ಶಾಲೆಗಳಿಗೆ ಬಂದಿಲ್ಲ ಆರ್‌ಟಿಇ ಹಣ

ಮೊದಲ ಕಂತಿನ ಹಣ ಮಾತ್ರ ಬಿಡುಗಡೆ | ಖಾಸಗಿ ಶಾಲೆಗಳ ಆಡಳಿತ ಮಂಡಳಿಗೆ ಸಂಕಷ್ಟ

Team Udayavani, Jun 3, 2019, 1:10 PM IST

tk-tdy-3..

ಹುಳಿಯಾರು: ಹೊಸ ಶೈಕ್ಷಣಿಕ ವರ್ಷ ಆರಂಭವಾದರೂ ಕಳೆದ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅನುದಾನ ಇನ್ನೂ ಖಾಸಗಿ ಶಾಲೆಗಳಿಗೆ ಬಾರದೆ ಆಡಳಿತ ಮಂಡಳಿ ಸಂಕಷ್ಟದಲ್ಲಿ ಶಾಲೆ ನಡೆಸುವಂತ್ತಾಗಿದೆ.

ಹೌದು, ಬಡ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಸರ್ಕಾರ ಜಾರಿಗೆ ತಂದ ಈ ಕಾಯ್ದೆಯಂತೆ ಪ್ರವೇಶ ಪಡೆದ ಮಕ್ಕಳ ವೆಚ್ಚವನ್ನು ಆಯಾ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಸರ್ಕಾರ ನೀಡಬೇಕಿದೆ. ಆದರೆ, ಶೈಕ್ಷಣಿಕ ವರ್ಷ ಆರಂಭವಾದರೂ ಇದುವರೆಗೆ ಸರ್ಕಾರ ಶಾಲೆಗಳಿಗೆ 2ನೇ ಹಂತದ ಅನುದಾನ ಬಿಡುಗಡೆ ಮಾಡದೆ ವಿಳಂಬ ಮಾಡಿದೆ.

2ನೇ ಕಂತಿನ ಹಣ ನೀಡಿಲ್ಲ: ಆರ್‌ಟಿಇ ಅಡಿ ಪ್ರವೇಶ ಪಡೆದ ರಾಜ್ಯದ ಎಲ್ಲ ಮಕ್ಕಳಿಗೂ ಪ್ರತಿ ವರ್ಷ ಸರ್ಕಾರ ಒಂದು ಮಗುವಿಗೆ ಆಯಾ ಶಾಲೆಗೆ ಶುಲ್ಕಕ್ಕೆ ಅನುಗುಣವಾಗಿ 8ರಿಂದ 16 ಸಾವಿರ ರೂ. ಬಿಡುಗಡೆ ಮಾಡಬೇಕು. ಆದರೆ, 2018- 19ನೇ ಸಾಲಿನಲ್ಲಿ ಮೊದಲ ಕಂತಿನ ಹಣವನ್ನು ಮಾತ್ರ ಬಿಡುಗಡೆ ಮಾಡಿದೆ. ಶೈಕ್ಷಣಿಕ ವರ್ಷ ಮುಗಿದು ಹೊಸ ವರ್ಷ ಆರಂಭವಾದರೂ ಎರಡನೇ ಕಂತಿನ ಹಣ ಮಾತ್ರ ನೀಡಿಲ್ಲ.

ಹಣ ಬಿಡುಗಡೆಗೆ ವಿಳಂಬ: ಆರ್‌ಟಿಇ ಹಣ ಬಿಡುಗಡೆಗೆ ವಿಳಂಬವಾಗಲು ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಕಡ್ಡಾಯ ಹಾಜರಾತಿ, ಆಡಿಟ್ ರಿಪೋರ್ಟ್‌ ಸೇರಿದಂತೆ ಇತರೆ ಮಾಹಿತಿಯನ್ನು ಆನ್‌ಲೈನ್‌ ಮೂಲಕ ಅಪ್‌ಲೋಡ್‌ ಮಾಡದೆ ಇರುವುದು ಕಾರಣವೆಂದು ಶಿಕ್ಷಣ ಇಲಾಖೆ ಹೇಳುತ್ತಿದೆ. ಆದರೆ, ಇದೆಲ್ಲವನ್ನೂ ಅಪ್‌ಲೋಡ್‌ ಮಾಡಿರುವ ಶಾಲೆಗಾದರೂ ಹಣ ಕೊಡಬಹುದಲ್ಲ ಎಂದು ಖಾಸಗಿ ಶಾಲೆಯವರು ಪ್ರತಿಪಾದಿಸುತ್ತಿದ್ದಾರೆ.

ಹಣ ಹೊಂದಿಸಲು ಪರದಾಟ: ಖಾಸಗಿ ಶಾಲೆಯ ದಾಖಲಾತಿಯ ಶೇ.25ರಷ್ಟು ಆರ್‌ಟಿಇ ಅಡಿ ಪ್ರವೇಶ ಕೊಡಬೇಕಿದೆ. ಅದರಂತೆ ಪ್ರವೇಶ ಕೊಟ್ಟ ಶಾಲೆಗಳಿಗೆ 2ನೇ ಕಂತಿನಲ್ಲಿ ಒಂದು ಲಕ್ಷದಿಂದ ಹತ್ತದಿನೈದು ಲಕ್ಷ ರೂ. ಬಾಕಿ ಬರಬೇಕಿದೆ. ಪರಿಣಾಮ ಶಿಕ್ಷಕರ ಸಂಬಳ, ವ್ಯಾನ್‌ ಮೈಟೆನಿಂಗ್ಸ್‌, ಕರೆಂಟ್, ಇಂಟರ್‌ನೆಟ್ ಬಿಲ್ ಹೀಗೆ ಅಗತ್ಯ ಶಾಲಾ ವೆಚ್ಚಕ್ಕೆ ಹಣ ಹೊಂದಿಸಲು ಆಡಳಿತ ಮಂಡಳಿ ಪರದಾಡುತ್ತಿದ್ದಾರೆ.

