ಭೂತಾನ್ ಪ್ರಧಾನಿಯ ತಪ್ಪು ಪೋಟೋ ಬಳಸಿ ಅವಮಾನ: ಮಾಜಿ ಪ್ರಧಾನಿ ಟೀಕೆ
Team Udayavani, May 31, 2019, 4:18 PM IST
ಥಿಂಪು : ಭೂತಾನಿನ ಹಾಲಿ ಪ್ರಧಾನಿಯ ತಪ್ಪು ಫೋಟೋ ಬಳಸಿಕೊಂಡು ದೇಶವನ್ನು ಅವಮಾನಿಸಿರುವ ಕೆಲವು ಭಾರತೀಯ ಟಿವಿ ಚ್ಯಾನಲ್ಗಳನ್ನು ಭೂತಾನ್ ಮಾಜಿ ಪ್ರಧಾನಿ ಶೆರಿಂಗ್ ಟೋಗೇ ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೊಸದಿಲ್ಲಿಗೆ ಭೂತಾನ್ ನ ಹಾಲಿ ಪ್ರಧಾನಿ ಲೋತೇ ಶೆರಿಂಗ್ ಬಂದಿದ್ದರು.
ಇವರ ಆಗಮನವನ್ನು ವರದಿ ಮಾಡಿದ ಕೆಲವು ಚ್ಯಾನಲ್ಗಳು ಹಾಲಿ ಪ್ರಧಾನಿಯ ಫೋಟೋ ಪ್ರದರ್ಶಿಸುವ ಬದಲು ಭೂತಾನಿನ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರರಾಗಿರುವ ಶೆರಿಂಗ್ ವಾಂಗ್ಚುಕ್ ಅವರ ಚಿತ್ರವನ್ನು ಪ್ರದರ್ಶಿಸಿ ಹಾಲಿ ಪ್ರಧಾನಿಯ ಹೆಸರನ್ನು ಕಾಣಿಸಿದ್ದವು. ಇನ್ನು ಕೆಲವು ಚ್ಯಾನಲ್ಗಳು ಟೋಗೇ ಅವರ ಇಮೇಜ್ ಟೆಲಿಕ್ಯಾಸ್ಟ್ ಮಾಡುವಾಗ ಅವರನ್ನು ಹಾಲಿ ಭೂತಾನ್ ಪ್ರಧಾನಿ ಎಂದು ಕರೆದರು.
ಈ ಬಗ್ಗೆ ಟ್ವಿಟರ್ನಲ್ಲಿ ತಮ್ಮ ಬೇಸರ ತೋಡಿಕೊಂಡಿರುವ ಟೋಗೇ, ತಮ್ಮ ಟ್ವೀಟ್ ಜತೆ ಎರಡು ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ಶೆರಿಂಗ್ ಅವರನ್ನು ತಪ್ಪಾಗಿ ಗುರುತಿಸಲಾಗಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.