ಕುಡಿವ ನೀರಿಗಾಗಿ ಬೊಬ್ಬೆ ಚಳವಳಿ
•ಬೇಡಿಕೆ ಈಡೇರದಿದ್ದರೆ ಪ್ರತ್ಯೇಕ ರಾಜ್ಯದ ಹೋರಾಟ •ಸ್ಥಳಕ್ಕೆ ಬಾರದ ಜನಪ್ರತಿನಿಧಿಗಳು: ಆರೋಪ
Team Udayavani, Jun 1, 2019, 1:02 PM IST
ಅಥಣಿ: ಕೃಷ್ಣಾ ನದಿ ನೀರಿನ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ಕೃಷ್ಣಾ ಹೋರಾಟ ಸಮಿತಿ ಸದಸ್ಯರು ಶುಕ್ರವಾರ ಬೊಬ್ಬೆ ಚಳವಳಿ ನಡೆಸಿದರು.
ಅಥಣಿ: ಕೃಷ್ಣಾ ನದಿ ನೀರಿನ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ನಡೆಸುತ್ತಿರುವ ಕೃಷ್ಣಾ ಹೋರಾಟ ಸಮಿತಿ ಸದಸ್ಯರ ಅಹೋರಾತ್ರಿ ಧರಣಿ 12 ದಿನ ಪೂರೈಸಿದ್ದು, ಶುಕ್ರವಾರ ಬೊಬ್ಬೆ ಚಳವಳಿ ನಡೆಸಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನೆಯಲ್ಲಿ ನ್ಯಾಯವಾದಿ ಎಸ್.ಎಸ್. ಪಾಟೀಲ ಮಾತನಾಡಿ, ಉತ್ತರ ಕರ್ನಾಟಕದ ಪ್ರಮುಖ ಕೃಷ್ಣಾ ನದಿ ಬತ್ತಿ ಹೋಗಿ 2 ತಿಂಗಳು ಕಳೆದರೂ ಕೂಡ ಇಲ್ಲಿಯವರೆಗೂ ರಾಜ್ಯದ ಮುಖ್ಯಮಂತ್ರಿಗಳಾಗಲಿ, ಜಲಸಂಪನ್ಮೂಲ ಸಚಿವರಾಗಲಿ ಅಥವಾ ಕೃಷ್ಣಾ ನದಿ ಪ್ರದೇಶಕ್ಕೆ ಒಳಪಡುವ ಶಾಸಕರುಗಳು ಯಾವುದೇ ರೀತಿ ಸ್ಪಂದಿಸಿಲ್ಲ. ಒಂದು ವೇಳೆ ಇಂತಹ ಸಮಸ್ಯೆ ಮಂಡ್ಯ ಅಥವಾ ಮೈಸೂರು ಭಾಗದಲ್ಲಿ ನಡೆದಿದ್ದರೆ ಇಷ್ಟೊತ್ತಿಗಾಗಲೇ ರಾಜ್ಯದ ಮುಖ್ಯಮಂತ್ರಿ ಸಮಸ್ಯೆ ಬಗೆ ಹರಿಸಲು ಹರ ಸಾಹಸ ಪಡುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿನಿಂದ ಕುಡಿಯುವ ನೀರಿನ ಗೋಳು ಸಹಿಸಿಕೊಂಡ ಈ ಭಾಗದ ಜನ 12 ದಿನಗಳಿಂದ ಕೃಷ್ಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದರೂ ರಾಜಕಾರಣಿಯೂ ಸ್ಪಂದಿಸದೇ ಇರುವುದು ವಿಷಾದಕರವಾಗಿದೆ ಎಂದರು.
ಕಾವೇರಿ ನದಿ ಹೋರಾಟದಲ್ಲಿ ಕಾವೇರಿ ನಮ್ಮದು ಎನ್ನುವ ಭಾವದಿಂದ ಉತ್ತರ ಕರ್ನಾಟಕ ಭಾಗದವರಾದ ನಾವೂ ಕೂಡ ಭಾಗವಹಿಸುತ್ತೇವೆ. ಆದರೆ ಈ ಭಾಗದ ಕೃಷ್ಣಾ ನದಿ ಅಥವಾ ನೀರಿನ ಸಮಸ್ಯೆ ತಲೆ ದೋರಿದಾಗ ಮೈಸೂರು ಮತ್ತು ಮಂಡ್ಯ ಭಾಗದವರು ಹೋರಾಟ ತಮಗೆನು ಸಂಬಂಧ ಇಲ್ಲ ಎನ್ನುವಂತೆ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಇದೇ ರೀತಿ ತಾರತಮ್ಯ ಮುಂದುವರೆದರೆ ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ವಿಜಯಕುಮಾರ ಅಡಹಳ್ಳಿ, ಕರವೇ ಅಧ್ಯಕ್ಷ ಬಸನಗೌಡಾ ಪಾಟೀಲ, ರಮೇಶ ಬಾದವಾಡಗಿ, ಪರಶುರಾಮ ನಂದೇಶ್ವರ, ದೀಪಕ ಸಿಂಧೆ, ಮಹಾಂತೇಶ ಬಾದವಾಡಗಿ, ರಾಕೇಶ ಮೈಗೂರ, ಹಣಮಂತ ಕಂಠಿಕರ, ಫಿರೋಜ ಕರೋಲಿ, ಲೆನಿನ್ ಹಳಿಂಗಳಿ, ಸುನೀಲ ಸಂಕ, ಎಸ್.ಸಿ. ನಾಯಿಕ, ಪಿ.ಜಿ. ಬಿಸಗುಪ್ಪಿ, ಪರಶುರಾಮ ತುಬಚಿ, ಪ್ರಕಾಶ ಕಾಂಬಳೆ, ಪ್ರಶಾಂತ ತೊಡಕರ, ಸುಭಾಶ ಕಾಂಬಳೆ, ಕಲ್ಲೇಶ ಮಡ್ಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.