ರೋಮನ್ ಕೆಥೊಲಿಕ್ ಕ್ರೀಡಾಕೂಟ: ಏಕತೆ ಮೂಡಿಸಲು ಶಾಸಕರ ಕರೆ
Team Udayavani, Jun 4, 2019, 6:00 AM IST
ಮಡಿಕೇರಿ: ವಿವಿಧ ಸಮಾಜಗಳನ್ನು ಒಗ್ಗೂಡಿಸುವ ಮೂಲಕ ದೇಶದಲ್ಲಿ ಐಕಟನ್ನು ಮೂಡಿಸಲು ಎಲ್ಲ ಕೈಜೋಡಿಸಬೇಕೆಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಕರೆ ನೀಡಿದ್ದಾರೆ.
ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ 8ನೇ ವರ್ಷದ ರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಕಪ್’ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದಿರುವವರನ್ನು ಗುರುತಿಸಿ ಶೈಕ್ಷಣಿಕ ಮತ್ತು ಆರ್ಥಿಕ ಸಹಕಾರ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಕರೆ ತರಬೇಕೆಂದರು.
ಯುವಕ್ರೀಡಾ ಪ್ರತಿಭೆಗಳಿಗೆ ಪೋ›ತ್ಸಾಹ ನೀಡುವ ಕಾರ್ಯ ಆಗಬೇಕು. ಪ್ರತಿಯೊಬ್ಬರು ಯೋಗ, ಧ್ಯಾನದ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ಉತ್ತಮ ಜೀವನವನ್ನು ನಡೆಸುವಂತಾಗಬೇಕು ಎಂದು ಅಪ್ಪಚ್ಚುರಂಜನ್ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರೋಮನ್ ಕೆಥೊಲಿಕ್ ಅಸೋಸಿ ಯೇಷನ್ ಸ್ಥಾಪಕಾಧ್ಯಕ್ಷ ವಿ.ಎ.ಲಾರೆನ್ಸ್, ಕ್ರೆçಸ್ತ ಸಮುದಾಯಕ್ಕೆ ಸರ್ಕಾರಗಳು ಸಾಕಷ್ಟು ಸೌಲಭ್ಯಗಳನ್ನು ನೀಡಿದ್ದು, ಅವುಗಳನ್ನು ಸದುಪ ಯೋಗಪಡಿಸಿಕೊಂಡು ಅಭ್ಯುದಯವನ್ನು ಸಾಧಿಸಬೇಕೆಂದರು.
ಸಮಾಜ ಬಾಂಧವರನ್ನು ಕ್ರೀಡೆಯ ಮೂಲಕ ಒಂದುಗೂಡಿಸುವ ಪ್ರಯತ್ನ ಮಾಡಲಾಗಿದ್ದು, ಇಂತಹ ವಿಭಿನ್ನ ಕಾರ್ಯಕ್ರಮಗಳು ಮುಂದೆಯೂ ನಡೆಯುವಂತಾಗಬೇಕು ಎಂದವರು ಹೇಳಿದರು.
ಸಂತ ಮೈಕಲರ ದೇವಾಲಯದ ಧರ್ಮಗುರು ಫಾ.ಆಲ್ಫೆಡ್ ಜಾನ್ ಮೆಂಡೊನ್ಸ್ ಧ್ವಜಾರೋಹಣ ನೆರವೇ ರಿಸಿದರು. ಅನಂತರ ಕ್ರೀಡಾಕೂಟಕ್ಕೆ ಗಣ್ಯರು ಬ್ಯಾಟಿಂಗ್, ಬೌಲಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.
ಅಸೋಸಿಯೇಷನ್‌ನ ಅಧ್ಯಕ್ಷ ಜೋಸೆಫ್ ಸ್ಯಾಂ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬಾಕೂರು ಶಿರಂಗಾಲ ಗ್ರಾ.ಪಂ. ಸದಸ್ಯರಾದ ಬಿಜು, ಪ್ರಧಾನ ಕಾರ್ಯದರ್ಶಿ ಜಾನ್ಸನ್ ಪಿಂಟೊ, ಖಜಾಂಚಿ ರಾಯ್ ಐ.ಡಿ., ಡೆನ್ನಿ ಬರೋಸ್ ಮುಂತಾದವರು ಪಸ್ಥಿತರಿದ್ದರು.
“ಒಗ್ಗಟ್ಟು ಪ್ರದರ್ಶಿಸಿ’
ಸಂತ ಮೈಕಲರ ವಿದ್ಯಾಸಂಸ್ಥೆಯ ಧರ್ಮಗುರು ಫಾ| ನವೀನ್ ಅವರು ಮಾತ ನಾಡಿ, ಕ್ರೆçಸ್ತ ಸಮುದಾಯದ ಎಲ್ಲರೂ ಒಂದೇ ಕುಟುಂಬದ ಸದಸ್ಯರಿ ದ್ದಂತೆ, ಪ್ರತಿ ಸಂದರ್ಭದಲ್ಲೂ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಯಶಸ್ಸನ್ನು ಸಾಧಿಸಬೇಕೆಂದರು.
ಮೈಸೂರಿನ ಉದ್ಯಮಿ ಗ್ರೇಷಿ ಯನ್ ರೋಡ್ರಿಗಸ್ ಮಾತನಾಡಿ, ಎಲ್ಲಾ ಕ್ಷೇತ್ರದಲ್ಲೂ ಕ್ರೆçಸ್ತ ಸಮುದಾಯ ಗುರುತಿಸಿಕೊಳ್ಳಬೇಕೆಂದರು.
ಸಾಧಕರಿಗೆ ಸಮ್ಮಾನ
ನಗರಸಭೆಯ ಮಾಜಿ ಸದಸ್ಯ ಕೆ.ಜಿ.ಪೀಟರ್, ಸೋಮವಾರಪೇಟೆ ಪ.ಪಂ.ಸದಸ್ಯೆ ಶೀಲಾ ಡಿ”ಸೋಜಾ, ವಿರಾಜಪೇಟೆ ಪ.ಪಂ ಸದಸ್ಯ ಆಗಸ್ಟಿನ್ ಹಾಗೂ ಕ್ರೀಡಾಕ್ಷೇತ್ರದಿಂದ ಅಂಥೋಣಿ ಡಿ”ಸೋಜಾ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.