ಕಲೆಯೇ ಜೀವನ ಸಾಕ್ಷಾತ್ಕಾರ

ಫೈನ್‌ ಆರ್ಟ್ಸ್ ಪದವಿ ಶಿಕ್ಷಣ

Team Udayavani, Jun 4, 2019, 6:00 AM IST

r-5

ಹಿಂದೊಂದು ಕಾಲವಿತ್ತು. ಕಲೆಯನ್ನು ಶಿಷ್ಯವೃತ್ತಿ ಮಾಡುವ ಮೂಲಕ ಕಲಿಯಬೇಕಿತ್ತು. ಕಲಾವಿದರ ಕಲೆಯನ್ನು ಎಷ್ಟೇ ಹೊಗಳಿ ಮೆಚ್ಚಿಕೊಂಡರೂ ಅದರಲ್ಲಿ ಭವಿಷ್ಯ ಕಾಣುವುದು ಕಷ್ಟ ಎನ್ನುವ ಅಭಿಪ್ರಾಯ ಬಹುತೇಕರಲ್ಲಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಕಲೆಯನ್ನೂ ಶೈಕ್ಷಣಿಕವಾಗಿ ಅಧ್ಯಯನ ಮಾಡಬಹುದು. ಎಂಜಿನಿಯರಿಂಗ್‌, ಎಂ.ಬಿ.ಬಿ.ಎಸ್‌ ಕೋರ್ಸುಗಳ ಹಾಗೆಯೇ ಕಲೆಯನ್ನೂ ಪದವಿಯಾಗಿ ಆರಿಸಿಕೊಳ್ಳಬಹುದು. ಕಲೆ, ಸೃಜನಶೀಲತೆ ಬಗ್ಗೆ ಆಸಕ್ತಿಯಿದ್ದವರಿಗೆ ತರಬೇತಿ ಶಿಕ್ಷಣ ನೀಡುವುದೇ “ಫೈನ್‌ ಆರ್ಟ್ಸ್’ ಪದವಿ.

ಕಲೆಯೂ ಒಂದು ವೃತ್ತಿ
ಕಲೆಯನ್ನು ಒಂದು ಅಭಿವ್ಯಕ್ತಿ ಮಾಧ್ಯಮವಾಗಿ ಬಳಸುವುದು ಹೇಗೆ ಎಂಬುದನ್ನು ಈ ಕೋರ್ಸ್‌ನಲ್ಲಿ ಕಲಿಸಲಾಗುವುದು. ಕಲೆಯನ್ನು ವೃತ್ತಿಯಾಗಿ ಯಾವೆಲ್ಲಾ ರೀತಿಯಲ್ಲಿ, ಯಾವೆಲ್ಲಾ ಕ್ಷೇತ್ರಗಳಲ್ಲಿ ಬಳಸಿಕೊಳ್ಳಬಹುದು ಎಂಬ ವಿಷಯದಲ್ಲಿ ಹೊರದೇಶಗಳಿಗೆ ಹೋಲಿಸಿದರೆ ಭಾರತ ಕೊಂಚ ಹಿಂದೆ ಬಿದ್ದಿದೆ ಎಂದೇ ಹೇಳಬಹುದು. ಆದರೆ ದಶಕಗಳ ಹಿಂದಿನ ಪರಿಸ್ಥಿತಿಗಿಂತ ಈಗ ಅವಕಾಶಗಳು ಹೆಚ್ಚುತ್ತಿವೆ ಎನ್ನಬಹುದು. ಯುವ ಕಲಾವಿದರು ಕಲೆಯನ್ನೇ ವೃತ್ತಿಯಾಗಿ ಸ್ವೀಕರಿಸಿ, ಹಣ ಸಂಪಾದನೆಯ ಮಾರ್ಗವಾಗಿ ರೂಪಿಸುವಲ್ಲಿ ಹಿಂದಿನವರಿಗಿಂತ ಹೆಚ್ಚು ಉತ್ಸುಕರಾಗಿದ್ದಾರೆ. ತಮ್ಮದೇ ಆದ ದಾರಿಗಳನ್ನೂ ಕಂಡುಕೊಳ್ಳುತ್ತಿದ್ದಾರೆ. ಕಲೆ ಎನ್ನುವುದು ಕೇವಲ ಪ್ಯಾಷನ್‌ ಮಾತ್ರವೇ ಅಲ್ಲ ಪ್ರೊಫೆಷನ್‌ ಕೂಡಾ ಆಗಬಹುದು ಎನ್ನುವ ಅಭಿಪ್ರಾಯ ಈಗೀಗ ಸಮಾಜದಲ್ಲಿ ಮೂಡುತ್ತಿದೆ.

