ಕಲಾ ಸಂಘಟನೆಗಳಿಗೆ ನೆರವು ಒದಗಿಸಿ
ರಂಗಶಿಕ್ಷಣ ಚಟುವಟಿಕೆ ನಿರಂತರವಾಗಿರಲಿ•ಪ್ರೇಕ್ಷಕರ ಮನಗೆದ್ದ ಮಕ್ಕಳ ನಾಟಕ ಪ್ರದರ್ಶನ
Team Udayavani, Jun 3, 2019, 5:06 PM IST
ಮರಿಯಮ್ಮನಹಳ್ಳಿ: ಪಟ್ಟಣದಲ್ಲಿ ರಂಗಚೌಕಿ ಕಲಾಟ್ರಸ್ಟ್ ವತಿಯಿಂದ ಒಂದು ತಿಂಗಳ ಕಾಲ ಜರುಗಿದ ಅಜ್ಜಿಮನೆ ಬೇಸಿಗೆ ಶಿಬಿರದ ನಾಟಕೋತ್ಸವವನ್ನು ಜಾನಪದ ಅಕಾಡೆಮಿ ಸದಸ್ಯೆ ಮಾತಾ ಮಂಜಮ್ಮ ಜೋಗತಿ ಉದ್ಘಾಟಿಸಿದರು.
ಮರಿಯಮ್ಮನಹಳ್ಳಿ: ಮಕ್ಕಳ ಶಿಬಿರಗಳನ್ನು ಆಯೋಜಿಸುವ ಕಲಾ ಸಂಘಟನೆಗಳಿಗೆ ನಾಟಕ ಅಕಾಡೆಮಿ ಅಗತ್ಯ ಹಣಕಾಸಿನ ನೆರವು ನೀಡಬೇಕು ಎಂದು ಜಾನಪದ ಅಕಾಡೆಮಿ ಸದಸ್ಯೆ ಮಾತಾ ಮಂಜಮ್ಮ ಜೋಗತಿ ಆಗ್ರಹಿಸಿದರು.
ಪಟ್ಟಣದ ದುರ್ಗಾದಾಸ ಬಯಲು ರಂಗಮಂದಿರದಲ್ಲಿ ರಂಗಚೌಕಿ ಕಲಾ ಟ್ರಸ್ಟ್ ವತಿಯಿಂದ ಒಂದು ತಿಂಗಳ ಕಾಲ ಜರುಗಿದ ಅಜ್ಜಿಮನೆ ಬೇಸಿಗೆ ಶಿಬಿರದ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ರಂಗ ಶಿಬಿರಗಳು ನಡೆಸಲು ಲಕ್ಷಾಂತರ ರೂಪಾಯಿಗಳ ಅಗತ್ಯವಿದೆ. ಗ್ರಾಮೀಣ ಭಾಗಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗೂ ಈ ಶಿಬಿರಗಳ ಮಹತ್ವವಿದೆ. ಇದು ಸರ್ಕಾರದ ಜವಾಬ್ದಾರಿಯಾಗಬೇಕು. ಇಂತಹ ಶಿಬಿರಗಳಿಗೆ ಅಗತ್ಯ ಹಣಕಾಸಿನ ನೆರವು ನೀಡಬೇಕು ಎಂದರು.
ರಂಗಕರ್ಮಿ, ನಿವೃತ್ತ ಶಿಕ್ಷಕ ಮ.ಬ.ಸೋಮಣ್ಣ ಮಾತನಾಡಿ, ಮರಿಯಮ್ಮನಹಳ್ಳಿಯಂತಹ ಪಟ್ಟಣದಲ್ಲಿ ಈ ಬೇಸಿಗೆಯಲ್ಲಿ ಮೂರು ಮಕ್ಕಳ ಶಿಬಿರಗಳು ನಡೆದಿವೆ ಎಂಬುದೇ ಅಚ್ಚರಿಯ ಸಂಗತಿ. ಮಕ್ಕಳಿಗೆ ಸೂಕ್ತ ರಂಗಶಿಕ್ಷಣ ನೀಡುವ ಚಟುವಟಿಕೆಗಳು ನಿರಂತರ ನಡೆಯುತ್ತಲೇ ಇರುತ್ತವೆ ಎಂದರು.
ವೃತ್ತಿ ರಂಗ ಕಲಾವಿದೆ ಡಾ.ನಾಗರತ್ನಮ್ಮ ಮಾತನಾಡಿದರು. ರಂಗಚೌಕಿ ಕಲಾಟ್ರಸ್ಟ್ ಅಧ್ಯಕ್ಷೆ ಪುಷ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದ ನಿರ್ದೇಶಕ ಬಿ.ಸರದಾರ, ರಂಗಪ್ರೇಮಿ ಟಿ.ಎಂ.ನಾಗಭೂಷಣ ಇದ್ದರು.
ನಂತರ ಶಿಬಿರದ ಮಕ್ಕಳಿಂದ ಭೂತಕೋಲ ಕುಣಿತ, ಯಕ್ಷಗಾನ ಕುಣಿತ, ಕೋಲಾಟ, ರಂಗಗೀತೆ ಕಾರ್ಯಕ್ರಮಗಳು ಜರುಗಿದವು.
ಶಿಬಿರದ ಮಕ್ಕಳು ಅಭಿನಯಿಸಿದ ಎಸ್.ರಾಮನಾಥ ರಚನೆಯ ಮಹಾಭೋಜನ ನಾಟಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ನಾವು ಉಣ್ಣುವ ಮೊದಲ ತುತ್ತು ಕಾಗೆಗಳಿಗೆ ಮೀಸಲು ಯಾಕೆ ಇಡಬೇಕು ಎಂಬ ಸಂಗತಿಯನ್ನುಳ್ಳ ಕತೆಯಾಗಿದ್ದು, ಆಹಾರ ಪಡೆಯುವುದು ಎಲ್ಲರ ಹಕ್ಕು ಎಂಬ ಆಶಯವನ್ನು ಸಮರ್ಪಕವಾಗಿ ಮಂಡಿಸಿತು. ಮಕ್ಕಳ ಸ್ಪಷ್ಟ ಸಂಭಾಷಣೆ, ಸನ್ನಿವೇಷಕ್ಕೆ ತಕ್ಕ ಭಾವಾಭಿನಯ ಪ್ರೇಕ್ಷಕರ ಮನ ಗೆದ್ದಿತು. ಬಾರಿಗಿಡದ ಸರದಾರ ನಾಟಕ ನಿರ್ದೇಶನ ಮಾಡಿದ್ದರು. ಈ.ರಾಘವೇಂದ್ರ ಬೆಳಕಿನ ನಿರ್ವಹಣೆ ಮಾಡಿದರು. ಪುಷ್ಪ ರಂಗಸಜ್ಜಿಕೆ, ದಾದಾಪೀರ್ ಪ್ರಸಾದನ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.