ಮೂಡುಬಿದಿರೆ: ಬಿಜೆಪಿ ಕಾರ್ಯಕರ್ತರ ಸಂಭ್ರಮ
Team Udayavani, Jun 2, 2019, 11:53 AM IST
ಮೂಡುಬಿದಿರೆ: ಪುರಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆದು ವಿಜೇತ ಅಭ್ಯರ್ಥಿಗಳ ಘೋಷಣೆಯಾಗುತ್ತಿದ್ದಂತೆ ಒಂದೊಂದು ಪಕ್ಷಗಳ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜಯಘೋಷ ಕೇಳಲಾರಂಭಿಸಿತು.
ಒಮ್ಮೆ ಕಾಂಗ್ರೆಸ್, ಇನ್ನೊಮ್ಮೆ ಬಿಜೆಪಿ ಹೀಗೆ ಎರಡೂ ಪಕ್ಷಗಳ ಬಲಾಬಲ ವ್ಯತ್ಯಾಸವಾಗುತ್ತ ಬಂದು ತೂಗುತಕ್ಕಡಿಯಲ್ಲಿ ಕೊನೆಗೂ 12 ಸ್ಥಾನ ಬಿಜೆಪಿಗೆ, 11 ಸ್ಥಾನ ಕಾಂಗ್ರೆಸ್‌ಗೆ ಎಂದು ಅಧಿಕೃತವಾಗಿ ಘೋಷಣೆಯಾದಾಗ ಬಿಜೆಪಿಗರ ಸಂಭ್ರಮ ಮುಗಿಲು ಮುಟ್ಟಿತು.
ಕಳೆದ 44 ವರ್ಷಗಳ ಪುರಸಭಾ ಇತಿಹಾಸದಲ್ಲಿ ಒಮ್ಮೆ ಜನತಾ ಪರಿವಾರ, ಇನ್ನೊಮ್ಮೆ ಜೆಡಿಎಸ್ ಮತ್ತು ಬಿಜೆಪಿ ಜತೆಯಾಗಿ ಆಡಳಿತ ನಡೆಸಿದ್ದು ಬಿಟ್ಟರೆ ಉಳಿದಂತೆ ಕಾಂಗ್ರೆಸ್ ಆಡಳಿತಾವಧಿಯೇ ಇದ್ದು ಈಗ ಮೊದಲ ಬಾರಿಗೆ ಬಿಜೆಪಿ ಬಹುಮತ ಸಾಧಿಸಿ ಬೀಗಿದೆ.
ಶ್ರೀ ಮಹಾವೀರ ಕಾಲೇಜಿನಿಂದ ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮೇಘನಾಥ್ ಶೆಟ್ಟಿ, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾಕ ವಿಭಾಗ ಅಧ್ಯಕ್ಷ ಜೋಯ್ಲಸ್ ಡಿ’ಸೋಜಾ, ನಿಕಟಪೂರ್ವ ಸದಸ್ಯ, ಪಕ್ಷದ ಹಿರಿಯ ಮುಖಂಡ ಎಂ. ಬಾಹುಬಲಿ ಪ್ರಸಾದ್, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ., ಜಿ.ಪಂ. ಸದಸ್ಯ ಸುಚರಿತ ಶೆಟ್ಟಿ ಸಹಿತ ಪಕ್ಷ ಪ್ರಮುಖರು ಗೆದ್ದವರಿಗೆ ಹಾರ ತೊಡಿಸಿ ಅಭಿನಂದಿಸಿದರು.
ಪಕ್ಷದಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲವು ಸಾಧಿಸಿದ ನಿ.ಪೂ. ಅಧ್ಯಕ್ಷ ನಾಗರಾಜ ಪೂಜಾರಿ ಅವರನ್ನು ಕಾರ್ಯಕರ್ತರು ಎತ್ತಿ, ಜೈಕಾರ ಹಾಕಿ ಸಂಭ್ರಮಿಸಿದರು. ಅಲ್ಲಿಂದ ಹೊರಟ ವಾಹನಗಳ ಮೆರವಣಿಗೆ ಮೂಡುಬಿದಿರೆಯ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದು ಜನ ಮನ ಸೆಳೆಯಿತು.
ಜೆಡಿಎಸ್ ಕಳಾಹೀನ
ಈ ಹಿಂದೆ 3 ಮಂದಿ ಪುರಸಭಾ ಸದಸ್ಯರನ್ನು ಹೊಂದಿದ್ದ ಜೆಡಿಎಸ್ ಈ ಬಾರಿ 8 ಕಡೆ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರೂ ಅನುಭವಿ ಸದಸ್ಯೆ ಪ್ರೇಮಾ ಸಾಲ್ಯಾನ್ ಸೇರಿದಂತೆ ಒಂದೂ ಸ್ಥಾನ ಪಡೆಯಲಾಗಲಿಲ್ಲ.
ನೋಟಾ ಮತಗಳು
25,062 ಮಂದಿ ಮತದಾರರಿದ್ದು, ಇವರಲ್ಲಿ 12,038 ಮಂದಿ ಪುರುಷರು, 13,024 ಮಂದಿ ಮಹಿಳೆಯರು. ಚುನಾವಣೆಯಲ್ಲಿ 16,967 ಮಂದಿ ಮತ ಚಲಾಯಿಸಿ (ಶೇ. 67.70)ದ್ದು ಒಟ್ಟು 68 ನೋಟಾ ಮತ ಆಗಿವೆ.
ಸುಭಾಸ್‌ನಗರ (ವಾರ್ಡ್ 2) ಶೇ. 77.15 ಅತೀ ಹೆಚ್ಚು ಮತದಾನ (963ರಲ್ಲಿ 743) ದಾಖಲಿಸಿದೆ. ವಿಜಯನಗರ (ವಾರ್ಡ್ 8)ದಲ್ಲಿ ಶೇ 58.20 ಕನಿಷ್ಠ ಮತದಾನ (1063ರಲ್ಲಿ 603)ವಾಗಿದೆ.
ಮೂಡುಬಿದಿರೆ ಪುರಸಭೆಯ ವಾರ್ಡ್ 11 (ಚಾಮುಂಡಿ ಬೆಟ್ಟ) ರಲ್ಲಿ ಬಿಜೆಪಿಯ ನವೀನ್ ಶೆಟ್ಟಿ ಅವರು ಜಯಗಳಿಸಿದ್ದು, ಕೇವಲ 1 ಮತದ ಅಂತರದಿಂದ.
ವಾರ್ಡ್ 17 (ಲಾಡಿ)ಯಲ್ಲಿ ಬಿಎಸ್‌ಪಿಯ ಎಸ್. ಸತೀಶ ಸಾಲ್ಯಾನ್ ಅವರಿಗೆ ದಕ್ಕಿದ್ದು 1 ಮತ; ವಾರ್ಡ್ 2 (ಸುಭಾಸ್‌ನಗರ)ದಲ್ಲಿ ಅವರಿಗೆ ಸಿಕ್ಕಿದ್ದು 7 ಮತ. ಕಳೆದ ದ.ಕ. ಲೋಕಸಭಾ ಚುನಾವಣೆಯಲ್ಲೂ ಬಿಎಸ್‌ಪಿ ಅಭ್ಯರ್ಥಿಯಾಗಿ ನಾಲ್ಕನೇ ಸ್ಥಾನದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.