ದೇವರ ಸೇವೆ ಸಲ್ಲಿಸಿ ಇಹಲೋಕ ತ್ಯಜಿಸಿದ “ನಂದಿ’
Team Udayavani, Jun 1, 2019, 6:00 AM IST
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ಕಾರ್ಯದಲ್ಲಿ ಸೇವೆ ನೀಡಿದ ನಂದಿ ಹೆಸರಿನ ಬಸವ ಗುರುವಾರ ಸಂಜೆ ಹೃದಯಾಘಾತದಿಂದ ಕೊನೆಯುಸಿರೆಳೆದಿದೆ. ಸುಮಾರು 16 ವರ್ಷಗಳ ಹಿಂದೆ ಈ ಬಸವನನ್ನು ಮಹಾಲಿಂಗೇಶ್ವರ ದೇವಾಲಯಕ್ಕೆ ತರಲಾಗಿತ್ತು. ಅಲ್ಲಿಂದ ದೇವಾಲಯ ಉತ್ಸವಗಳಲ್ಲಿ ನಿತ್ಯ ಪಾಲ್ಗೊಳ್ಳುತ್ತಿದ್ದ ನಂದಿಗೆ 2-3 ವರ್ಷಗಳಿಂದ ಅನಾರೋಗ್ಯ ಬಾಧಿಸಿತ್ತು. ಆಗಾಗ ಚಿಕಿತ್ಸೆಯನ್ನೂ ನೀಡಲಾಗಿತ್ತು. ಆದರೆ ಗುರುವಾರ ಸಂಜೆ ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ವಿಧಿ ವಶವಾಗಿದೆ.
ಪೂಜೆಯ ವೇಳೆ ಬರುತ್ತಿದ್ದ
ದೊಡ್ಡ ಗಾತ್ರವನ್ನು ಹೊಂದಿದ್ದರೂ ಸೌಮ್ಯ ಸ್ವಭಾವದ ನಂದಿ ನಿತ್ಯ ಮಧ್ಯಾಹ್ನದ ಪೂಜೆಯ ಸಂದರ್ಭದಲ್ಲಿ ದೇವಸ್ಥಾನದ ಮುಂಭಾಗಕ್ಕೆ ಬಂದು ವೀಕ್ಷಿಸುವುದು ಭಕ್ತರನ್ನು ಸೆಳೆಯುತ್ತಿತ್ತು.
ಗುರುವಾರವೂ ಬಂದಿತ್ತು
ನಂದಿಯ ಗಾಂಭೀರ್ಯದ ನಡಿಗೆ ಭಕ್ತರಿಗೆ ಪ್ರಿಯವಾಗಿತ್ತು. ಗುರುವಾರ ಮಧ್ಯಾಹ್ನ ಪೂಜೆ ವೇಳೆಯೂ ದೇವಸ್ಥಾನದ ಮುಂಭಾಗ ಬಂದು ದೇವರ ಪೂಜೆ ವೀಕ್ಷಿಸಿ ತೆರಳಿತ್ತು ಎನ್ನುತ್ತಾರೆ ದೇವಾಲಯದ ಸಿಬಂದಿ.
ವಿಶ್ರಾಂತಿಯಲ್ಲಿದ್ದ
ಸುಮಾರು 18 ವರ್ಷದ ಪ್ರಾಯದ ನಂದಿಗೆ ಎರಡು ವರ್ಷಗಳಿಂದ ಅನಾರೋಗ್ಯದ ಹಿನ್ನೆಲೆಯಲ್ಲಿ ಉತ್ಸವಗಳಲ್ಲಿ ಪಾಲ್ಗೊಳ್ಳದೆ ವಿಶ್ರಾಂತಿ ನೀಡಲಾಗಿತ್ತು. 2 ವರ್ಷಗಳ ಹಿಂದೆ ಸಜಿಪದಿಂದ ತರಲಾದ ಇನ್ನೊಂದು ಬಸವನನ್ನು ಬಳಸಲಾಗುತ್ತಿತ್ತು. ನಂದಿ ಗುರುವಾರ ರಾತ್ರಿ ದೇವರ ಪೂಜೆಯ ಬಳಿಕ ಹೃದಯಾಘಾತಕ್ಕೊಳಗಾಗಿ ಇಹಲೋಕ ಬಿಟ್ಟು ಶಿವನ ಪಾದ ಸೇರಿದೆ. ದೇವಾಲಯದ ಐತಿಹಾಸಿಕ ದೇವರಮಾರು ಗದ್ದೆಯಲ್ಲಿರುವ ಬಸವ ಮಾಯವಾದ ಜಾಗದಲ್ಲಿ ಸಕಲ ಗೌರವದೊಂದಿಗೆ ನಂದಿಯ ದಫನ ಕಾರ್ಯ ನಡೆಸಲಾಗಿದೆ ಎಂದು ದೇವಾಲಯದ ಸಿಬಂದಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.