ಅರ್ಹತೆ ಮತ್ತು ಕೋರ್ಸ್‌ನ ವಿವರಗಳು
ಫೈನ್‌ ಆರ್ಟ್ಸ್ನಲ್ಲಿ ಪದವಿ ಪಡೆಯಲು ಪಿ.ಯು.ಸಿ. (10 + 2) ಅಥವಾ ತತ್ಸಮಾನ ಪರೀಕ್ಷೆ ಪಾಸಾಗಿರಬೇಕು. ಇದು ಮೂರರಿಂದ ನಾಲ್ಕು ವರ್ಷಗಳಲ್ಲಿ ಪಡೆಯಬಹುದಾದ ಪದವಿ. ಇದರಲ್ಲೇ ಉನ್ನತ ಪದವಿ ಓದಬಯಸುವವರು ಫೈನ್‌ ಆರ್ಟ್ಸ್ನಲ್ಲಿ ಮಾಸ್ಟರ್ ವರೆಗೂ ಕಲಿಕೆ ಮುಂದುವರಿಸಬಹುದು. ಅದರ ಅವಧಿ ಎರಡು ವರ್ಷಗಳದ್ದು. ಈ ಕೋರ್ಸ್‌ಗಳ ಅವಧಿಯಲ್ಲಿ ಪೇಂಟಿಂಗ್‌, ಕೆತ್ತನೆ, ಗ್ರಾಫಿಕ್‌ ಡಿಸೈನ್‌, ಮ್ಯೂರಲ್‌ ಡಿಸೈನ್‌ ಕಲಿಸಲಾಗುವುದು. ಫೈನ್‌ ಆರ್ಟ್ಸ್ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳ ಕಲೆಯನ್ನು ಜಗತ್ತಿಗೆ ತೆರೆದಿಡಲು ಪ್ರದರ್ಶನಗಳನ್ನು ಹಮ್ಮಿಕೊಳ್ಳುತ್ತವೆ. ಅಲ್ಲಿ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಂದ, ಕಲಾಭಿಮಾನಿಗಳಿಂದ ನೇರ ವಿಮರ್ಶೆ, ಪ್ರಶಂಸೆ ದೊರೆಯುವುದುಂಟು. ಇದಕ್ಕೆ ಸಂಬಂಧಿಸಿದ ಇತರೆ ಕೋರ್ಸುಗಳೆಂದರೆ

ಇಂಟರ್‌ನ್ಯಾಷನಲ್‌ ಪ್ರೋಗ್ರಾಂ ಇನ್‌ ವಿಷುವಲ್‌ ಆರ್ಟ್ಸ್
ಪೇಂಟಿಂಗ್‌, ಟೆಕ್ಸ್‌ಟೈಲ್‌ ಡಿಸೈನ್‌ ಮತ್ತು ಫೊಟೋಗ್ರಫಿಯಲ್ಲಿ ಡಿಪ್ಲೊಮಾ
ಫ್ಯಾಷನ್‌ ಡಿಸೈನ್‌; ಅಡ್ವಾನ್ಸ್‌ಡ್‌ ಡಿಪ್ಲೊಮಾ
ಡಿಪ್ಲೊಮಾ ಆ್ಯಂಡ್‌ ಸರ್ಟಿಫಿಕೆಟ್‌ ಕೋರ್ಸ್‌ ಇನ್‌ ಕಂಪ್ಯೂಟರ್‌ ಗ್ರಾಫಿಕ್ಸ್‌

ಬ್ಯಾಚುಲರ್‌ ಇನ್‌ ಫೈನ್‌ ಆರ್ಟ್ಸ್
ಜೊತೆಗೆ ಇವುಗಳಲ್ಲಿ ಯಾವುದಾದರೊಂದರಲ್ಲಿ ವಿಶೇಷ ಪರಿಣತಿ ಗಳಿಸಬಹುದು; ಪೈಂಟಿಂಗ್‌ ಆಂಡ್‌ ಡ್ರಾಯಿಂಗ್‌, ಇಲಸ್ಟ್ರೇಷನ್‌, ಕಾಮಿಕ್ಸ್‌, ಪ್ರಿಂಟ್‌ ಮೇಕಿಂಗ್‌ ಆಂಡ್‌ ಇಮೇಜಿಂಗ್‌, ಚಾಯಾಗ್ರಹಣ, ಕಾನ್ಸೆಪುcಯಲ್‌ ಆರ್ಟ್‌, ರಂಗಭೂಮಿ, ವಾಸ್ತುಶಿಲ್ಪ ತಜ್ಞ, ಶಿಲ್ಪಿ.

