ಪಾಳುಬಿದ್ದ ಗುಂಡು ತೋಪಿಗೆ ಕಾಯಕಲ್ಪ
ಗಿಡ-ಗಂಟಿಗಳ ತೆರವು: ತಲೆ ಎತ್ತಿದ 200 ತೆಂಗು ಸಸಿಗಳು • ಶ್ರೀ ಊರಮಾರಮ್ಮ ಗ್ರಾಮಾಭಿವೃದ್ಧಿ ಸಂಘ ಸಾಧನೆ
Team Udayavani, Jun 3, 2019, 12:39 PM IST
ಮಂಡ್ಯ: ಗಿಡ-ಗಂಟಿ, ಮುಳ್ಳುಗಿಡಗಳು ಬೆಳೆದುಕೊಂಡು ಪೊದೆಯಂತಿದ್ದು ವಿಷಜಂತುಗಳಿಗೆ ಆಶ್ರಯತಾಣವಾಗಿದ್ದ ಗುಂಡುತೋಪಿನ ಜಾಗದಲ್ಲೀಗ ತೆಂಗಿನ ಸಸಿಗಳು ತಲೆಎತ್ತಿ ನಿಂತಿವೆ. ವಿವಿಧ ಜಾತಿಯ ಬೆಲೆಬಾಳುವ ಮರದ ಸಸಿಗಳನ್ನು ನೆಟ್ಟಿ ಬೆಳೆಸಲು ಕಂಕಣ ತೊಡಲಾಗಿದೆ. ಹತ್ತಾರು ವರ್ಷಗಳಿಂದ ಇದ್ದ ಈ ಪ್ರದೇಶ ಸ್ವರೂಪ ಈಗ ಬದಲಾಗಿದೆ. ಇದಕ್ಕೆಲ್ಲಾ ಮೂಲ ಕಾರಣ ಶ್ರೀ ಊರಮಾರಮ್ಮ ಗ್ರಾಮಾಭಿವೃದ್ಧಿ ಸಂಘದ ಪದಾಧಿಕಾರಿಗಳು.
ಟಿ.ಮಲ್ಲೀಗೆರೆ ಗ್ರಾಮದ ಶ್ರೀ ಊರಮಾರಮ್ಮ ದೇವಾಲಯಕ್ಕೆ ಹೊಂದಿಕೊಂಡಂತಿರುವ ಗುಂಡುತೋಪು ಜಾಗ ಅಭಿವೃದ್ಧಿ ಕಾಣದೆ ಹತ್ತಾರು ವರ್ಷಗಳಿಂದ ಅನಾಥವಾಗಿತ್ತು. 6 ಎಕರೆ 3 ಗುಂಟೆ ವ್ಯಾಪ್ತಿಯ ಪ್ರದೇಶದಲ್ಲಿ ಗಿಡ-ಗಂಟೆಗಳು, ಮುಳ್ಳಿನ ಗಿಡಗಳು ಬೆಳೆದುಕೊಂಡು ಬಳ್ಳಿಗಳು ಆವರಿಸಿಕೊಂಡಿದ್ದವು. ಇಡೀ ಪ್ರದೇಶ ಕಾಡಿನ ಸ್ವರೂಪ ಪಡೆದುಕೊಂಡಿತ್ತು.
ಗಿಡಗಂಟಿಗಳ ತೆರವು: ಗ್ರಾಮ ದೇವತೆ ಶ್ರೀ ಊರಮಾರಮ್ಮ ದೇವಸ್ಥಾನಕ್ಕೆ ವಿದ್ಯುತ್ ದೀಪದ ಬೆಳಕಿಲ್ಲದೆ ಕತ್ತಲು ಆವರಿಸಿತ್ತು. ರಾತ್ರಿ ಸಮಯದಲ್ಲಿ ಈ ಜಾಗಕ್ಕೆ ಹೋಗುವುದಕ್ಕೆ ಭಯಪಡುವಂತಹ ವಾತಾವರಣವಿತ್ತು. ಗ್ರಾಮದೇವತೆ ಶ್ರೀ ಊರಮಾರಮ್ಮ ಗ್ರಾಮಾಭಿವೃದ್ಧಿ ಸಂಘದ ಪದಾಧಿಕಾರಿಗಳೆಲ್ಲರೂ ಗುಂಡುತೋಪು ಜಾಗದಲ್ಲಿ ಬೆಳೆದಿದ್ದ ಗಿಡ- ಗಂಟಿಗಳನ್ನೆಲ್ಲಾ ತೆರವುಗೊಳಿಸಿ ಕಾಯಕಲ್ಪ ನೀಡುವುದಕ್ಕೆ ಸನ್ನದ್ಧರಾದರು.
