ನಗರದಲ್ಲೊಂದು ಕಿಂಡಿ ಅಣೆಕಟ್ಟು ನಿರ್ಮಾಣ
Team Udayavani, Jun 2, 2019, 10:59 AM IST
ಉಡುಪಿ: ಉಡುಪಿ ನಗರ ಭಾಗದಲ್ಲಿ ಪ್ರಥಮ ಎಂಬಂತೆ ಇಂದ್ರಾಣಿ ಹೊಳೆಗೆ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕುಂಜಿಬೆಟ್ಟು ವಾರ್ಡ್‌ನ ನಾರಾಯಣ ಗುರು ಸಂಘದ ಸಮೀಪ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅಣೆಕಟ್ಟು ನಿರ್ಮಾಣಗೊಳ್ಳುತ್ತಿದೆ.
ಕಲ್ಸಂಕ ತೋಡಿಗೆ 410 ಮೀಟರ್ ತಡೆಗೋಡೆ ಮತ್ತು ಈ ಕಿಂಡಿ ಅಣೆಕಟ್ಟು ನಿರ್ಮಾಣ ಒಟ್ಟು 2 ಕೋ.ರೂ. ವೆಚ್ಚದಲ್ಲಿ ನಡೆಯುತ್ತಿದೆ. ಹಿಂದೆ ಈ ಭಾಗದಲ್ಲಿ ಮಣ್ಣಿನಿಂದ ತಡೆ (ಕಟ್ಟ) ಹಾಕಲಾಗುತ್ತಿತ್ತು. ಈಗ ಹೊಸದಾಗಿ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿದೆ.
ಈ ಭಾಗದಲ್ಲಿ ಅಂತರ್ಜಲ ಹೆಚ್ಚಳಗೊಂಡು ಮುಂದಿನ ವರ್ಷಗಳಲ್ಲಿ ನೀರಿನ ಸಮಸ್ಯೆಯ ತೀವ್ರತೆ ಕಡಿಮೆ ಯಾಗುವ ನಿರೀಕ್ಷೆ ಇದೆ. ಅಂತೆಯೇ ಇಲ್ಲಿ ನಿರ್ಮಾಣವಾಗುತ್ತಿರುವ ತಡೆಗೋಡೆ ನೆರೆಯಿಂದ ರಕ್ಷಣೆ ನೀಡಬಹುದು ಎಂಬ ವಿಶ್ವಾಸ ಸ್ಥಳೀಯರದ್ದು. ನಗರ ಹಾಗೂ ನಗರದ ಹೊರ ವಲಯದ ತೋಡುಗಳಲ್ಲಿ ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿದರೆ ಭವಿಷ್ಯದಲ್ಲಿ ಅಂತರ್ಜಲ ವೃದ್ಧಿಗೆ ನೆರವಾಗಬಹುದು.
-ದೇವಾನಂದ್, ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ
– ಗಿರೀಶ್ ಅಂಚನ್, ನಗರಸಭಾ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
AjekarCase: ತನಿಖೆ ದಿಕ್ಕು ತಪ್ಪುತ್ತಿದೆ: ದಿಲೀಪ್ ತಂದೆ ವಿರುದ್ದ ಬಾಲಕೃಷ್ಣ ಮನೆಯವರ ಆರೋಪ
Katpadi: ಭತ್ತದ ತೆನೆಯಿಂದಲೇ ಆಟೋ ರಿಕ್ಷಾ ಅಲಂಕರಿಸಿ ಸಂಭ್ರಮಿಸಿದ ಚಾಲಕ
Udupi: ಗೀತಾರ್ಥ ಚಿಂತನೆ-83: ಅಪೇಕ್ಷಿತ-ಅನಪೇಕ್ಷಿತ ವಂಶವಾಹಿಗಳು
Congress Govt.,: ರಾಜ್ಯ ಸರಕಾರದ ವಿರುದ್ಧ ಮೂರು ಹಂತದ ಪ್ರತಿಭಟನೆ: ಕಿಶೋರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.