶೀಘ್ರ ನಡೆಸಲು ಸಂಸದ ಕೋಟ ಸೂಚನೆ

Udupi: ಹೆದ್ದಾರಿ ಕಾಮಗಾರಿ ಶೀಘ್ರ ನಡೆಸಲು ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ಸೂಚನೆ

11

Gangolli: ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ಪತ್ತೆ

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

1

Kundapura: ದೋಣಿ ಮಗುಚಿ ಮೀನುಗಾರ ಸಾವು; ಪ್ರಕರಣ ದಾಖಲು

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

road-mishap-11

Karkala: ಕಾರ್‌ ಡೋರ್‌ಗೆ ಢಿಕ್ಕಿ ವ್ಯಕ್ತಿಗೆ ಗಾಯ

Udupi: ಹೆದ್ದಾರಿ ಕಾಮಗಾರಿ ಶೀಘ್ರ ನಡೆಸಲು ಸಂಸದ ಕೋಟ ಸೂಚನೆ

Udupi: ಹೆದ್ದಾರಿ ಕಾಮಗಾರಿ ಶೀಘ್ರ ನಡೆಸಲು ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ಸೂಚನೆ

11

Gangolli: ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ಪತ್ತೆ

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

1

Kundapura: ದೋಣಿ ಮಗುಚಿ ಮೀನುಗಾರ ಸಾವು; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.