ಅಂಡಿಂಜೆ ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ


Team Udayavani, Jun 1, 2019, 6:00 AM IST

e-1

ಶಾಲೆಯ ಗೋಡೆಯಲ್ಲಿ ಬಿಡಿಸಲಾದ ಬಸ್ಸಿನ ಆಕರ್ಷಕ ಚಿತ್ರ.

ವೇಣೂರು: ಸರಕಾರ ನಿಗದಿಪಡಿಸಿದ ಸರಕಾರಿ ಪ್ರಾ. ಶಾಲೆಗಳಲ್ಲಿ ಈ ಬಾರಿಯಿಂದಲೇ ಆಂಗ್ಲ ಮಾಧ್ಯಮ ಕಲಿಕೆ ಆರಂಭಿಸಲಾಗಿದೆ. ಅಂಡಿಂಜೆ ಶಾಲೆಯಲ್ಲಿ ಈಗಾಗಲೇ ತರಗತಿ ಪ್ರಾರಂಭಗೊಂಡಿದ್ದು, ಈವರೆಗೆ ಸುಮಾರು 20 ಮಂದಿ ವಿದ್ಯಾರ್ಥಿ ಗಳು ದಾಖಲಾತಿ ಪಡೆದಿದ್ದಾರೆ.

1ನೇ ತರಗತಿಗೆ ದಾಖಲಾತಿ
1ನೇ ತರಗತಿಯಿಂದ 8ನೇ ತರಗತಿ, ಬಳಿಕ ಪ್ರೌಢಶಾಲೆಗಳಲ್ಲಿ 9ರಿಂದ 10ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯಬಹುದಾಗಿದೆ. ಈಗ 1ನೇ ತರಗತಿಗೆ ಮಾತ್ರ ದಾಖಲಾತಿ ಮಾಡಲಾಗಿದ್ದು, ಮುಂದಿನ ಸಾಲಿನಿಂದ 1 ಮತ್ತು 2ನೇ ತರಗತಿ ದಾಖಲಾತಿ ಮಾಡಲಾಗುತ್ತದೆ. ಈಗಾಗಲೇ ಇಬ್ಬರು ಶಿಕ್ಷಕಿಯರಿಗೆ 5ನೇ ತರಗತಿ ತನಕದ 15 ದಿನಗಳ ತರಬೇತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನೀಡಲಾಗಿದೆ.

ತಾ| ನಲ್ಲಿ 6 ಶಾಲೆಗಳು
ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಶಿಕ್ಷಣಕ್ಕೆ ಬೆಳ್ತಂಗಡಿ ತಾ|ನ ಅಂಡಿಂಜೆ ಸಹಿತ ಹಿ.ಪ್ರಾ. ಶಾಲೆ ನಾವೂರು, ಮಾ.ಹಿ.ಪ್ರಾ. ಶಾಲೆ ಬೆಳ್ತಂಗಡಿ, ಹಿ.ಪ್ರಾ. ಶಾಲೆ ಪುಂಜಾಲಕಟ್ಟೆ, ಹಿ.ಪ್ರಾ. ಶಾಲೆ ಮಚ್ಚಿನ, ಹಿ.ಪ್ರಾ. ಶಾಲೆ ಬಡಗಕಾರಂದೂರು ಹೀಗೆ 6 ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.

22ರಿಂದ 3ಕ್ಕೆ ಇಳಿಕೆ
ಅಂಡಿಂಜೆ ಶಾಲೆಯಲ್ಲಿ ಕಳೆದ ಬಾರಿ 1ನೇ ತರಗತಿಗೆ 22 ಮಂದಿ ವಿದ್ಯಾರ್ಥಿಗಳು ದಾಖಲಾಗಿದ್ದರು. ಆದರೆ ಈ ಸಾಲಿನಲ್ಲಿ ಕೇವಲ ಮೂರೇ ಮಂದಿ ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಆಯ್ಕೆ ಮಾಡಿಕೊಂಡಿದ್ದು, ಇದರಿಂದ ಪಾಠ ಮಾಡುವುದು ಶಿಕ್ಷಕರಿಗೆ ಸವಾಲಿನ ಕೆಲಸವಾಗಿದೆ.

