ಪಹೇಲ್ವಾನ್ ಚಾಳ್‌ನ ಶ್ರೀ ಶನಿಮಹಾತ್ಮ ಮಂದಿರ ಜೂ. 2 ರಿಂದ ಶನಿಜಯಂತಿ
Team Udayavani, Jun 1, 2019, 1:21 PM IST
ಮುಂಬಯಿ: ಖಾರ್ ಪೂರ್ವದ ಸಾಯಿಬಾಬಾ ರಸ್ತೆಯಲ್ಲಿನ ಜವಹಾರ್‌ನಗರ್‌ನ ಪಹೇಲ್ವಾನ್ ಚಾಳ್‌ನಲ್ಲಿ ತುಳು ಕನ್ನಡಿಗರ ಆಡಳಿತತ್ವದಲ್ಲಿ ಕಳೆದ ಸುಮಾರು ಐದುವರೆ ದಶಕಗಳಿಂದ ಮುನ್ನಡೆದು ಬಂದಿರುವ ಶ್ರೀ ಶನಿಮಹಾತ್ಮ ಸೇವಾ ಸಮಿತಿಯಿಂದ ಸದ್ಯ ಸೇವಾನಿರತ ಸಾಯಿಧಾಮ್ ಬಿಲ್ಡಿಂಗ್‌ನಲ್ಲಿ ಜೂ. 2 ರಿಂದ ಶನಿದೇವರ ಜನ್ಮ ದಿನಾಚರಣೆ ಹಾಗೂ ಸಾಮೂಹಿಕ ಶನಿಪೂಜೆ ಮತ್ತು ಶನಿದೇವರ ಸ್ವರ್ಣ ಭಾವಚಿತ್ರ ಪ್ರತಿಷ್ಠಾಪನೆ ನಡೆಯಲಿದೆ.
ಶನೈಶ್ವರ ಜನ್ಮ ದಿನಾಚರಣೆಯ ಅಂಗವಾಗಿ ಅಂದು ಮಂದಿರದಲ್ಲಿ ಪುರೋಹಿತ ಶ್ರೀನಿವಾಸ ಜೋಯಿಸರ ಪೌರೋಹಿತ್ಯದಲ್ಲಿ ಚಿನ್ನದ ಶನಿದೇವರ ಭಾವಚಿತ್ರ, ಜಗನ್ಮಾತೆ, ಗುರು ರಾಘವೇಂದ್ರ ಸ್ವಾಮಿ ಹಾಗೂ
ಮಹಾಗಣಪತಿ ದೇವರ ಬೆಳ್ಳಿಯ ಭಾವಚಿತ್ರವನ್ನು ಪ್ರತಿಷ್ಠಾಪಿಸಲಾಗುವುದು.
ಜೂ. 2 ರಂದು ಬೆಳಗ್ಗೆ 9 ರಿಂದ ತೋರಣ ಮುಹೂರ್ತ, ಪ್ರಾರ್ಥನೆ, ಶನಿಶಾಂತಿ ಪೂಜೆ, ಸಪ್ತಸಿದ್ಧಿ, ವಾಸ್ತು ಪೂಜೆ, ಸಂಜೆ 6 ರಿಂದ ರಾತ್ರಿ 11 ರವರೆಗೆ ರಕ್ಷಹೋಮ, ಅಧಿವಾಸ ಪೂಜೆ ನಡೆಯಲಿದೆ.
ಜೂ. 3ರಂದು ಬೆಳಗ್ಗೆ 4 ರಿಂದ ಗಣಹೋಮ, ಕಲಶ ಪ್ರತಿಷ್ಠೆ ಬಿಂಬ ಪ್ರತಿಷ್ಠೆ ಕಲಶ ಅಭಿಷೇಕ ಹಾಗೂ ಸಮಿತಿಯ ಜತೆ ಕಾರ್ಯದರ್ಶಿ ರಮೇಶ್ ಪೂಜಾರಿ ಅವರ ಧರ್ಮಪತ್ನಿ ವನಿತಾ ಪೂಜಾರಿ ಯಜಮಾನಿಕೆಯಲ್ಲಿ ಮಹಾಪೂಜೆ ಜರಗಲಿದೆ.
ಅಪರಾಹ್ನ 4 ರಿಂದ ಶನಿದೇವರ ಜನ್ಮ ದಿನಾಚಣೆಯ ಪರವಾಗಿ ಸಮಿತಿಯ ಉಪಾಧ್ಯಕ್ಷರಾದ ದೇವೇಂದ್ರ ವಿ. ಬಂಗೇರ ಮತ್ತು ತಾರಾ ದೇವೇಂದ್ರ ಬಂಗೇರ ದಂಪತಿಯ ಯಜಮಾನಿಕೆ ಹಾಗೂ ಸಮಿತಿ ಅರ್ಚಕ ನಾಗೇಶ್ ಸುವರ್ಣ ಪೌರೋಹಿತ್ಯದಲ್ಲಿ ಕಲಶ ಪ್ರತಿಷ್ಠಾಪನೆ ಜರಗಲಿದೆ. ಸಂಜೆ 5 ರಿಂದ ಭಜನೆ, 7.30 ರಿಂದ ರಾತ್ರಿ 9 ರವರೆಗೆ ಗ್ರಂಥ ಪಾರಾಯಣ, ರಾತ್ರಿ 9 ರಿಂದ ಮಹಾ ಮಂಗಳಾರತಿ, ರಾತ್ರಿ 9.30 ರಿಂದ ತೀರ್ಥಪ್ರಸಾದ ವಿತರಣೆ ಜರಗಲಿದೆ ಎಂದು ಸಮಿತಿಯ ಗೌರವ ಕಾರ್ಯಾಧ್ಯಕ್ಷ ಶ್ರೀಧರ್ ಜೆ. ಪೂಜಾರಿ, ಅಧ್ಯಕ್ಷ ಶಂಕರ್ ಕೆ. ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್ ಕೆ. ಹೆಜ್ಮಾಡಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಾ. ತುಂಬೆ ಮೊಯ್ದೀನ್ ಅವರಿಗೆ ಪ್ರತಿಷ್ಠಿತ ಗ್ಲೋಬಲ್ ವಿಷನರಿ ಎನ್‌ಆರ್‌ಐ ಪ್ರಶಸ್ತಿ
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Jimmy Carter Life Journey: ಜಿಮ್ಮಿ ಕಾರ್ಟರ್- ಮಾನವೀಯತೆ, ಶಾಂತಿಯ ಶಿಲ್ಪಿ
ವೈಕುಂಠ ಏಕಾದಶಿ: ಅಮೆರಿಕ ದೇವಸ್ಥಾನದಲ್ಲಿ ಆಚರಣೆ
MUST WATCH
ಹೊಸ ಸೇರ್ಪಡೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.