ಇನ್ನಾದರೂ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ನಿರ್ವಹಣೆಯ ಕಷ್ಟ ಅರಿತು ತಕ್ಷಣ ಆರ್‌ಟಿಇಯ ಎರಡನೇ ಕಂತಿನ ಹಣ ಬಿಡುಗಡೆ ಮಾಡಬೇಕಿದೆ. ಈ ಮೂಲಕ ಶಾಲೆಯಲ್ಲಿ ಆರ್‌ಟಿಇ ಮಕ್ಕಳ ಶೋಷಣೆ ತಪ್ಪಿಸಬೇಕಿದೆ. ಜೊತೆಗೆ 2019-20ನೇ ಸಾಲಿನ ಆರ್‌ಟಿಇ ಮೊದಲ ಕಂತಿನ ಹಣ ಬಿಡುಗಡೆಗೆ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ.

● ಎಚ್.ಬಿ.ಕಿರಣ್‌ ಕುಮಾರ್‌

ಟಾಪ್ ನ್ಯೂಸ್

The audio rights of 45 movie were sold for a whopping sum

Arjun Janya: ಭರ್ಜರಿ ಮೊತ್ತಕ್ಕೆ ಮಾರಾಟವಾಯ್ತು ʼ45ʼ ಆಡಿಯೋ ರೈಟ್ಸ್

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ

Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ

Mirzapur The Film : ಸಿನಿಮಾವಾಗಿ ಬರಲಿದೆ ಸೂಪರ್‌ ಹಿಟ್‌ ʼಮಿರ್ಜಾಪುರ್‌ʼ ಸರಣಿ

Mirzapur The Film : ಸಿನಿಮಾವಾಗಿ ಬರಲಿದೆ ಸೂಪರ್‌ ಹಿಟ್‌ ʼಮಿರ್ಜಾಪುರ್‌ʼ ಸರಣಿ

PCB: ನಾಲ್ಕೇ ತಿಂಗಳಿಗೆ ಪಾಕ್‌ ಕೋಚ್‌ ಸ್ಥಾನ ತ್ಯಜಿಸಿದ ಗ್ಯಾರಿ ಕರ್ಸ್ಟನ್;‌ ಕಾರಣ ಇಲ್ಲಿದೆ

PCB: ನಾಲ್ಕೇ ತಿಂಗಳಿಗೆ ಪಾಕ್‌ ಕೋಚ್‌ ಸ್ಥಾನ ತ್ಯಜಿಸಿದ ಗ್ಯಾರಿ ಕರ್ಸ್ಟನ್;‌ ಕಾರಣ ಇಲ್ಲಿದೆ

Gangavathi: ಕಾಲುಬಾಯಿ ರೋಗ… ಒಂದೇ ವಾರದಲ್ಲಿ 30ಕ್ಕೂ ಹೆಚ್ಚು ಕುರಿ-ಮೇಕೆಗಳ ಸಾವು

Gangavathi: ಕಾಲುಬಾಯಿ ರೋಗ… ಒಂದೇ ವಾರದಲ್ಲಿ 30ಕ್ಕೂ ಹೆಚ್ಚು ಕುರಿ-ಮೇಕೆಗಳ ಸಾವು

Bellary: ಕನ್ನಡಿಗರಿಗೆ, ಯಶ್‌ ಅಭಿಮಾನಿಗಳಿಗೆ ಅವಮಾನ ಮಾಡಿಲ್ಲ: ಪುಷ್ಪ 2 ವಿತರಕ

Bellary: ಕನ್ನಡಿಗರಿಗೆ, ಯಶ್‌ ಅಭಿಮಾನಿಗಳಿಗೆ ಅವಮಾನ ಮಾಡಿಲ್ಲ: ಪುಷ್ಪ 2 ವಿತರಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Kunigal: ಅಪ್ರಾಪ್ತೆಯ ಅಪಹರಣ, ಲೈಂಗಿಕ ದೌರ್ಜನ್ಯ; ಗುಜರಾತ್ ನಲ್ಲಿ ಬಂಧನ

Jeeda

Tumakuru: ದೇವರಾಯನದುರ್ಗದಲ್ಲಿ ಹೊಸ ಮಾದರಿ ಜೇಡ ಪತ್ತೆ

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

3-tumkur-dasara

Dasara: ಇದೇ ಮೊದಲ ಬಾರಿಗೆ ತುಮಕೂರು ಜಿಲ್ಲಾಡಳಿತದ ವತಿಯಿಂದ ಅದ್ಧೂರಿ ದಸರಾ ಆಚರಣೆ

12-koratagere

Koratagere: ಮೈಸೂರು ದಸರಾದಲ್ಲಿ ಸಿದ್ದರಬೆಟ್ಟ ಸ್ತಬ್ದಚಿತ್ರ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Potholes: ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು

Potholes: ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು

7

Arrested: ವಿದ್ಯಾರ್ಥಿನಿಗೆ ಮುತ್ತು ನೀಡಿದ್ದ ಸೆಕ್ಯುರಿಟಿ ಗಾರ್ಡ್‌ ಬಂಧನ

The audio rights of 45 movie were sold for a whopping sum

Arjun Janya: ಭರ್ಜರಿ ಮೊತ್ತಕ್ಕೆ ಮಾರಾಟವಾಯ್ತು ʼ45ʼ ಆಡಿಯೋ ರೈಟ್ಸ್

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ

Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.