ಸಪ್ತಪದಿ ತುಳಿದ 21 ಜೋಡಿ
ಆಶಾಕಿರಣ ಶಿಕ್ಷಣ ಸಂಸ್ಥೆ ಸಾಮಾಜಿಕ ಸೇವೆ ಮಾದರಿ: ರಾಜಾ ವೆಂಕಟಪ್ಪ ನಾಯಕ
Team Udayavani, Jun 1, 2019, 1:19 PM IST
ಮಾನ್ವಿ: ಡಾ| ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಜಯಂತಿ ಅಂಗವಾಗಿ ಆಶಾಕಿರಣ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ನವಜೀವನಕ್ಕೆ ಪಾದಾರ್ಪಣೆ ಮಾಡಿದ ದಂಪತಿ.
ಮಾನ್ವಿ: ಡಾ| ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಜಯಂತ್ಯುತ್ಸವ ಪ್ರಯುಕ್ತ ಪಟ್ಟಣದ ಆಶಾಕಿರಣ ಸಂಸ್ಥೆಯಿಂದ ಅಂಬೇಡ್ಕರ್ ನಗರದ ಜಡೆಬಸಪ್ಪ ದೇಗುಲದ ಎದುರು ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ 21 ಜೋಡಿಗಳು ನವಜೀವನಕ್ಕೆ ಪಾದಾರ್ಪಣೆ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ರಾಜಾ ವೆಂಕಟಪ್ಪ ನಾಯಕ, ಸಾಮೂಹಿಕ ವಿವಾಹಗಳು ಬಡ ಕುಟುಂಬಗಳಿಗೆ ಅನುಕೂಲವಾಗಿವೆ. ಇದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದರು.
ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಬರ ಆವರಿಸಿದ್ದು. ಆರ್ಥಿಕ ಸಂಕಷ್ಟದಿಂದ ಬಡ ಕುಟುಂಬಗಳ ಪಾಲಕರು ಮಕ್ಕಳ ಮದುವೆ ನಡೆಸಲು ತೊಂದರೆ ಪಡುವಂತಾಗಿದೆ. ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮಗಳಿಂದ ಬಡ ವರ್ಗದ ಜನರಿಗೆ ಅನುಕೂಲವಾಗಿದೆ. ಆಶಾಕಿರಣ ಶಿಕ್ಷಣ ಸಂಸ್ಥೆ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದರು.
ಶಾಸಕ ರಾಜಾವೆಂಕಟಪ್ಪ ನಾಯಕ ನವ ಜೋಡಿಗಳಿಗೆ ತಾಳಿ ವಿತರಿಸುವ ಮೂಲಕ ನೂತನ ವಧುವರರಿಗೆ ಶುಭ ಕೋರಿದರು. ಇದಕ್ಕೂ ಮುನ್ನ ಪಟ್ಟಣದ ಸೇಂಟ್ ಮೇರಿಸ್ ಚರ್ಚ್‌ನಿಂದ ಜಡೆ ಬಸಪ್ಪ ಗುಡಿಯವರೆಗೆ ಅಂಬೇಡ್ಕರ್ ಹಾಗೂ ಬಾಬು ಜಗನಜೀವನರಾಂ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಕಾಂತ ಶಿವಪುರೆ, ಆಶಾಕಿರಣ ಸಂಸ್ಥೆ ಜಂಟಿ ಕಾರ್ಯದರ್ಶಿ ಜೆ.ಎಚ್.ದೇವರಾಜ, ಅಧ್ಯಕ್ಷ ಪಿ.ರವಿಕುಮಾರ ವಕೀಲರು, ಜೆಡಿಎಸ್ ಹಿರಿಯ ಮುಖಂಡ ಲೋಕರೆಡ್ಡಿ ಸಿರವಾರ, ಯುವ ಮುಖಂಡ ರಾಜಾರಾಮಚಂದ್ರ ನಾಯಕ, ಜಿಪಂ ಸದಸ್ಯ ಕಿರಿಲಿಂಗಪ್ಪ ಕವಿತಾಳ, ಜಿಪಂ ಮಾಜಿ ಸದಸ್ಯ ಸಿದ್ರಾಮಪ್ಪ ನೀರಮಾನ್ವಿ, ಎಪಿಎಂಸಿ ಸದಸ್ಯ ಹನುಮೇಶ ಮದ್ಲಾಪುರ, ತಾಪಂ ಸದಸ್ಯ ಶಾಂತಪ್ಪ ಕಪಗಲ್, ಹಿರಿಯ ವಕೀಲ ಗುಮ್ಮ ಬಸವರಾಜ, ಪತ್ರೆಪ್ಪ, ಮೂಕಪ್ಪ ಕಟ್ಟಿಮನಿ, ಸೈಯ್ಯದ್ ತನ್ವೀರ್ ಉಲ್ ಹಸನ್, ವನಿತಾ ಶಿವರಾಜ ನಾಯಕ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.