ಭಾರತದ ವಿಳಂಬಕ್ಕೆ ಐಪಿಎಲ್ ಕಾರಣ!
Team Udayavani, Jun 3, 2019, 6:10 AM IST
ಲಂಡನ್: ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಕ್ರೇಜ್ ಭಾರತದಲ್ಲಿ ಭರ್ಜರಿಯಾಗಿಯೇ ಹಬ್ಬಿದೆ. ಆದರೆ ಕೊಹ್ಲಿ ಪಡೆಯ ‘ರಂಗಪ್ರವೇಶ’ ತೀರಾ ವಿಳಂಬವಾದ್ದರಿಂದ ಕ್ರಿಕೆಟ್ ಅಭಿ ಮಾನಿಗಳು ಐಸಿಸಿ ವಿರುದ್ಧ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ.
ಭಾರತ ತನ್ನ ಮೊದಲ ಪಂದ್ಯ ಆಡುವುದು ಜೂ. 5ರಂದು. ಅಂದರೆ ವಿಶ್ವಕಪ್ ಆರಂಭಗೊಂಡು 6 ದಿನಗಳ ಬಳಿಕ. ಆಗ ಉಳಿದೆಲ್ಲ ತಂಡಗಳು 2 ಪಂದ್ಯಗಳನ್ನು ಆಡಿರುತ್ತವೆ. ಇದಕ್ಕಿಂತ ದೊಡ್ಡ ಅಚ್ಚರಿಯೆಂದರೆ, ಅಂದು ಭಾರತ ವನ್ನು ಎದುರಿಸಲಿರುವ ದಕ್ಷಿಣ ಆಫ್ರಿಕಾಕ್ಕೆ ಇದು 3ನೇ ಪಂದ್ಯವಾಗಿರುವುದು!
ಐಪಿಎಲ್ ಟೂರ್ನಿಯೇ ಕಾರಣ
ಆದರೆ ಅಭಿಮಾನಿಗಳು ವೇಳಾಪಟ್ಟಿ ನಿರ್ಮಿಸಿದ ಐಸಿಸಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುವುದರಲ್ಲಿ ಅರ್ಥವಿಲ್ಲ, ಐಪಿಎಲ್ ನಿಮಿತ್ತ ಜೂ. 5ರ ಬಳಿಕವೇ ಭಾರತಕ್ಕೆ ಮೊದಲ ಪಂದ್ಯ ಆಯೋಜಿಸಬೇಕು ಎಂದು ಬಿಸಿಸಿಐ ಐಸಿಸಿಯಲ್ಲಿ ಮೊದಲೇ ಕೇಳಿಕೊಂಡಿದ್ದಾಗಿ ಮಂಡಳಿಯ ಮೂಲಗಳಿಂದ ತಿಳಿದು ಬಂದಿದೆ. ಐಪಿಎಲ್ ಮುಗಿದ ಬಳಿಕ ಭಾರತದ ಆಟಗಾರರಿಗೆ 15 ದಿನಗಳ ವಿಶ್ರಾಂತಿ ನೀಡಬೇಕುಎಂಬುದಾಗಿ ಲೋಧಾ ಸಮಿತಿ ಐಸಿಸಿಗೆ ಮನವಿ ಮಾಡಿಕೊಂಡಿತ್ತು. ಅದರಂತೆ ಭಾರತ ಜೂ. 2ರಂದು ಮೊದಲ ಪಂದ್ಯ ಆಡಬೇಕಿತ್ತು. ಆದರೆ ಬಿಸಿಸಿಐ ಇನ್ನೂ ಹೆಚ್ಚಿನ ಕಾಲಾವ ಕಾಶ ಕೇಳಿದ್ದಾಗಿ ತಿಳಿದುಬಂದಿದೆ. ಲೋಧಾ ಸಮಿತಿಯ ಕೋರಿಕೆಯೇ ಅಂತಿಮವಾಗಿರುವಾಗ ಬಿಸಿಸಿಐ ಕೋರಿಕೆಯನ್ನು ಐಸಿಸಿ ಏಕೆ ಒಪ್ಪಬೇಕಿತ್ತು ಎಂಬುದು ಈಗಿನ ಪ್ರಶ್ನೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.