ಫ‌ುಟ್‌ಬಾಲ್‌ ತಂಡದಲ್ಲಿ ಆರು ಹೊಸ ಮುಖ

ಜೂ. 5ರಿಂದ ಥಾಯ್ಲೆಂಡ್‌ನ‌ಲ್ಲಿ ಕಿಂಗ್ಸ್‌ ಕಪ್‌

Team Udayavani, Jun 4, 2019, 6:00 AM IST

Coach-Iger-Stimak

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಥಾಯ್ಲೆಂಡ್‌ನ‌ಲ್ಲಿ ಜೂನ್‌ 5ರಿಂದ ನಡೆಯಲಿರುವ ಕಿಂಗ್ಸ್‌ ಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಗಾಗಿ 23 ಸದಸ್ಯರ ಭಾರತೀಯ ಫ‌ುಟ್‌ಬಾಲ್‌ ತಂಡದ ಅಂತಿಮ ಪಟ್ಟಿಯನ್ನು ಮುಖ್ಯ ಕೋಚ್‌ ಐಗರ್‌ ಸ್ಟಿಮಾಕ್‌ ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಆರು ಮಂದಿ ಹೊಸಬರಿದ್ದಾರೆ.

ರಾಹುಲ್‌ ಭೇಕೆ, ಬ್ರೆಂಡನ್‌ ಫೆರ್ನಾಂಡಿಸ್‌, ರೈನಿಯರ್‌ ಫೆರ್ನಾಂ ಡಿಸ್‌, ಮೈಕಲ್‌ ಸೂಸಾಯಿರಾಜ್‌, ಅಬ್ದುಲ್‌ ಸಾಹಲ್‌ ಮತ್ತು ಭಾರತೀಯ ಅಂಡರ್‌-17 ವಿಶ್ವಕಪ್‌ ತಂಡದ ನಾಯಕ ಅಮರ್‌ಜಿತ್‌ ಸಿಂಗ್‌ ತಂಡದಲ್ಲಿರುವ ಆರು ಮಂದಿ ಹೊಸ ಮುಖವಾಗಿದ್ದಾರೆ.

ಅದಿಲ್‌ ಖಾನ್‌ 2012ರ ಬಳಿಕ ಇದೇ ಮೊದಲ ಸಲ ತಂಡಕ್ಕೆ ಮರಳಿದ್ದರೆ, ಗೋಲ್‌ಕೀಪರ್‌ ಕಮಲ್‌ಜಿತ್‌ ಸಿಂಗ್‌ ಇನ್ನಷ್ಟೇ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆಗೈಯಬೇಕಾಗಿದೆ.”ಹೊಸದಿಲ್ಲಿಯಲ್ಲಿ ನಡೆದ ಶಿಬಿರದಲ್ಲಿ ನಾವು ಕಠಿನ ಅಭ್ಯಾಸ ನಡೆಸಿದ್ದೇವೆ. ಪ್ರತಿಯೊಬ್ಬರೂ ಉತ್ಸಾಹದಿಂದ ಪಾಲ್ಗೊಂಡು ಮುಂದಿನ ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಇಲ್ಲಿ ಸಿಕ್ಕಿದ ಮಾರ್ಗದರ್ಶನ, ಸಲಹೆಯನ್ನು ಪಾಲಿಸಿಕೊಂಡು ಶ್ರೇಷ್ಠ ನಿರ್ವಹಣೆ ನೀಡಲು ಪ್ರಯತ್ನಿಸಲಿದ್ದೇವೆ’ ಎಂದು ಸ್ಟಿಮಾಕ್‌ ಹೇಳಿದ್ದಾರೆ.

ಯಶಸ್ಸಿನ ಹಸಿವು
“ಹೊಸ ರೀತಿ, ನಿಯಮದಲ್ಲಿ ಆಡಲು ಕೋಚ್‌ ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ನಾವೀಗ ಚೆಂಡಿನ ಜತೆ ಹೆಚ್ಚಿನ ಸಮಯ ಆಡುತ್ತಿದ್ದೇವೆ. ಆಕ್ರಮಣಕಾರಿ ಆಟಕ್ಕೆ ಹೆಚ್ಚಿನ ಒಲವು. ಇಂತಹ ಆಟದ ವೇಳೆ ಈ ಹಿಂದೆ ಭಾರತ ಯಶಸ್ಸು ಸಾಧಿಸಿದ್ದರಿಂದ ಆಟಗಾರರು ಪ್ರೇರಣೆಗೊಂಡಿದ್ದಾರೆ. ಇನ್ನಷ್ಟು ತೀವ್ರವಾಗಿ ಹೋರಾಡಬಹುದೆಂದು ನಂಬಿದ್ದಾರೆ ಮತ್ತು ಯಶಸ್ಸಿನ ಹಸಿವು ಪ್ರತಿಯೊಬ್ಬರಲ್ಲಿದೆ’ ಎಂದು ಸೆಂಟ್ರಲ್‌ ಡಿಫೆಂಡರ್‌ ಸಂದೇಶ್‌ ಝಿಂಗನ್‌ ಹೇಳಿದ್ದಾರೆ.

