ಮಗನನ್ನು ಕೊಂದಿದ್ದ ತಂದೆ ಜೈಲಿಗೆ
Team Udayavani, Jun 4, 2019, 3:05 AM IST
ಬೆಂಗಳೂರು: ಸಾಲಗಾರರ ಕಿರುಕುಳಕ್ಕೆ ಬೇಸತ್ತು ಮಗನನ್ನು ಕೊಲೆ ಮಾಡಿದ ವ್ಯಕ್ತಿ, ಆತ್ಮಹತ್ಯೆಗೆ ಯತ್ನಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಸಂಬಂಧ ಐವರು ಆರೋಪಿಗಳನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.
ವಿಭೂತಿಪುರದ ನಿವಾಸಿ ಸುರೇಶ್ ಬಾಬು ಎಂಬಾತ ಸಾಲಗಾರರ ಕಿರುಕುಳಕ್ಕೆ ಬೇಸತ್ತು ತನ್ನ ಮಗ ವರುಣ್ (12)ಗೆ ನೇಣು ಬಿಗಿದು ಕೊಲೆಮಾಡಿದ್ದ. ಇದನ್ನು ನೋಡಿದ ಆತನ ಪತ್ನಿ ಗೀತಾಬಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗಳ ಮಾತಿನಿಂದ ಸುರೇಶ್‌ಬಾಬು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿದಿದ್ದ.
ಈ ಘಟನೆ ಸಂಬಂಧ ಆತ್ಮಹತ್ಯೆ ಪ್ರಚೋದನೆ ಆರೋಪ ಸಂಬಂಧ ಸುಧಾ, ಪ್ರಭಾವತಿ, ಡೈಸಿ, ರಾಮ್ ಬಹುದ್ದೂರ್, ಮಂಜು ಎಂಬವರನ್ನು ಬಂಧಿಸಲಾಗಿದೆ. ಮಗ ವರುಣ್‌ನನ್ನು ಕೊಲೆಮಾಡಿದ ಆರೋಪ ಸಂಬಂಧ ಸುರೇಶ್‌ಬಾಬುನನ್ನು ಬಂಧಿಸಲಾಗಿದೆ ಎಂದು ಎಚ್‌ಎಎಲ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಸಾಲ ತಂದ ಶೂಲ: ಖಾಸಗಿ ಕಂಪನಿಯೊಂದರ ಉದ್ಯೋಗಿ ಆಗಿದ್ದ ಸುರೇಶ್‌ಬಾಬು ಈ ಹಿಂದೆ ಚೀಟಿ ವ್ಯವಹಾರ ನಡೆಸುತ್ತಿದ್ದ. ಸುಧಾ, ಡೈಸಿ ಸೇರಿದಂತೆ ಹಲವರು ಹಣ ಕಟ್ಟಿದ್ದರು. ಹಣಕಾಸು ವ್ಯವಹಾರದಲ್ಲಿ ನಷ್ಟವುಂಟಾಗಿದ್ದರಿಂದ ಸುರೇಶ್‌ಬಾಬು ಹಲವರಿಗೆ ಹಣ ಹಿಂತಿರುಗಿಸಿರಲಿಲ್ಲ.
ಹೀಗಾಗಿ ಮನೆ ಬಳಿ ಬಂದು ಆರೋಪಿಗಳು ಗಲಾಟೆ ಮಾಡುತ್ತಿದ್ದರು. ಜತೆಗೆ ಹಣ ನೀಡದಿದ್ದರೆ ಜೈಲಿಗೆ ಕಳಿಸುತ್ತೇವೆ ಎಂದು ಬೆದರಿಸುತ್ತಿದ್ದರು. ಈ ಕಾರಣಕ್ಕೆ ಬೇಸತ್ತ ಸುರೇಶ್‌ಬಾಬು, ಗೀತಾಬಾಯಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.
ಅದರಂತೆ ಭಾನುವಾರ ಮಗ ವರುಣ್‌ನನ್ನು ಸುರೇಶ್‌ಬಾಬು ನೇಣುಬಿಗಿದು ಕೊಲೆಮಾಡಿದ್ದ. ಪತ್ನಿ ಗೀತಾಬಾಯಿ ಕೂಡ ಮತ್ತೂಂದು ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಕಂಡ ಮಗಳು ಆತ್ಮಹತ್ಯೆ ಮಾಡಿಕೊಳ್ಳದಂತೆ ಸುರೇಶ್‌ಬಾಬುನನ್ನು ತಡೆದಿದ್ದಳು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.
ಮಕ್ಕಳನ್ನು ಕೊಲ್ಲಬೇಡಿ; ಸರ್ಕಾರಕ್ಕೆ ಒಪ್ಪಿಸಿ: “ಕಷ್ಟಗಳು ಯಾರಿಗೂ ಬರಬಾರದು. ಸಾಲ ಸೇರಿ ಇನ್ನಿತರೆ ಕಷ್ಟಗಳು ಎದುರಾದಾಗ ಮಕ್ಕಳನ್ನು ಕೊಲೆಮಾಡಬೇಡಿ. ನಿಮಗೆ ಕಷ್ಟ ಂದೆನಿಸಿದರೆ ಮಕ್ಕಳನ್ನು ಸರ್ಕಾರಕ್ಕೆ ಒಪ್ಪಿಸಿ. ಸರ್ಕಾರಿ ಹಾಗೂ ಖಾಸಗಿ ಆಶ್ರಮಗಳು ಅವರನ್ನು ಪೋಷಿಸುತ್ತವೆ’ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.