ನಕಲಿ ನೋಟುಗಳನ್ನು ಹರಿಯ ಬಿಡಲು ಐಎಸ್‌ಐ , ಡಿ-ಕಂಪೆನಿ ಹುನ್ನಾರ
Team Udayavani, Jun 2, 2019, 11:10 AM IST
ಹೊಸದಿಲ್ಲಿ: ಭಾರತದಲ್ಲಿ ಉನ್ನತ ಗುಣಮಟ್ಟದ ನಕಲಿ ನೋಟುಗಳನ್ನು ಹರಿಯಬಿಡಲು ಪಾಕಿಸ್ಥಾನದ ಐಎಸ್‌ಐ ಮತ್ತು ದಾವುದ್ ಕಂಪೆನಿ ಸಿದ್ಧತೆ ನಡೆಸಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳದ ತನಿಖೆಯಿಂದ ತಿಳಿದು ಬಂದಿದೆ.
ಬಹಳ ಕಾಲದ ನಂತರ ಭಾರತದ ಪೂರ್ವಗಡಿಯಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ ದೇಶದೊಳಗೆ ಚಲಾವಣೆಗೆ ತರಲು ಹುನ್ನಾರ ನಡೆಸಿರುವುದು ಗಮಕ್ಕೆಬಂದಿದೆ.
ನೇಪಾಳ ಪೊಲೀಸರಿಂದ ಬಂಧನಕ್ಕೊಳಗಾದ ನಕಲಿ ನೋಟುಗಳಜಾಲದ ಕಿಂಗ್‌ಪಿನ್ ಯೂನಸ್ ಅನ್ಸಾರಿ ವಿಚಾರಣೆ ವೇಳೆ ಈ ವಿಚಾರಗಳು ಬಯಲಾಗಿವೆ. ಬಂಧಿತ ಯೂನಸ್ ಐಎಸ್‌ಐ ಮತ್ತು ಡಿ-ಕಂಪೆನಿಯೊಂದಿಗೆ ಬಲವಾದ ನಂಟು ಹೊಂದಿದ್ದಾನೆ ಎಂದು ತಿಳಿದು ಬಂದಿದೆ.
ಅನ್ಸಾರಿ ಜೊತೆ ಪಾಕಿಸ್ಥಾನ ಪ್ರಜೆಗಳಾದ ಮೊಹಮದ್ ಅಖ್‌ತರ್, ನಾಡಿಯಾ ಅನ್ವರ್ , ನಾಸಿರುದ್ದೀನ್ ಎನ್ನುವ ಆರೋಪಿಗಳನ್ನೂ 7 ಕೋಟಿ ರೂಪಾಯಿ ಮೌಲ್ಯದ ನೋಟುಗಳೊಂದಿಗೆ ಬಂಧಿಸಲಾಗಿದೆ.
ಬಾಂಗ್ಲಾ ಗಡಿಯ ಮೂಲಕ ಭಾರತಕ್ಕೆ ನಕಲಿ ನೋಟುಗಳನ್ನು ಸರಬರಾಜು ಮಾಡಿ ಭಾರತದ ಆರ್ಥಿಕ ಸ್ಥಿತಿ ಕುಸಿತಕ್ಕೆ ಕಾರಣವಾಗಲು ಹುನ್ನಾರ ನಡೆಸಿರುವುದು ತಿಳಿದು ಬಂದಿದೆ.
ಈಗಾಗಲೆ ಕಳೆದು ಜನವರಿಯಲ್ಲಿ ಪಶ್ಚಿಮ ಬಂಗಾಳದ ಆನಂದ್ ವಿಹಾರ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬನ್ನು 10 ಲಕ್ಷ ಮೌಲ್ಯದ ನಕಲಿ ನೋಟುಗಳೊಂದಿಗೆ ವಶಕ್ಕೆ ಪಡೆಯಲಾಗಿತ್ತು. ಆತನ ವಿಚಾರಣೆ ವೇಳೆ ನೋಟುಗಳು ಬಾಂಗ್ಲಾದೇಶದಲ್ಲಿ ಮುದ್ರಣಗೊಂಡಿರುವುದು ತಿಳಿದು ಬಂದಿದೆ.
ಗುಜರಾತ್‌ನ ಜುನಾಗಡದಲ್ಲಿಯೂ ಎಟಿಎಸ್ ಪೊಲೀಸರು ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದರು.
ಗುರಗ್ರಾಮದಲ್ಲಿ ಇತ್ತೀಚೆಗೆ ನಕಲಿ ನೋಟುಗಳೊಂದಿಗೆ ಇಬ್ಬರನ್ನು ಬಂಧಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.