ಗಣಿ ಬಾಧಿತ ಪ್ರದೇಶ ಕಾಯಕಲ್ಪ ಸವಾಲು

ಆರ್‌ ಆ್ಯಂಡ್‌ ಆರ್‌ ಅನುಷ್ಠಾನ ಕುರಿತು ಸಚಿವ ಜೋಶಿ ಬಗ್ಗೆ ಆಶಾಭಾವನೆ

Team Udayavani, Jun 2, 2019, 9:44 AM IST

2-June-1

ಅಮರೇಗೌಡ ಗೋನವಾರ
ಹುಬ್ಬಳ್ಳಿ:
ಗಣಿಗಾರಿಕೆ ಬಾಧಿತ ಪ್ರದೇಶಗಳ ಜನ-ಜನುವಾರು, ಕೃಷಿ ಹಾಗೂ ಜಲಮೂಲಗಳ ಹಾನಿ ಹಿನ್ನೆಲೆಯಲ್ಲಿ ಪುನರ್‌ನಿರ್ಮಾಣ, ಪುನರ್ವಸತಿ(ಆರ್‌ಆ್ಯಂಡ್‌ಆರ್‌)ಪರಿಣಾಮಕಾರಿ ಅನುಷ್ಠಾನ ನಿಟ್ಟಿನಲ್ಲಿ ಉತ್ತರ ಕರ್ನಾಟಕದವರೇ ಆದ ಪ್ರಹ್ಲಾದ ಜೋಶಿಯವರು ಕೇಂದ್ರದ ನೂತನ ಗಣಿ ಮತ್ತು ಕಲ್ಲಿದ್ದಲು ಸಚಿವರಾಗಿರುವ ಹಿನ್ನೆಲೆಯಲ್ಲಿ ನಿರೀಕ್ಷೆ-ಆಶಾಭಾವನೆ ಹೆಚ್ಚಿದೆ.

ಅದರಲ್ಲೂ ಬಳ್ಳಾರಿ ಭಾಗದಲ್ಲಿ ಗಣಿಗಾರಿಯಿಂದ ಬಾಧಿತ ಹಳ್ಳಿ-ಪ್ರದೇಶದಲ್ಲಿ ಸುಪ್ರೀಂಕೋರ್ಟ್‌ ಸೂಚನೆಯಂತೆ ಆರ್‌ ಆ್ಯಂಡ್‌ ಆರ್‌ ಅನುಷ್ಠಾನಕ್ಕೆ ಸಮರ್ಪಕ ಕ್ರಮ ಕೈಗೊಳ್ಳುವರು ಎಂಬ ನಿರೀಕ್ಷೆ ಜನರದ್ದಾಗಿದೆ. ಗಣಿಗಾರಿಕೆಯಿಂದಾಗಿ ಹೆಚ್ಚು ಸಮಸ್ಯೆಗೀಡಾದ ಪ್ರದೇಶವಾದ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಹೊಸಪೇಟೆ ಹಾಗೂ ಸಂಡೂರು (ಬಿಎಚ್ಎಸ್‌)ತಾಲೂಕುಗಳ ಅನೇಕ ಹಳ್ಳಿಗಳಲ್ಲಿ ಗಣಿಗಾರಿಕೆ, ಧೂಳು, ಗಣಿತ್ಯಾಜ್ಯ ಇನ್ನಿತರ ಕಾರಣಗಳಿಂದ ಜನರ ಆರೋಗ್ಯ, ಕೃಷಿ, ಪಶುಸಂಪತ್ತು, ಪರಿಸರ, ಅಂತರ್ಜಲ, ಜಲಮೂಲಗಳು ಇನ್ನಿತರ ವಿಷಯಗಳ ಮೇಲೆ ಹಲವು ರೀತಿಯ ಪರಿಣಾಮ-ಸಮಸ್ಯೆಗಳು ಉಂಟಾಗಿವೆ.