ಫೈನ್‌ ಆರ್ಟ್ಸ್ ಕರಿಯರ್‌
ಫೈನ್‌ ಆರ್ಟ್ಸ್ ಪದವೀಧರರು ಪ್ರಕಾಶನ ಸಂಸ್ಥೆಗಳಲ್ಲಿ, ಆರ್ಟ್‌ ಸ್ಟುಡಿಯೋಗಳಲ್ಲಿ, ಸಾಫ್ಟ್ವೇರ್‌ ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಬಹುದಲ್ಲದೆ ಫ್ರೀಲಾನ್ಸರ್‌ ಆಗಿಯೂ ಕೆಲಸ ಮಾಡಬಹುದು. ಅನುಭವ ಪಡೆದ ಬಳಿಕ ಕಲಾತಜ್ಞರಾಗಿ, ಕಲಾ ವಿಮರ್ಶಕರಾಗಿ ಅವರು ಸೇವೆ ಸಲ್ಲಿಸಬಹುದು ಅಲ್ಲದೆ ಇವರಿಗೆ ಸಿನೆಮಾ, ವಿದ್ಯುನ್ಮಾನ ಮಾಧ್ಯಮ, ದಿನಪತ್ರಿಕೆ, ಟೆಕ್ಸ್‌ಟೈಲ್‌ ಇಂಡಸ್ಟ್ರಿ, ಪ್ರಕಾಶನ ಸಂಸ್ಥೆಗಳಲ್ಲಿ ಕೌಶಲ್ಯಕ್ಕೆ ತಕ್ಕಂತೆ ಸಂಭಾವನೆ ನೀಡುತ್ತಾರೆ. ಆರ್ಟ್‌ ಹಿಸ್ಟೊರಿಯನ್‌, ಆರ್ಟ್‌ ಡೀಲರ್‌, ಆರ್ಟ್‌ ಥೆರಪಿಸ್ಟ್‌, ಆರ್ಟ್‌ ಎಜುಕೇಟರ್‌ ಆಗಿಯೂ ಇವರು ಸೇವೆ ಸಲ್ಲಿಸಬಹುದು.

ಪ್ರತಿಷ್ಟಿತ ವಿದ್ಯಾಸಂಸ್ಥೆಗಳು
ಚಿತ್ರಕಲಾ ಮಹಾವಿದ್ಯಾಲಯ, ಬೆಂಗಳೂರು
ಯೂನಿವರ್ಸಿಟಿ ಕಾಲೇಜ್‌ ಆಫ್ ಫೈನ್‌ ಆರ್ಟ್ಸ್, ಮೈಸೂರು
ವಿಶ್ವಭಾರತಿ, ಶಾಂತಿನಿಕೇತನ, ಪಶ್ಚಿ ಮ ಬಂಗಾಳ
ಸರ್‌ ಜೆ.ಜೆ. ಸ್ಕೂಲ್‌ ಆಫ್ ಆರ್ಟ್ಸ್, ಮುಂಬಯಿ
ಬನಾರಸ್‌ ಹಿಂದೂ ಯೂನಿವರ್ಸಿಟಿ, ವಾರಣಸಿ
ಆಲಿಗಡ ಮುಸ್ಲಿಮ್‌ ಯೂನಿವರ್ಸಿಟಿ

– ರಘು ವಿ., ಪ್ರಾಂಶುಪಾಲರು

ಟಾಪ್ ನ್ಯೂಸ್

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

5-madikeri

ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು

ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ

Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Gangavathi: ಕ್ಲಿಫ್ ಜಂಪಿಂಗ್‌ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…

Gangavathi: ಕ್ಲಿಫ್ ಜಂಪಿಂಗ್‌ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…

5-madikeri

ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು

9

Udupi: ವಾಹನ ದಟ್ಟಣೆ ನಿಯಂತ್ರಣ ಕ್ರಮ ಎಷ್ಟು ಫ‌ಲಪ್ರದ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.