ಮಡಿಕೇರಿ: ಪ್ರವಾಸಿತಾಣ ರಾಜಾಸೀಟಿಗೆ ಆನೆ ಬಂತು ಆನೆ !
Team Udayavani, Jun 2, 2019, 1:01 PM IST
ಮಡಿಕೇರಿ: ಮಡಿಕೇರಿ ನಗರದ ಹೆಸರುವಾಸಿ ಪ್ರವಾಸಿತಾಣ ರಾಜಾಸೀಟು ಉದ್ಯಾನವನ ಈಗ ಮತ್ತಷ್ಟು ಆಕರ್ಷ ಣೆಯನ್ನು ಪಡೆದುಕೊಂಡಿದೆ. ವನ್ಯ ಜೀವಿಗಳ ಬೃಹತ್ ಕಲಾಕೃತಿಗಳನ್ನು ಅಳವಡಿಸಲಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಎತ್ತರದ ಆನೆ ಕಲಾಕೃತಿ ಹೆಚ್ಚು ಗಮನ ಸೆಳೆಯುತ್ತಿದೆ.
ಜಿಲ್ಲಾಡಳಿತದ ಆಸಕ್ತಿಯಿಂದಾಗಿ ರಾಜಾಸೀಟಿಗೆ ಹೆಚ್ಚು ಮೆರುಗು ಬಂದಿದೆ ಎಂದು ಸ್ಥಳೀಯ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುಮಾರು 18 ಲಕ್ಷ ರೂ. ವೆಚ್ಚದ ಕಲಾಕೃತಿಗಳನ್ನು ಪುಣೆಯಿಂದ ತರಲಾಗಿದ್ದು, ನವಿಲು, ಜಿಂಕೆ, ಮೊಲ, ಹುಲಿ, ಜಿರಾಫೆ, ಆನೆ ಹಾಗೂ ಇನ್ನಿತರ ಕಲಾಕೃತಿಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ. ಪ್ರವಾಸಿಗರು ಕುಳಿತುಕೊಳ್ಳಲು ಆಕರ್ಷಕ ಕಲ್ಲುಬೆಂಚು ಅಳವಡಿ ಸಲಾಗುವುದು ಮತ್ತು ವೀಕ್ಷಣಾ ಗೋಪುರವನ್ನು ಮತ್ತಷ್ಟು ಅಂದಗಾ ಣಿಸಲಾಗುವುದು ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ದೇವಕ್ಕಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.