ಉಳುಮೆ ಮಾಡಿ ಸಮತಟ್ಟು: ಶ್ರೀ ಊರಮಾರಮ್ಮ ಗ್ರಾಮಾಭಿವೃದ್ಧಿ ಸಂಘದ ಈ ಜನೋಪಯೋಗಿ ಕಾರ್ಯಕ್ಕೆ ಗ್ರಾಮಸ್ಥರೂ ಕೈಜೋಡಿ ಸಿದರು. ಗುಂಡುತೋಪು ಜಾಗದಲ್ಲಿದ್ದ ಗಿಡ-ಗಂಟಿಗಳನ್ನೆಲ್ಲಾ ತೆರವುಗೊಳಿಸಿ ಮಟ್ಟ ಮಾಡಿದರು. ಸಣ್ಣ-ಪುಟ್ಟ ಗಿಡ-ಮರಗಳನ್ನೆಲ್ಲಾ ಬೇರು ಸಹಿತ ಕಿತ್ತೆಸೆದರು. ಒಳಗಡೆ ಇದ್ದ ಕಲ್ಲುಗಳನ್ನೆಲ್ಲಾ ತೆಗೆದು ರಸ್ತೆಬದಿಗೆ ಹಾಕಿದರು. ಇಡೀ ಗುಂಡು ತೋಪು ಜಾಗವನ್ನು ಟ್ರ್ಯಾಕ್ಟರ್ ಸಹಾಯದಿಂದ ಉಳುಮೆ ಮಾಡಿದರು. ಭೂಮಿ ಸ್ವಚ್ಛಗೊಳಿಸಿದರು.
ಸಸಿ ನೆಡಲು ತೀರ್ಮಾನ: ಆನಂತರ ಗುಂಡು ತೋಪಿನ ಆರು ಎಕರೆ ಜಾಗದಲ್ಲಿ 200 ತೆಂಗಿನ ಸಸಿಗಳನ್ನು ನೆಡಲು ನಿರ್ಧರಿಸಿದ ಗ್ರಾಮಾಭಿವೃದ್ಧಿ ಸಂಘದ ಸದಸ್ಯರು ತಾವೇ ಗುಂಡಿಗಳನ್ನು ತೆಗೆದು ಸಸಿ ನೆಟ್ಟು ದನ-ಕರುಗಳಿಂದ ಸಸಿಗಳನ್ನು ರಕ್ಷಣೆ ಮಾಡಲು ಸುತ್ತ ತಂತಿ ಬೇಲಿ ನಿರ್ಮಿಸಿ ಪೋಷಣೆ ಮಾಡುತ್ತಿರುವುದು ಇತರರಿಗೂ ಮಾದರಿಯಾಗಿದೆ. ಇದಲ್ಲದೆ ಜೂ.5ರಂದು ಉಳಿದ ಜಾಗದಲ್ಲಿ ಹೊಂಗೆ, ಬೇವು, ಬೀಟೆ, ಮಾವು ಸೇರಿದಂತೆ ವಿವಿಧ ಜಾತಿಯ 500 ಸಸಿಗಳನ್ನು ನೆಟ್ಟು ಬೆಳೆಸಲು ಸಂಘದವರು ತೀರ್ಮಾನಿಸಿದ್ದಾರೆ.
ದೇಗುಲಕ್ಕೆ ವಿದ್ಯುಚ್ಛಕ್ತಿ ವ್ಯವಸ್ಥೆ: ಗುಂಡು ತೋಪಿನ ಜಾಗ ಸಂಪೂರ್ಣ ಸ್ವಚ್ಛಗೊಂಡು ತೆಂಗಿನ ಸಸಿಗಳಿಂದ ಕೂಡಿ ಹೊಸ ರೂಪ ಪಡೆದುಕೊಂಡಿದ್ದರಿಂದ ಶ್ರೀ ಊರಮಾರಮ್ಮ ದೇವಾಲಯಕ್ಕೆ ಈಗ ಮೆರುಗು ಬಂದಿದೆ. ಗ್ರಾಮ ಪಂಚಾಯಿತಿಯವರು ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರ ಕಾರ್ಯವನ್ನು ಮೆಚ್ಚಿ ದೇಗುಲಕ್ಕೆ ವಿದ್ಯುಚ್ಛಕ್ತಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಟಿ.ಮಲ್ಲೀಗೆರೆ ಗ್ರಾಮದ ಶ್ರೀ ಊರಮಾರಮ್ಮ ದೇಗುಲದ ಗುಂಡುತೋಪಿನ ಜಾಗ ವಾಯುವಿಹಾರಿಗಳಿಗೂ ಅನುಕೂಲಕರ ವಾತಾವರಣವಾಗಿ ರೂಪುಗೊಂಡಿದೆ. ರಸ್ತೆ ಡಾಂಬರೀಕರಣವಾಗಿದ್ದು, ಈ ಭಾಗದಲ್ಲಿ ಸೇತುವೆ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಶ್ರೀ ಊರಮಾರಮ್ಮ ಗ್ರಾಮಾಭಿವೃದ್ಧಿ ಸಂಘದವರ ಶ್ರಮ ಹಾಗೂ ಗ್ರಾಮಸ್ಥರ ಸಹಕಾರದಿಂದ ಗುಂಡು ತೋಪಿನ ಜಾಗಕ್ಕೆ ಹೊಸ ಕಾಯಕಲ್ಪ ಸಿಕ್ಕಿರುವುದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೆಚ್ಚುಗೆ ಸೂಚಿಸಿದ್ದಾರೆ. ಪಂಚಾಯಿತಿ ಪಿಡಿಒ ಯೋಗಾನಂದ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಸಂಘದ ಪದಾಧಿಕಾರಿಗಳು ಗುಂಡು ತೋಪಿನ ಜಾಗವನ್ನು ಅಮೂಲಾಗ್ರವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ ಎಂದು ಸಂಘದ ಪದಾಧಿಕಾರಿ ಟಿ.ಮಲ್ಲೀಗೆರೆ ಎಂ.ಬಿ.ಲೋಕೇಶ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.