ಆಕರ್ಷಕ ಶಾಲೆ
ಅಂಡಿಂಜೆ ಸ.ಉ.ಪ್ರಾ. ಶಾಲೆ 63 ಸಂವತ್ಸರ ಪೂರೈಸಿದ್ದು, ಜಿಲ್ಲೆಯಲ್ಲಿಯೇ ಮಾದರಿ ಗ್ರಂಥಾಲಯ ಹೊಂದಿದೆ. ಶಿಕ್ಷಕ ಶಿವಶಂಕರ ಭಟ್ಟ ಅವರ ಶ್ರಮದಲ್ಲಿ ರಾಜ್ಯಸಭಾ ಸದಸ್ಯೆ ಜಯಶ್ರೀ ಅವರ ಕ್ಷೇತ್ರ ಅನುದಾನದಿಂದ ಗುಬ್ಬಿ ವೀರಣ್ಣ ಶ್ರದ್ಧಾ ಶಾಲಾ ಗ್ರಂಥಾಲಯ 2014-15ರಲ್ಲಿ ರಚಿತಗೊಂಡಿದ್ದು, ಉಷ್ಣ ಮತ್ತು ಗೆದ್ದಲು ನಿರೋಧಕ ಕಟ್ಟಡ ಇದಾಗಿದೆ. 3,500ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ ಇಲ್ಲಿದೆ. ಪ್ರಮುಖ ದಿನಪತ್ರಿಕೆಗಳಲ್ಲದೆ ಮಕ್ಕಳ ಆಂಗ್ಲ ಜ್ಞಾನದ ಅಭಿವೃದ್ಧಿಗಾಗಿ ಆಂಗ್ಲ ದಿನಪತ್ರಿಕೆಗಳನ್ನು ತರಿಸಲಾಗುತ್ತಿದೆ. ಈ ಬಾರಿ 1ನೇ ತರಗತಿ ಬಿಟ್ಟು ಉಳಿದ ತರಗತಿಗಳಿಗೂ ವಿವಿಧ ಖಾಸಗಿ ಶಾಲೆಗಳಿಂದ 6 ಮಂದಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಶಾಲೆಯ ಒಟ್ಟು 8 ತರಗತಿಗಳಲ್ಲಿ ಈ ಬಾರಿ 215 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಸಕ್ತ ಸಾಲಿನಿಂದ ಆಸಕ್ತ ವಿದ್ಯಾರ್ಥಿಗಳಿಗೆ ಸಂಗೀತ ತರಗತಿಗಳನ್ನು ತೆರೆಯಲಾಗಿದೆ.

ಆಕರ್ಷಕ ವರ್ಣಚಿತ್ರ
ದಾನಿಗಳು ಹಾಗೂ ಮಕ್ಕಳ ಹೆತ್ತವ‌ರ ಸಹಕಾರದಿಂದ ರೂ. 2 ಲಕ್ಷ ರೂ. ವೆಚ್ಚದಲ್ಲಿ ಶಾಲೆಯ ಕಟ್ಟಡಕ್ಕೆ ಗುಣಮಟ್ಟದ ಬಣ್ಣ ಬಳಿಯಲಾಗಿದೆ. ಗೋಡೆಯಲ್ಲಿ ಬಿಡಿಸಲಾದ ಕರ್ನಾಟಕ ಸರಕಾರಿ ಸಾರಿಗೆ ಬಸ್‌ನ ಚಿತ್ರ ಆಕರ್ಷಕವಾಗಿ ಮೂಡಿಬಂದಿದ್ದು, ಕಿಟಕಿಯನ್ನು ತೆರೆದರೆ ವಿದ್ಯಾರ್ಥಿಗಳು ಬಸ್ಸಲ್ಲಿ ಕುಳಿತಂತೆ ಭಾಸವಾಗುತ್ತದೆ. ಇನ್ನೊಂದು ಭಾಗದಲ್ಲಿ ಮೆಟ್ರೋ ರೈಲಿನ ಚಿತ್ರ ಬಿಡಿಲಾಗುತ್ತದೆ.