ಸಂಡೂರು ತಾಲೂಕುವೊಂದರಲ್ಲೇ ಸುಮಾರು 132 ಗ್ರಾಮಗಳು, ಹೊಸಪೇಟೆ ತಾಲೂಕಿನಲ್ಲಿ ಸುಮಾರು 25-30 ಗ್ರಾಮಗಳು, ಬಳ್ಳಾರಿ ತಾಲೂಕಿನಲ್ಲಿ 15-20 ಗ್ರಾಮಗಳು ಗಣಿಗಾರಿಕೆಗೆ ತುತ್ತಾಗಿವೆ. ಗಣಿಗಾರಿಕೆ ಧೂಳು, ಇನ್ನಿತರ ಕಾರಣದಿಂದಾಗಿ ಜನರು ಅಸ್ತಮಾ, ದಮ್ಮು, ಕ್ಷಯ, ಮೂತ್ರಪಿಂಡ ವೈಫ‌ಲ್ಯ ಇನ್ನಿತರ ವ್ಯಾಧಿಗಳಿಂದ ಸಮಸ್ಯೆಗೀಡಾಗಿದ್ದರೆ, ಜಾನುವಾರುಗಳೂ ಸಹ ಸಮಸ್ಯೆ ಎದುರಿಸುವಂತಾಗಿದೆ. ಗಣಿಧೂಳು ಹಾಗೂ ತ್ಯಾಜ್ಯ ಕೃಷಿಯ ಮೇಲೂ ಪರಿಣಾಮ ಬೀರಿದೆ. ಅಂತರ್ಜಲ ಕುಸಿದಿದೆ, ಕಲುಷಿತಗೊಂಡಿದೆ, ಕೆರೆಗಳು ಹೂಳು ತುಂಬಿಕೊಂಡಿವೆ. ಅರಣ್ಯ ಪ್ರದೇಶ ಹಾನಿಗೀಡಾಗಿದೆ, ಗಣಿತ್ಯಾಜ್ಯ ಸಂಗ್ರಹದ ಗೋಡೆ ಒಡೆದು ಕೃಷಿ ಜಮೀನಿನಲ್ಲಿ ಹರಿದಿದ್ದರಿಂದ ವಿಶೇಷವಾಗಿ ಸಂಡೂರು ತಾಲೂಕಿನ ಭುಜಂಗ ನಗರ ಸೇರಿದಂತೆ ಕೆಲವೆಡೆ ಇಂದಿಗೂ ಆ ಭೂಮಿ ನೀರು ಇಂಗುವ ಸ್ಥಿತಿ ಕಳೆದುಕೊಂಡಿದ್ದು, ಕೃಷಿಗೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ.

ಗಣಿಗಾರಿಕೆಯಿಂದ ಬಾಧಿತವಾದ ಗ್ರಾಮ-ಪ್ರದೇಶಗಳಲ್ಲಿ ಸಮರ್ಪಕ ಆರ್‌ ಆ್ಯಂಡ್‌ ಆರ್‌ ಕೈಗೊಳ್ಳಬೇಕೆಂದು ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ. ಇದರ ಅನುಷ್ಠಾನಕ್ಕಾಗಿ ಅಂದಾಜು 1500-1800 ಕೋಟಿ ರೂ. ಹಣವಿದೆ. ಮುಖ್ಯವಾಗಿ ಜನರ ಬದುಕು ಸುಧಾರಣೆ ಹಾಗೂ ಆರೋಗ್ಯ, ಪರಿಸರ , ಜಲಮೂಲಗಳ ಸುಧಾರಣೆಗೆ ಮೊದಲ ಆದ್ಯತೆ ನೀಡಲು ಸುಪ್ರೀಂಕೋರ್ಟ್‌ ಸೂಚಿಸಿದ್ದು, ಅಗತ್ಯ ಹಣವಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಜಾರಿಯಾಗುತ್ತಿಲ್ಲ ಎಂಬ ಕೊರಗು ಬಿಎಚ್ಎಸ್‌ ಏರಿಯಾದ ಜನರದ್ದಾಗಿದೆ.

