ಪುತ್ತೂರು: ಗಮನ ಸೆಳೆದ ಸಾಹಿತ್ಯ, ಸಂಗೀತ, “ಕೃಷಿ’ ಸಂತೆ
ಕಸಾಪ ಪುಸ್ತಕ ಮೇಳ, ಸಾಹಿತ್ಯೋತ್ಸವದಲ್ಲಿ ಆಯೋಜನೆ
Team Udayavani, Jun 3, 2019, 5:50 AM IST
ಪುತ್ತೂರು: ಕೃಷಿ, ತೋಟಗಾರಿಕೆಗೆ ಪ್ರಸಿದ್ಧಿ ಯಾದ ಪುತ್ತೂರಿನಲ್ಲಿ ರವಿವಾರ ಮೊದಲ ಬಾರಿಗೆ ಆಯೋಜಿಸಿರುವ ಸಾವಯವ ತರಕಾರಿ ಸಂತೆ ವಿಶೇಷ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಕ.ಸಾ.ಪ. ಪುತ್ತೂರು ತಾಲೂಕು ಘಟಕದ ಆಯೋಜಿಸಿರುವ ಬೃಹತ್ ಪುಸ್ತಕ ಮೇಳ, ಸಾಹಿತ್ಯ ಉತ್ಸವದೊಂದಿಗೆ ರವಿವಾರ ಹಾಗೂ ಸೋಮವಾರ ಸಾವಯವ ತರಕಾರಿ ಸಂತೆಯನ್ನೂ ಸಂಯೋಜಿಸಲಾಗಿದೆ.
ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸದೆ ತಾಜಾ ಮಣ್ಣಿನ ಗುಣದೊಂದಿಗೆ ಬೆಳೆಸಲಾಗುವ ಸಾವಯವ ತರಕಾರಿ ಇತ್ತೀಚೆಗೆ ಜನಪ್ರಿಯಗೊಳ್ಳುತ್ತಿದೆ. ಅಗ್ಗದ ಧಾರಣೆಯನ್ನು ನಿರೀಕ್ಷಿಸುವ ಜನರ ಮಧ್ಯೆ ಸಾವಯವ ತರಕಾರಿಗಳನ್ನು ಮಾರುವುದು ಕಷ್ಟವೆಂಬ ಭಾವನೆಯೂ ರೈತರಲ್ಲಿದೆ. ಇದನ್ನು ಮೀರಿಸಿ ಸಾವಯವ ಕೃಷಿ ಉತ್ಪನ್ನಗಳಿಗೆ ಇರುವ ಸೀಮಿತ ಮಾರುಕಟ್ಟೆ ವ್ಯವಸ್ಥೆಯನ್ನು ವಿಸ್ತರಿಸಿ ಸಾವಯವ ರೈತರಿಗೆ ಅವಕಾಶ ಮಾಡಿಕೊಡುವ ಪ್ರಯತ್ನವನ್ನೂ ಈ ಸಾವಯವ ತರಕಾರಿ ಸಂತೆಯ ಮೂಲಕ ಮಾಡಲಾಗಿದೆ.
10 ಮಳಿಗೆಗಳು
ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಪುತ್ತೂರು ಹಾಗೂ ಮೈಸೂರು ಜಿಲ್ಲೆಯ ಸಾವಯವ ಕೃಷಿ ಮಾಡುವ ರೈತರು ತಾವೇ ಬೆಳೆದ ಸಾವಯವ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಿದರು. ಸುಮಾರು 10ರಷ್ಟು ಮಳಿಗೆಗಳು ತೆರೆದುಕೊಂಡವು. ಮೈಸೂರಿನ ನೇಸರ ಸಾವಯವ ಕೃಷಿ ಪರಿವಾರದವರು, ತುಳುನಾಡು ಸಾವಯವ ಕೃಷಿಕರ ತಂಡ ಸಹಿತ ರೈತರು ವ್ಯಾಪಾರ ನಡೆಸಿದರು. ಸೌತೆ, ಬಾಳೆಕಾಯಿ, ಬಸಳೆ, ಕ್ಯಾಬೇಜ್‌ನಿಂದ ಹಿಡಿದು ಹಣ್ಣುಗಳಾದ ಮಾವು, ಹಲಸು, ಬಾದಾಮಿಗಳನ್ನು ಮಾರಾಟ ಮಾಡಿದರು.
ಸಾವಯವ ಸಂತೆ ಉದ್ಘಾಟನೆ
ಬೆಳಗ್ಗೆ ಸಾವಯವ ತರಕಾರಿ ಸಂತೆಗೆ ಚಾಲನೆ ನೀಡಿದ ವಿವೇಕಾನಂದ ಕಾಲೇ ಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಎ.ವಿ. ನಾರಯಣ, ಕೃಷಿಗೆ ಸಾವಯವ ಪದ್ಧತಿಗೆ ಆದ್ಯತೆ ನೀಡುವ ಅನಿವಾರ್ಯತೆಯಲ್ಲಿ ನಾವಿದ್ದೇವೆ.
2 ವಾರಕ್ಕೊಮ್ಮೆ ಸಂತೆ!
ಮಂಗಳೂರಿನಲ್ಲಿ ಪ್ರತಿ ರವಿವಾರ ನಡೆ ಯುವ ಸಾವಯವ ಸಂತೆಗೆ ಉತ್ತಮ ಸ್ಪಂದನೆ ಇದೆ. ಇದೇ ಮಾದರಿಯಲ್ಲಿ ಪುತ್ತೂರಿನಲ್ಲೂ ಆಗಬೇಕು ಎನ್ನುವ ಆಸೆ ನಮ್ಮದು. ಇಲ್ಲಿ ಸಾವಯವ ಮೇಳದ ಮಳಿಗೆಗೆ ಸಾಂಕೇತಿಕ ಬಾಡಿಗೆಯನ್ನಷ್ಟೇ ವಿಧಿಸಲಾಗಿದೆ. ಇದರ ಯಶಸ್ಸನ್ನು ಆಧರಿಸಿ ಮುಂದೆ ಪುತ್ತೂರಿನಲ್ಲಿ ಎರಡು ವಾರಕ್ಕೊಮ್ಮೆಯಾದರೂ ಸಾವಯವ ಸಂತೆ ನಡೆಸುವ ಉದ್ದೇಶ ಹೊಂದಿದ್ದೇವೆ.
– ಸುಹಾಸ್ ಮರಿಕೆ, ಸಾವಯವ ಸಂತೆ ಸಂಯೋಜಕ
ಸಾವಯವ ಕೃಷಿ ಸಂತೆ
ಕೃಷಿ ಹಾಗೂ ಸಾಹಿತ್ಯ ಬದುಕಿನ ಎರಡು ಮುಖಗಳು. ಈ ದೃಷ್ಟಿಕೋನದಿಂದ ಈ ಬಾರಿ ಸಾಹಿತ್ಯ ಉತ್ಸವದಲ್ಲಿ ಸಾವಯವ ಕೃಷಿ ಸಂತೆಯನ್ನು ಸಂಯೋಜಿಸಿದ್ದೇವೆ. ಜನರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.
– ಬಿ. ಐತಪ್ಪ ನಾಯ್ಕ ಕ.ಸಾ.ಪ. ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.