“ಸ್ಟಿಮಾಕ್‌ ಅವರೊಬ್ಬ ಅತ್ಯಂತ ಯಶಸ್ವಿ ವೃತ್ತಿಪರ ಆಟಗಾರ, ಬಹಳಷ್ಟು ಅನುಭವಿ ಕೂಡ. ಯಾವ ರೀತಿ ಆಟ ಆಡಬೇಕೆಂದು ಅವರಿಗೆ ತಿಳಿದಿದೆ ಮತ್ತು ಅದರ ಕಾರಣವೂ ಅವರಿಗೆ ತಿಳಿದಿದೆ. ಇದು ತರಬೇತುದಾರರಿಗೆ ಅಗತ್ಯವಾಗಿ ಬೇಕಾಗಿದೆ’ ಎಂಬುದು ಗೋಲ್‌ಕೀಪರ್‌ ಗುರ್‌ಪ್ರೀತ್‌ ಸಿಂಗ್‌ ಸಂಧು ಹೇಳಿಕೆ.

ಜೂ. 5ಕ್ಕೆ ಮೊದಲ ಪಂದ್ಯ
ಭಾರತೀಯ ತಂಡವು ಈಗಾಗಲೇ ಥಾಯ್ಲೆಂಡ್‌ ತಲುಪಿದ್ದು, ಅಭ್ಯಾಸ ಆರಂಭಿಸಿದೆ. “ಕಿಂಗ್ಸ್‌ ಕಪ್‌’ ಕೂಟದ ಮೊದಲ ಪಂದ್ಯದಲ್ಲಿ ಭಾರತ ಜೂ. 5ರಂದು ಕ್ಯುರಾಕೊ ತಂಡವನ್ನು ಎದುರಿಸಲಿದೆ. ಭಾರತದ ಎರಡನೇ ಪಂದ್ಯ ಜೂ. 8ರಂದು ನಡೆಯಲಿದೆ.

ಭಾರತೀಯ ತಂಡ
ಗೋಲ್‌ಕೀಪರ್‌: ಗುರ್‌ಪ್ರೀತ್‌ ಸಿಂಗ್‌ ಸಂಧು, ಅಮರಿಂದರ್‌ ಸಿಂಗ್‌, ಕಮಲ್‌ಜಿತ್‌ ಸಿಂಗ್‌.
ಡಿಫೆಂಡರ್: ಪ್ರೀತಮ್‌ ಕೋತಲ್‌, ರಾಹುಲ್‌ ಭೇಕೆ, ಸಂದೇಶ್‌ ಝಿಂಗನ್‌, ಅದಿಲ್‌ ಖಾನ್‌, ಸುಭಾಶಿಷ್‌ ಬೋಸ್‌.
ಮಿಡ್‌ಫಿàಲ್ಡರ್: ಉದಾಂತ ಸಿಂಗ್‌, ಜಾಕಿಚಂದ್‌ ಸಿಂಗ್‌, ಬ್ರೆಂಡನ್‌ ಫೆರ್ನಾಂಡಿಸ್‌, ಅನಿರುದ್ಧ್ ಥಾಪ, ರೈನಿಯರ್‌ ಫೆರ್ನಾಂಡಿಸ್‌, ಪ್ರಣಯ್‌ ಹಲ್ದರ್‌, ವಿನಿತ್‌ ರೈ, ಸಾಹಲ್‌ ಅಬ್ದುಲ್‌, ಅಮರ್‌ಜಿತ್‌ ಸಿಂಗ್‌, ಲಾಲಿಯನ್‌ಜ್ವಾಲಾ, ಚಂಗೆr, ಮೈಕಲ್‌ ಸೂಸಾಯಿರಾಜ್‌.
ಫಾರ್ವರ್ಡ್ಸ್‌: ಬಲ್ವಂತ್‌ ಸಿಂಗ್‌, ಸುನಿಲ್‌ ಚೇಟ್ರಿ, ಫಾರೂಖ್‌ ಚೌಧರಿ,
ಮನ್ವೀರ್‌ ಸಿಂಗ್‌.

ಟಾಪ್ ನ್ಯೂಸ್

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

India’s first FIP ​​Padel tournament begins

FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

ನಮ್ಮಲ್ಲಿಗೆ ಬಂದರೆ ಇಸ್ರೇಲ್‌ ಪ್ರಧಾನಿ ಬಂಧನ: ಬ್ರಿಟನ್‌!

ನಮ್ಮಲ್ಲಿಗೆ ಬಂದರೆ ಇಸ್ರೇಲ್‌ ಪ್ರಧಾನಿ ಬಂಧನ: ಬ್ರಿಟನ್‌!

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.