ಅಭ್ಯಾಸದ ವೇಳೆ ಕೊಹ್ಲಿ ಬೆರಳಿಗೆ ಗಾಯ
Team Udayavani, Jun 3, 2019, 6:00 AM IST
ಲಂಡನ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನೆಟ್ ಪ್ರ್ಯಾಕ್ಟೀಸ್ ವೇಳೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಆದರೆ ಇದೇನೂ ಗಂಭೀರ ಗಾಯವಲ್ಲ ಎಂದು ಫಿಸಿಯೋ ಪ್ಯಾಟ್ರಿಕ್ ಫರ್ಹಾತ್ ತಿಳಿಸಿದ್ದಾರೆ. ಯಾವುದೇ ಆತಂಕ ಪಡಬೇಕಾಗಿಲ್ಲ, ಕೊಹ್ಲಿ ಫಿಟ್ ಆಗಿದ್ದಾರೆ ಎಂದಿದ್ದಾರೆ.ಆಲ್ರೌಂಡರ್ ಕೇದಾರ್ ಜಾಧವ್ ಭುಜದ ನೋವಿನಿಂದ ಚೇತರಿಸುತ್ತಿದ್ದಾರೆ. ಆಲ್ರೌಂಡರ್ ವಿಜಯ್ ಶಂಕರ್ ಕೂಡ ಸ್ನಾಯು ಸೆಳೆತದಿಂದ ಬಳಲುತ್ತಿದ್ದು, ಬಾಂಗ್ಲದೇಶ ವಿರುದ್ಧದ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದರು. ಬುಧವಾರದ ಮೊದಲ ಪಂದ್ಯದ ವೇಳೆ ಇಬ್ಬರೂ ಆಯ್ಕೆಗೆ ಲಭ್ಯರಿರುತ್ತಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.