ಪೆರಿಯತ್ತೋಡಿ, ಸಿಂಗಾಣಿ ಪ್ರದೇಶದಲ್ಲಿ ನೀರಿಗೆ ತತ್ವಾರ
ಬತ್ತಿದ ಬಾವಿ, ಕೊಳವೆಬಾವಿ: 20ಕ್ಕೂ ಹೆಚ್ಚು ಮನೆಗಳಿಗೆ ಸಮಸ್ಯೆ, ನೀರು ಹೊತ್ತು ತರುವ ಸ್ಥಿತಿ
Team Udayavani, Jun 4, 2019, 6:00 AM IST
ಪೆರಿಯತ್ತೋಡಿ, ಸಿಂಗಾಣಿ ಪ್ರದೇಶದಲ್ಲಿ ನೀರಿಗಾಗಿ ಕಾಯುತ್ತಿರುವ ನಿವಾಸಿಗಳು
ನಗರ: ನಗರಸಭಾ ವ್ಯಾಪ್ತಿಯ ಪೆರಿಯತ್ತೋಡಿ, ಸಿಂಗಾಣಿ ಪ್ರದೇಶದ ಜನರ ನೀರಿಗೆ ಸಂಬಂಧಿಸಿದ ಬವಣೆ ತೀವ್ರಗೊಂಡಿದೆ. ಬೇಸಗೆಯಲ್ಲಿ ಇಲ್ಲಿ ನೀರಿನ ಸಮಸ್ಯೆ ನಿತ್ಯ ನಿರಂತರ ಎನ್ನುವಂತಾಗಿದ್ದು, ಈ ಪರಿಸರದ ಜನತೆ ಕಿಲೋ ಮೀಟರ್ ದೂರದಿಂದ ನೀರು ತರುವ ಪರಿಸ್ಥಿತಿ ಒಂದೆಡೆಯಾದರೆ, ಟ್ಯಾಂಕರ್‌ಗಳಲ್ಲಿ ಬರುವ ನಗರಸಭೆಯ ನೀರಿಗಾಗಿ ಕಾಯುವ ಪರಿಸ್ಥಿತಿ ಇನ್ನೊಂಡೆದೆ.
ನಗರದಿಂದ ಬಪ್ಪಳಿಗೆ ಮೂಲಕ ಬಲಾ°ಡು ಬಳಿ ಎಡಕ್ಕೆ ಒಳ ರಸ್ತೆಯಲ್ಲಿ ಚಲಿಸಿದರೆ ಈ ಸಿಂಗಾಣಿ, ಪೆರಿಯತ್ತೋಡಿ ಪ್ರದೇಶ ಸಿಗುತ್ತದೆ. ಈ ರಸ್ತೆ ಇನ್ನೊಂದು ಭಾಗದಿಂದ ಮಂಜಲ್ಪಡ³ನ್ನು ಸಂಪರ್ಕಿಸುತ್ತದೆ. ಈ ಪ್ರದೇಶದಲ್ಲಿ ದಾರಿಯುದ್ದಕ್ಕೂ ಸಾಗುತ್ತಿ ದ್ದಂತೆ ರಸ್ತೆಯುದ್ದಕ್ಕೂ ನೀರು ಸಂಗ್ರಹಿಸುವ ಪ್ಲಾಸ್ಟಿಕ್ ಡ್ರಮ್, ಬಕೆಟ್ ಮುಂತಾದ ಪಾತ್ರೆಗಳನ್ನು ರಸ್ತೆ ಬದಿ ಇಟ್ಟು ನಗರಸಭೆಯ ನೀರಿಗಾಗಿ ಕಾಯುವ ಸ್ಥಿತಿ ಕಾಣಸಿಗುತ್ತದೆ.
ಕೊಳವೆಬಾವಿಯೂ ಬತ್ತಿದೆ
ಪೆರಿಯತ್ತೋಡಿ ಪ್ರದೇಶದಲ್ಲಿರುವ ಕಾಲನಿಯಲ್ಲಿ ಸುಮಾರು 15-20ರಷ್ಟು ಮನೆಗಳಿದ್ದು, ಇಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ಕೊಳವೆ ಬಾವಿ ನೀರಿಲ್ಲದೆ ಬತ್ತಿ ಹೋಗಿದೆ. ಅಕ್ಕಪಕ್ಕದಲ್ಲಿರುವ ಬಾವಿಯೂ ಬತ್ತಿ ಹೋಗಿದ್ದು, ನಗರಸಭೆಯ ವತಿಯಿಂದ ನೀಡುವ ನೀರೇ ಗತಿಯಾಗಿದೆ. ಕೆಲವೊಮ್ಮೆ ನೀರು ಬಂದರೂ ಆಯಿತು, ಬಾರದಿದ್ದರೂ ಆಯಿತು. ನೀರಿಗಾಗಿ ಚಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ಸಿಕ್ಕಿದರೂ ಅಗತ್ಯದಷ್ಟು ನೀರು ಕೆಲವೊಮ್ಮೆ ಸಿಗುವುದೇ ಇಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಮೂರು ತಿಂಗಳಿನಿಂದ ಹಾಹಾಕಾರ
ಮೂರು ತಿಂಗಳಿನಿಂದ ಪೆರಿಯತ್ತೋಡಿ, ಸಿಂಗಾಣಿ ಪ್ರದೇಶದ ನಿವಾಸಿಗಳು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಒಂದು ಕಿ.ಮೀ.ಗೂ ಅಧಿಕ ದೂರದಿಂದ ನೀರು ಹೊತ್ತು ತರುವ ಪರಿಸ್ಥಿತಿ ಉಂಟಾಗಿದೆ. ನೀರಿಗಾಗಿ ಹೊಸ ಕೊಳವೆ ಬಾವಿಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನಗರಸಭೆ ವತಿಯಿಂದ ಟ್ಯಾಂಕರ್‌ಗಳಲ್ಲಿ ಹೆಚ್ಚಿನ ನೀರು ನೀಡುವ ಸರಿಯಾದ ವ್ಯವಸ್ಥೆ ಮಾಡಲಿ ಎನ್ನುವುದು ಇಲ್ಲಿನ ನಿವಾಸಿಗಳಾದ ಶಾಂತಿ, ಶೋಭಿತಾ ಅವರ ಆಗ್ರಹವಾಗಿದೆ.
ಕೊಳವೆ ಬಾವಿ ಕೊರೆಸುತ್ತೇವೆ
ಪೆರಿಯತ್ತೋಡಿ, ಸಿಂಗಾಣಿ ಪರಿಸರದಲ್ಲಿ ಮಾತ್ರ ನೀರಿನ ಸಮಸ್ಯೆ ಇದೆ. ಶಾಸಕರು ಹಾಗೂ ನಗರಸಭೆ ವತಿಯಿಂದ ಎರಡು ಕೊಳವೆ ಬಾವಿ ಕೊರೆಸಲು ಅನುದಾನ ಒದಗಿಸಲಾಗಿದೆ. ಪಾಯಿಂಟ್ ಕೂಡ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಇಲ್ಲಿ ಕೊಳವೆ ಬಾವಿ ಕೊರೆಸುತ್ತೇವೆ.
– ನವೀನ್ ಕುಮಾರ್, ನಗರಸಭೆ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.