ಬತ್ತಿದ ಬೋರ್‌ವೆಲ್‌, ಪಂ. ನೀರೇ ಆಸರೆ
ಇಲ್ಲಿನ ಕೊಳವೆಬಾವಿ ಕಳೆದ ವರ್ಷವೇ ಬತ್ತಿ ಹೋಗಿದ್ದು, ಇದೀಗ ಗ್ರಾ.ಪಂ. ನೀರೇ ಆಸರೆಯಾಗಿದೆ. ಪ್ರತೀ ದಿನ ಬೆಳಗ್ಗೆ ಶಿಕ್ಷಕರು ಪಂ.ಗೆ ಕರೆ ಮಾಡಿ ನೀರು ಬಿಡಲು ತಿಳಿಸಿ 4 ಸಿಂಟೆಕ್ಸ್‌ಗಳಲ್ಲಿ ತುಂಬಿಸಿಡುತ್ತಾರೆ. ವಿದ್ಯಾರ್ಥಿಗಳಿಗೆ ಬೆಳಗ್ಗೆ ಹಾಲು, ಮಧ್ಯಾಹ್ನ ಬಿಸಿಯಾಟ ಇರುವುದರಿಂದ ಅಧಿಕ ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಶಾಲೆಯಲ್ಲಿ ಕಷ್ಟದಲ್ಲಿ ಸಂಜೆಯವರೆಗೆ ನೀರು ಇರುತ್ತದೆ. ಆದರೆ ಕೆಲವೊಮ್ಮೆ ಮಧ್ಯಾಹ್ನವೇ ಮುಗಿಯುತ್ತದೆ. ಬೆಳಗ್ಗಿನಿಂದಲೇ ಕೆಲವೊಮ್ಮೆ ವಿದ್ಯುತ್‌ ಕೈಕೊಟ್ಟರೆ ಆ ದಿನ ಶಾಲೆಯ ಶಿಕ್ಷಕಿ ಪ್ರೇಮಾ ಕೆ. ಯವರ ಮನೆಗೆ ಬಟ್ಟಲು ಹಿಡಿದು ರಸ್ತೆಯಲ್ಲಿ ಸರದಿ ಸಾಲಿನಲ್ಲಿ ತೆರಳುತ್ತಾರೆ.

 ಪಂ.ನಿಂದ ಉತ್ತಮ ಸ್ಪಂದನ
ದಾನಿಗಳ, ಮಕ್ಕಳ ಹೆತ್ತವರ ಸಹಕಾರದಿಂದ ಶಾಲೆ ಸುಸಜ್ಜಿತ ವಾಗಿದೆ. ಆದರೆ ನೀರಿನ ಸಮಸ್ಯೆ ಇದೆ. ನೂತನ ಕೊಳವೆಬಾವಿಗೆ ಈ ಹಿಂದಿನ ಶಾಸಕರಿಗೂ ಹಾಲಿ ಶಾಸಕರಿಗೂ ಸ್ಥಳೀಯ ಜನಪ್ರತಿನಿಧಿಗಳಿಗೂ ಮನವಿ ಮಾಡಲಾಗಿದೆ. ಕರೆ ಮಾಡಿದಾಕ್ಷಣ ಸ್ಪಂದಿಸುವ ಸ್ಥಳೀಯ
ಪಂ.ನಿಂದಾಗಿ ಮಕ್ಕಳಿಗೆ ಈವರೆಗೆ ನೀರಿನ ಸಮಸ್ಯೆ ಆಗಿಲ್ಲ.
 - ಗುರುಮೂರ್ತಿ, ಮುಖ್ಯ ಶಿಕ್ಷಕರು

 ಗುಣಮಟ್ಟದ ಶಿಕ್ಷಣ
1ನೇ ತರಗತಿ ಮಕ್ಕಳಿಗೆ ಆಂಗ್ಲ ಶಿಕ್ಷಣದ ಬೋಧಿಸಲು ವಿಶೇಷ ಕಲೆ ಬೇಕಾಗುತ್ತದೆ. ಅದಕ್ಕಾಗಿ ಮಂಗಳೂರಿನಲ್ಲಿ 15 ದಿನಗಳ ತರಬೇತಿಯನ್ನು ಇಲಾಖೆಯಿಂದ ನೀಡಲಾಗಿದೆ. ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತೇವೆ.
 - ಪ್ರೇಮಾ ಕೆ., ಆಂಗ್ಲ ತರಗತಿಗೆ ತರಬೇತಿ ಪಡೆದ ಶಿಕ್ಷಕಿ

ಟಾಪ್ ನ್ಯೂಸ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

accident

Vitla: ರಿಕ್ಷಾ- ಬೈಕ್‌ ಢಿಕ್ಕಿ; ಮೂವರಿಗೆ ಗಾಯ

accident

Bantwal: ಕೆಎಸ್‌ಆರ್‌ಟಿಸಿ ಬಸ್‌-ಬೈಕ್‌ ಢಿಕ್ಕಿ; ದಂಪತಿಗೆ ಗಾಯ

Kukke Shree Subrahmanya Temple: ಮೂಲ ಮೃತ್ತಿಕಾ ಪ್ರಸಾದ ವಿತರಣೆ

Kukke Shree Subrahmanya Temple: ಮೂಲ ಮೃತ್ತಿಕಾ ಪ್ರಸಾದ ವಿತರಣೆ

4

Belthangady: ನೇಣು ಬಿಗಿದು ವ್ಯಕ್ತಿ ಆತ್ಮಹ*ತ್ಯೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.