ಹರಿಕಥಾ ಸತ್ಸಂಗದಿಂದ ಹೃದಯ ಸಂಸ್ಕಾರ: ಡಾ| ವೀರೇಂದ್ರ ಹೆಗ್ಗಡೆ


Team Udayavani, Jun 4, 2019, 6:00 AM IST

03KSDE8

ಕಾಸರಗೋಡು: ಹರಿಕೀರ್ತನೆಗಳು ಧಾರ್ಮಿಕ ಜಾಗೃತಿ ಮತ್ತು ಸಾಂಸ್ಕೃತಿಕ ಕಾಳಜಿ ಮೂಡಿಸುವ ಕಲಾಪ್ರಕಾರಗಳು. ಹರಿಕಥಾ ಸತ್ಸಂಗದಿಂದ ಮಾನವನ ಹೃದಯ ಸಂಸ್ಕಾರಗೊಳ್ಳುತ್ತದೆ. ಸಮೃದ್ಧ ಬದುಕಿನ ಹಾದಿ ವಿಕಾಸಗೊಳ್ಳುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟಿದ್ದಾರೆ.

ಗಡಿನಾಡ ನುಡಿದೀವಿಗೆ ಹರಿದಾಸ ಜಯಾನಂದ ಕುಮಾರ್‌ ಹೊಸದುರ್ಗ ಷಷ್ಟéಬ್ದ ಹರಿಕೀರ್ತನ ಅಭಿಯಾನದ ಸಮಾರೋಪ ಸಮಾರಂಭವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ವಸಂತ ಮಹಲ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಹರಿದಾಸ ಜಯಾನಂದ ಕುಮಾರ್‌ ಅವರು ಅವನತಿಯ ಅಂಚಿನಲ್ಲಿರುವ ಹರಿಕಥಾ ಪ್ರಕಾರಕ್ಕೆ ಕಾಯಕಲ್ಪ ನೀಡುತ್ತಿದ್ದಾರೆ. ಶ್ರುತಿ ಮಧುರವಾದ ಗಾಯನ ಮತ್ತು ವ್ಯಾಖ್ಯಾನದ ಮೂಲಕ ಹರಿಕಥಾ ಪರಂಪರೆಗೆ ಮೆರುಗಿನ ಸ್ಥಾನ ಕಲ್ಪಿಸಿದವರು. ಶ್ರೀ ಮಂಜುನಾಥನ ಪೂರ್ಣಾನುಗ್ರಹದಿಂದ ಅವರ ಬದುಕು ಬಂಗಾರವಾಗಲಿ ಎಂದು ಡಾ| ವೀರೇಂದ್ರ ಹೆಗ್ಗಡೆ ನುಡಿದರು.

ಧಾರ್ಮಿಕ ಮುಂದಾಳು, ಕಲಾ ಪೋಷಕ ಬಿ. ವಸಂತ ಪೈ ಬದಿಯಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಹರಿದಾಸ ಜಯಾನಂದ ಕುಮಾರ್‌ ಅವರ ಧೀಶಕ್ತಿ ಕ್ರಿಯಾಶಕ್ತಿಯನ್ನು ಶ್ಲಾಘಿಸಿದರು.

ಧರ್ಮದರ್ಶಿ ಹರಿಕೃಷ್ಣ ಪುನರೂರು, ಎಂ.ಬಿ. ಪುರಾಣಿಕ್‌, ಶಾಸಕ ಹರೀಶ್‌ ಪೂಂಜ, ಪ್ರದೀಪ್‌ ಕುಮಾರ್‌ ಕಲ್ಕೂರ, ಕೆ. ಮಹಾಬಲ ಶೆಟ್ಟಿ, ಶಿವರಾಮ ಕಾಸರಗೋಡು ಶುಭಾಶಂಸನೆಗೈದರು. ಕೀರ್ತನಾ ಕೇಸರಿ ರಾಮಕೃಷ್ಣ ಕಾಟುಕುಕ್ಕೆ ಉಪಸ್ಥಿತರಿದ್ದರು.

ಹರಿದಾಸ ಜಯಾನಂದ ಕುಮಾರ್‌ ಅವರ ಅರುವತ್ತರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ ಹರಿಕೀರ್ತನ ಅಭಿಯಾನದ ಸಂಚಾಲಕರಾಗಿ ಯಶಸ್ವೀ ಸಾಧನೆ ಮಾಡಿದ ಕಾಸರಗೋಡಿನ ಸಮರ್ಥ ಸಂಘಟಕ ಗುರುಪ್ರಸಾದ್‌ ಕೋಟೆಕಣಿ ಅವರನ್ನು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಸಮ್ಮಾನಿಸಿದರು.

