ಪರಾಜಿತ ಪಾಕಿಸ್ಥಾನಕ್ಕೆ ಮತ್ತೆ ಇಂಗ್ಲೆಂಡ್‌ ಭೀತಿ


Team Udayavani, Jun 3, 2019, 6:00 AM IST

pak

ನಾಟಿಂಗ್‌ಹ್ಯಾಮ್‌: ವಿಶ್ವಕಪ್‌ ಉದ್ಘಾ ಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಭಾರೀ ಅಂತರದಿಂದ ಉರುಳಿಸಿದ ಹುರುಪಿ ನಲ್ಲಿರುವ ಆತಿಥೇಯ ಇಂಗ್ಲೆಂಡ್‌ ಸೋಮವಾರ ನಾಟಿಂಗ್‌ಹ್ಯಾಮ್‌ನಲ್ಲಿ 2ನೇ ಹೋರಾಟಕ್ಕೆ ಅಣಿಯಾಗಲಿದೆ. ಎದುರಾಳಿ, ಪರಾಜಿತ ಪಾಕಿಸ್ಥಾನ.

ಪ್ರಸಕ್ತ ವಿಶ್ವಕಪ್‌ ಪಂದ್ಯಗಳನ್ನು ಅವಲೋಕಿಸು ವಾಗ ಇಂಗ್ಲೆಂಡ್‌ ಮತ್ತು ಪಾಕಿಸ್ಥಾನ ತಂಡಗಳ ನಿರ್ವಹಣೆ ತದ್ವಿರುದ್ಧವಾಗಿದೆ. ಇಂಗ್ಲೆಂಡ್‌ ಮುನ್ನೂರು ಪ್ಲಸ್‌ ಮೊತ್ತದೊಂದಿಗೆ ಕೂಟದ ಅತ್ಯಧಿಕ ಮೊತ್ತ ದಾಖಲಿಸಿದರೆ, ಪಾಕಿಸ್ಥಾನ ಲೋ ಸ್ಕೋರ್‌ ಸಂಕಟಕ್ಕೆ ಸಿಲುಕಿದೆ. ಮಾರ್ಗನ್‌ ಪಡೆ ಅಧಿಕಾರಯುತ ಜಯ ಸಾಧಿಸಿ ದರೆ, ವಿಂಡೀಸ್‌ ವಿರುದ್ಧ ಠುಸ್‌ ಆದ ಪಾಕ್‌ ಸತತ 11 ಏಕದಿನ ಪಂದ್ಯಗಳ ಸೋಲಿನಿಂದ ತತ್ತರಿಸಿದೆ. ಸೋಮವಾರ ಇದು 12ಕ್ಕೆ ಏರಿದರೂ ಆಶ್ವರ್ಯವಿಲ್ಲ.

ಲಾಭ ತರದ ಏಕದಿನಸ ಸರಣಿ
ವಿಶ್ವಕಪ್‌ಗೆ ಒಂದು ತಿಂಗಳಿರುವಾಗಲೇ ಇಂಗ್ಲೆಂಡಿಗೆ ಆಗಮಿಸಿದ ಪಾಕಿಸ್ಥಾನ 5 ಪಂದ್ಯಗಳ ಏಕದಿನ ಸರಣಿಯನ್ನಾಡಿತ್ತು. ನಿಜಕ್ಕಾದರೆ ಇದು ವಿಶ್ವಕಪ್‌ ದೃಷ್ಟಿಯಲ್ಲಿ ಪಾಕಿಗೆ ಭಾರೀ ಲಾಭವಾಗಿ ಪರಿಣಮಿಸಬೇಕಿತ್ತು. ಆದರೆ ಈ ಸರಣಿಯನ್ನು 4-0 ಅಂತರದಿಂದ ಕಳೆದುಕೊಂಡ ಪಾಕ್‌ ಪಾತಾಳದತ್ತ ಉರುಳಿತು.

ಸರಣಿಯಲ್ಲಿ ಪಾಕಿಸ್ಥಾನ ದೊಡ್ಡ ಮೊತ್ತ ದಾಖಲಿಸಿತಾದರೂ ಇಂಗ್ಲೆಂಡ್‌ ಇದನ್ನು ಮೀರಿ ನಿಂತಿತು. ಆದರೆ ವೆಸ್ಟ್‌ ಇಂಡೀಸ್‌ ಎದುರಿನ ಮೊದಲ ಪಂದ್ಯದಲ್ಲಿ ಪಾಕ್‌ ಬ್ಯಾಟಿಂಗ್‌ ಚಿಂತಾಜನಕ ಸ್ಥಿತಿಗೆ ತಲುಪಿತು. ಬರೀ 105 ರನ್ನಿಗೆ ಕುಸಿದು ಇದು ವಿಶ್ವಕಪ್‌ ಪಂದ್ಯವೋ, ಕ್ಲಬ್‌ ಪಂದ್ಯವೋ ಎಂಬ ಪ್ರಶ್ನೆ ಮೂಡಿಸಿತು. ತೀವ್ರ ಸಂಕಟದಲ್ಲಿರುವ ಪಾಕ್‌ ಬಲಾಡ್ಯ ಇಂಗ್ಲೆಂಡ್‌ ಎದುರು ಸಿಡಿದು ನಿಂತೀತು ಎಂದು ಹೇಳುವ ಧೈರ್ಯ ಯಾರಲ್ಲೂ ಇಲ್ಲ. ಸತತ 2 ಪಂದ್ಯಗಳನ್ನು ಸೋತರೆ ಪಾಕಿಸ್ಥಾನದ ಹಾದಿ ಕಠಿನವಾಗುವುದರಲ್ಲಿ ಅನುಮಾನವಿಲ್ಲ.