ಇನ್ನು ಆರ್‌ಆ್ಯಂಡ್‌ಆರ್‌ ಅನುಷ್ಠಾನ ನಿಟ್ಟಿನಲ್ಲಿ ರಾಜ್ಯ ಸರಕಾರದ ಜವಾಬ್ದಾರಿಯೂ ಅಧಿಕವಾಗಿದೆ. ಮುಖ್ಯವಾಗಿ ಜಿಲ್ಲಾಧಿಕಾರಿ, ತಹಶೀಲ್ದಾರ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ, ಜಲಾನಯನ, ಆರೋಗ್ಯ ಇಲಾಖೆಗಳ ಅಧಿಕಾರಿಗಳು ಈ ನಿಟ್ಟಿನಲ್ಲಿ ಅಗತ್ಯ ಹಾಗೂ ವಾಸ್ತವಿಕ ಮಾಹಿತಿ ಸಂಗ್ರಹ, ವರದಿ ತಯಾರಿಕೆ, ಸಂವಾದ ಇನ್ನಿತರ ಕಾರ್ಯಕೈಗೊಳ್ಳಬೇಕಾಗಿದೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂಬುದು ಜನರ ಅನಿಸಿಕೆ.

ಆರ್‌ಆ್ಯಂಡ್‌ಆರ್‌ ಹೆಸರಲ್ಲಿ ಕೆಲವೆಡೆ ರಸ್ತೆಗಳನ್ನು ದುರಸ್ತಿಪಡಿಸಲಾಗಿದ್ದು, ವಿವಿಧ ಗ್ರಾಮಗಳಲ್ಲಿ ಸಮುದಾಯ ಭವನ ಇನ್ನಿತರ ಕಟ್ಟಡಗಳನ್ನು ಕಟ್ಟಲಾಗಿದೆ. ಇನ್ನೂ ಕೆಲ ಭಾಗಗಳಲ್ಲಿ ಸಸಿಗಳನ್ನು ನೆಡುವ ಕೆಲಸ ಬಿಟ್ಟರೆ ಇನ್ನಾವುದೇ ಕಾಮಗಾರಿ ಆಗಿಲ್ಲ ಎಂದು ಹೇಳಲಾಗುತ್ತಿದೆ. ಕಟ್ಟಡಗಳು ಅಭಿವೃದ್ಧಿ ಭಾಗವಾಗಬಹುದೇ ವಿನಃ ಜನಜೀವನದ ಆದ್ಯತೆಯಾಗಲಾರವು. ಮುಖ್ಯವಾಗಿ ಜನರ ಆದ್ಯತೆಗೆ ಮನ್ನಣೆ ದೊರೆಯಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ವಿವಿಗಳು ಪಾಲ್ಗೊಳ್ಳುವಂತಾಗಲಿ: ಗಣಿ ಬಾಧಿತ ಪ್ರದೇಶಗಳ ಸಮಸ್ಯೆ, ತೊಂದರೆಗಳ ಬಗ್ಗೆ ಸಮೀಕ್ಷೆ, ಜನರೊಂದಿಗೆ ಸಂವಾದ, ಕ್ರಿಯಾಯೋಜನೆ ತಯಾರಿಕೆ ಪೂರಕ ಮಾಹಿತಿ, ಸಲಹೆ ನೀಡಿಕೆಯಂತಹ ಕಾರ್ಯಕ್ಕೆ ರಾಜ್ಯದ ಕೃಷಿ ಸೇರಿದಂತೆ ವಿಶ್ವವಿದ್ಯಾಲಯಗಳು ಪಾಲುದಾರಿಕೆ ಪಡೆಯಬೇಕು ಎಂಬುದು ಪರಿಸರ ಪ್ರೇಮಿಗಳ ಅನಿಸಿಕೆ.

ಆರ್‌ಆ್ಯಂಡ್‌ಆರ್‌ ಅನುಷ್ಠಾನದಲ್ಲಿ ರಾಜ್ಯ ಸರಕಾರದಿಂದ ನಿರೀಕ್ಷಿತ ಕಾರ್ಯ ಆಗುತ್ತಿಲ್ಲ ಎಂದು ಕೆಲ ಹೋರಾಟಗಾರರು, ಪರಿಸರ ಪ್ರೇಮಿಗಳು ಪುಣೆಯ ವಿಶ್ವವಿದ್ಯಾಲಯವೊಂದಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿವಿಯ ಕೆಲವರು ಆಗಮಿಸಿ ಜನರೊಂದಿಗೆ ಸಂವಾದ ನಡೆಸಿದ್ದು, ಇದೀಗ ಇಬ್ಬರು ತಜ್ಞರು ಆಗಮಿಸಿ ಸಮೀಕ್ಷೆ ಕಾರ್ಯಕೈಗೊಳ್ಳುತ್ತಿದ್ದಾರೆ. ರಾಜ್ಯ ಸರಕಾರದಿಂದ ಇದು ನಡೆದರೆ ವ್ಯಾಪಕ ಹಾಗೂ ತೀವ್ರತೆ ಹೊಂದಿರುತ್ತದೆ ಎಂಬುದು ಜನಾಭಿಪ್ರಾಯ.