ಇದೇ ಸಂದರ್ಭದಲ್ಲಿ ಜಯಾನಂದ ಕುಮಾರ್‌ ದಂಪತಿಯನ್ನೂ ಹೆಗ್ಗಡೆ ಯವರು ಸಮ್ಮಾನಿಸಿದರು. ಹರಿಕಥಾ ಅಭಿಯಾನ ಸಮಿತಿ ಪರವಾಗಿ ಹೆಗ್ಗಡೆಯವರನ್ನು ಗೌರವಿಸಲಾಯಿತು. ವಿವಿಧ ಭಜನ ತಂಡಗಳಿಂದ ಗುರುವಂದನೆ ನಡೆಯಿತು.
ಹರಿದಾಸ ಜಯಾನಂದ ಕುಮಾರ್‌ ಅವರಿಂದ ತರಬೇತಿಗೊಂಡ ಕಾಸರ ಗೋಡು ಜಿಲ್ಲೆಯ ಹದಿನೈದು ಮಹಿಳಾ ಭಜನ ಮಂಡಳಿಯವರಿಂದ ಸಂಕೀರ್ತನೆ ನಡೆಯಿತು.

ಡಾ| ಹೆಗ್ಗಡೆ ಮತ್ತು ಸ್ವಾಮೀಜಿದ್ವಯರ ಉಪಸ್ಥಿತಿಯಲ್ಲಿ ಜಯಾನಂದ ಕುಮಾರ್‌ ಸುಶ್ರಾವ್ಯವಾಗಿ ಹಾಡಿದರು. ಸಭಾ ಕಾರ್ಯಕ್ರಮದಲ್ಲಿ ರವಿ ನಾಯ್ಕಪು ಸ್ವಾಗತಿಸಿದರು
ರಾಧಾಕೃಷ್ಣ ಕೆ. ಉಳಿಯತ್ತಡ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೀರಾ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಹರೀಶ್‌ ಶೆಟ್ಟಿ ಮಾಡ ವಂದಿಸಿದರು. ಹರಿದಾಸ ಜಯಾನಂದ ಕುಮಾರ್‌ ಕೃತಜ್ಞತಾ ನುಡಿಗಳನ್ನಾಡಿದರು.ಬಳಿಕ ಅವರಿಂದ “ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತೆ¾’ ಹರಿಕಥೆ ಜರಗಿತು.

ಮಾತು, ಬರಹಗಳಲ್ಲಿ ಶುದ್ಧ ಕನ್ನಡ
ಕಾಸರಗೋಡಿನ ಕನ್ನಡಿಗರು ಮಲೆಯಾಳಿಗರ ಮಧ್ಯೆ ವಾಸಿಸುತ್ತಿದ್ದರೂ ಅವರು ಶುದ್ಧ ಕನ್ನಡವನ್ನು ಉಳಿಸಿಕೊಂಡಿದ್ದಾರೆ. ಅಚ್ಚ ಕನ್ನಡಿಗರಾಗಿಯೇ ಬದುಕುತ್ತಿದ್ದಾರೆ. ಅವರ ಮಾತು, ಬರಹಗಳಲ್ಲಿ ಶುದ್ಧ ಕನ್ನಡವಿದೆ. ಈ ಕನ್ನಡ ಪ್ರಜ್ಞೆ ಇತರರಿಗೆ ಮಾದರಿ ಯಾಗಿದೆ. ಸಾಹಿತ್ಯ ಕಲೆಗಳಿಗೆ ಕಾಸರಗೋಡಿನ ಕನ್ನಡಿಗರ ಕೊಡುಗೆ ಅಪಾರ. ವಿವಿಧ ಕ್ಷೇತ್ರಗಳ ಅನೇಕ ಮಂದಿ ಸಾಧಕರು ಅಲ್ಲಿದ್ದಾರೆ. ಕಾಸರಗೋಡು ಎಂದೆಂದಿಗೂ ಕನ್ನಡದ ನಾಡಾಗಿಯೇ ಉಳಿಯುತ್ತದೆ. ಎಂದು ಡಾ| ಹೆಗ್ಗಡೆ ಅವರು ಹೇಳಿದರು.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.