ಪಾಕಿಸ್ಥಾನದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಬಲಿಷ್ಠವಾಗಿಯೇ ಇದೆ. ಇಮಾಮ್‌, ಫ‌ಕಾರ್‌, ಬಾಬರ್‌ ಅವರೆಲ್ಲ ಉತ್ತಮ ಫಾರ್ಮ್ನಲ್ಲಿದ್ದಾರೆ. ಆಮಿರ್‌, ಅಲಿ, ರಿಯಾಜ್‌, ಶಾದಾಬ್‌ ಅವರ ನ್ನೊಳಗೊಂಡ ಬೌಲಿಂಗ್‌ ಕೂಡ ಘಾತಕವೇ. ಆದರೆ ಟ್ರೆಂಟ್‌ಬ್ರಿಜ್‌ ಅಂಗಳ ಬ್ಯಾಟಿಂಗ್‌ ಸ್ವರ್ಗವಾದ್ದ ರಿಂದ ಬೌಲಿಂಗ್‌ ನಡೆಯುವ ಬಗ್ಗೆ ಸಂಶಯವಿದೆ.

ಇಂಗ್ಲೆಂಡ್‌ ನಿರಾಳ!
ಕೂಟದ ಫೇವರಿಟ್‌ ತಂಡವಾಗಿರುವ ಇಂಗ್ಲೆಂಡ್‌ ನಿರಾಳವಾಗಿದೆ. ದಕ್ಷಿಣ ಆಫ್ರಿಕಾವನ್ನು ಸೊಲ್ಲೆತ್ತದಂತೆ ಮಾಡಿ ಮೊದಲ ಪಂದ್ಯದಲ್ಲೇ ಸಾಧಿಸಿದ ಅಮೋಘ ಗೆಲುವು ಮಾರ್ಗನ್‌ ಪಡೆಯ ಮುಂದಿನ ಮಾರ್ಗ ಯಾವುದೆಂಬುದಕ್ಕೆ ದಿಕ್ಸೂಚಿಯಾಗಿದೆ. ಇಂಗ್ಲೆಂಡ್‌ ಪಾಲಿಗೆ ಪಾಕಿಸ್ಥಾನದೆದುರಿನ ಪಂದ್ಯ ಬಹುಶಃ ಏಕದಿನ ಸರಣಿಯ 6ನೇ ಪಂದ್ಯವಾಗಿರಲಿಕ್ಕೂ ಸಾಕು! ಘಟಾನುಘಟಿ ಆಟಗಾರರ ಬ್ಯಾಟಿಂಗ್‌ ಲೈನ್‌ಅಪ್‌ ಹೊಂದಿರುವ ಇಂಗ್ಲೆಂಡಿಗೆ ಕಡಿವಾಣ ಹಾಕುವುದು ಸುಲಭವಲ್ಲ. ಪಾಕಿಗೆ ಈಗಾಗಲೇ ಇದು ಸ್ಪಷ್ಟವಾಗಿದೆ. ಹೀಗಾಗಿ “ಡಿಫ‌ರೆಂಟ್‌ ಬಾಲ್‌ ಗೇಮ್‌’ಆಗಿರುವ ವಿಶ್ವಕಪ್‌ನಲ್ಲಿ ಸಫ‌ìರಾಜ್‌ ಬಳಗಕ್ಕೆ ಇದು ನಿಜಕ್ಕೂ ಅಗ್ನಿಪರೀಕ್ಷೆ.

ಸಂಭಾವ್ಯ ತಂಡಗಳು
ಇಂಗ್ಲೆಂಡ್‌: ಜಾಸನ್‌ ರಾಯ್‌, ಜಾನಿ ಬೇರ್‌ಸ್ಟೊ, ಜೋ ರೂಟ್‌, ಇಯಾನ್‌ ಮಾರ್ಗನ್‌ (ನಾಯಕ), ಜಾಸ್‌ ಬಟ್ಲರ್‌, ಬೆನ್‌ ಸ್ಟೋಕ್ಸ್‌, ಮೊಯಿನ್‌ ಅಲಿ, ಕ್ರಿಸ್‌ ವೋಕ್ಸ್‌ , ಆದಿಲ್‌ ರಶೀದ್‌, ಲಿಯಮ್‌ ಪ್ಲಂಕೆಟ್‌, ಜೋಫ‌Å ಆರ್ಚರ್‌.

ಪಾಕಿಸ್ಥಾನ: ಇಮಾಮ್‌ ಉಲ್‌ ಹಕ್‌, ಫ‌ಕಾರ್‌ ಜಮಾನ್‌, ಬಾಬರ್‌ ಆಜಂ, ಹ್ಯಾರಿಸ್‌ ಸೊಹೈಲ್‌, ಸಫ‌ìರಾಜ್‌ ಅಹ್ಮದ್‌ (ನಾಯಕ), ಮೊಹಮ್ಮದ್‌ ಹಫೀಜ್‌, ಇಮಾದ್‌ ವಾಸಿಮ್‌, ಶಾದಾಬ್‌ ಖಾನ್‌, ಹಸನ್‌ ಅಲಿ, ವಹಾಬ್‌ ರಿಯಾದ್‌, ಮೊಹಮ್ಮದ್‌ ಆಮಿರ್‌.

ಟಾಪ್ ನ್ಯೂಸ್

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

crime

Brahmavara: ಯಡ್ತಾಡಿ; ಬೈಕ್‌ ಅಪಘಾತ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

byndoor

Udupi: ಬೈಕಿಗೆ ಕಾರು ಢಿಕ್ಕಿ; ಸವಾರನಿಗೆ ಗಾಯ

dw

Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.