ಬಿಎಚ್ಎಸ್‌ ಪ್ರದೇಶದಲ್ಲಿ ಗಣಿಗಾರಿಕೆಯಿಂದಾದ ಸಮಸ್ಯೆಗಳ ನಿವಾರಣೆಗೆ ಪರಿಣಾಮಕಾರಿ ಆರ್‌ಆ್ಯಂಡ್‌ಆರ್‌ ಜಾರಿ ನಿಟ್ಟಿನಲ್ಲಿ ಪರಿಸರ ಹೋರಾಟಗಾರ ಎಸ್‌.ಆರ್‌.ಹಿರೇಮಠ ಇನ್ನಿತರರು ಸುಪ್ರೀಂಕೋರ್ಟ್‌ ಕದ ತಟ್ಟಿದ್ದು, ಕೋರ್ಟ್‌ ಸೂಚನೆಯಂತೆ ಪರಿಹಾರ ಕಾಮಗಾರಿಗಳು ನೇರವಾಗಿ ಫ‌ಲಾನುಭವಿಗಳಿಗೆ ತಲುಪಿಸುವ ಸೂಚನೆ ನೀಡಲಾಗಿದೆಯಾದರೂ ಸಮರ್ಪಕ ಜಾರಿಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಚಿವ ಜೋಶಿಯವರು ಬಾಧಿತ ಪ್ರದೇಶಕ್ಕೆ ಭೇಟಿ ನೀಡಿ ಜನರ ಭಾವನೆ-ಸಮಸ್ಯೆಗಳನ್ನು ಆಲಿಸಿ, ಆರ್‌ಆ್ಯಂಡ್‌ಆರ್‌ ಅನುಷ್ಠಾನಕ್ಕೆ ಮುಂದಾಗಬೇಕು ಎಂಬ ಹಕ್ಕೊತ್ತಾಯ ಕೇಳಿಬಂದಿದೆ.

ರಾಜ್ಯ ಸರಕಾರದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಗಣಿಗಾರಿಕೆ ಬಾಧಿತ ಪ್ರದೇಶದಲ್ಲಿ ಆರ್‌ಆ್ಯಂಡ್‌ಆರ್‌ ನಿರೀಕ್ಷಿತ ರೀತಿಯಲ್ಲಿ ಅನುಷ್ಠಾನ ಆಗುತ್ತಿಲ್ಲ. ಕೇಂದ್ರದ ನೂತನ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿಯವರು ಇದೇ ಭಾಗದವರಾಗಿದ್ದು, ನಮ್ಮ ಬೇಡಿಕೆ ಹಾಗೂ ಸಮಸ್ಯೆಗಳಿಗೆ ಪರಿಹಾರ ದೊರೆಯವ ಆಶಾಭಾವನೆ ಮೂಡಿದೆ. ಸಚಿವರು ಬಾಧಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಜನರ ಭಾವನೆ ತಿಳಿಯುತ್ತಾರೆ ಎಂಬ ನಿರೀಕ್ಷೆ ನಮ್ಮದಾಗಿದೆ.
ಟಿ.ಎಂ.ಶಿವಕುಮಾರ,
ಹಿರಿಯ ವಕೀಲರು-ಸಂಡೂರು.

ಟಾಪ್ ನ್ಯೂಸ್

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Maharashtra Election; BJP has nothing but 370: Mallikarjuna Kharge

Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

8-udupi

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್‌ ಇದ್ರು: ಫೋಟೋ ಸಾಕ್ಷ್ಯ ಲಭ್ಯ!

Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್‌ ಇದ್ರು: ಫೋಟೋ ಸಾಕ್ಷ್ಯ ಲಭ್ಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.