ಮಂಗಳೂರು ವಿಶ್ವವಿದ್ಯಾನಿಲಯ: ಪದವಿ ಮುಗಿಸಿ 2 ವರ್ಷವಾದರೂ ಪ್ರಮಾಣ ಪತ್ರ ಸಿಕ್ಕಿಲ್ಲ !
Team Udayavani, Jun 4, 2019, 11:48 AM IST
ಉಳ್ಳಾಲ: ಘಟಿಕೋತ್ಸವ ಮುಗಿದು 2 ವರ್ಷವಾದರೂ ಪದವಿ ಪ್ರಮಾಣಪತ್ರಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಲೆದಾಡುತ್ತಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಲಭ್ಯ ಮಾಹಿತಿಯ ಪ್ರಕಾರ ನೂರಾರು ವಿದ್ಯಾರ್ಥಿಗಳು ಪರೀಕ್ಷೆ ಯಲ್ಲಿ ಉತ್ತೀರ್ಣರಾಗಿ ಪ್ರಮಾಣ ಪತ್ರಗಳಿಗೆ ವಿಶ್ವವಿದ್ಯಾಲಯದ ಬಾಗಿಲು ತಟ್ಟುತ್ತಿದ್ದಾರೆ. ತನ್ನ ವ್ಯಾಪ್ತಿಯ ಕಾಲೇಜು ಗಳಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ಆಯಾ ವಿಶ್ವ ವಿದ್ಯಾಲಯಗಳ ಕರ್ತವ್ಯ. ಆದರೆ, ಅದನ್ನೇ ಸಮರ್ಪಕವಾಗಿ ಮಾಡಿಲ್ಲ ಎಂಬ ಆರೋಪ ವಿದ್ಯಾರ್ಥಿಗಳಿಂದಲೇ ಕೇಳಿಬರುತ್ತಿದೆ.
2016ರ ವರೆಗಿನ ಪದವೀಧರರಿಗೆ ನಿರಾಂತಕವಾಗಿ ಪ್ರಮಾಣ ಪತ್ರ ನೀಡಲಾಗುತ್ತಿತ್ತು. ಆದರೆ 2017 ಮತ್ತು 2018ರಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ವಿವಿ ಸಿಬಂದಿಗೆ ಕೇಳಿದರೆ, ತಾಂತ್ರಿಕ ಅಡಚಣೆಯಿಂದ ವಿಳಂಬ ವಾಗಿದೆ; ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ತ್ವರಿತವಾಗಿ ವಿತರಿಸಲಾಗು ವುದು. ತೀರಾ ಅನಿವಾರ್ಯ ಎಂದವರಿಗೆ ಹಿಂದಿನ ಮಾದರಿಯಲ್ಲೇ ನೀಡಲಾಗಿದೆ ಎನ್ನುತ್ತಾರೆ ವಿವಿ ಅಧಿಕಾರಿಗಳು.
ಸರಕಾರದಿಂದ ತಡೆ ಕಾರಣ
ನಕಲಿ ಪದವಿ ಪ್ರಮಾಣ ಪತ್ರ ದಂಧೆ ತಡೆಯಲು 2017ರಲ್ಲಿ ಪದವಿ ಪಡೆದವರಿಗೆ ನಿಯರ್ ಫೀಲ್ಡ್ ಕಮ್ಯುನಿಕೇಷನ್ (ಎನ್‌ಎಫ್‌ಸಿ) ತಂತ್ರಜ್ಞಾನ ಆಧಾರಿತ ಪ್ರಮಾಣ ಪತ್ರ ನೀಡುವಂತೆ ವಿ.ವಿ.ಗಳಿಗೆ ರಾಜ್ಯ ಸರಕಾರ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ವಿ.ವಿ.ಯು ಎನ್‌ಎಫ್‌ಸಿ ತಂತ್ರಜ್ಞಾನ ಹೊಂದಿರುವ ಪ್ರಮಾಣ ಪತ್ರ ಮುದ್ರಿಸುವ ಸಂಸ್ಥೆಗಳಿಂದ ಟೆಂಡರ್ ಕರೆದಿತ್ತು. ಎಂಎಸ್‌ಐಎಲ್ ಸೇರಿದಂತೆ ವಿವಿಧ ಕಂಪೆನಿಗಳು ಅರ್ಜಿ ಸಲ್ಲಿಸಿದ್ದು, ಕೊನೆಗೆ ಹೈದರಾಬಾದ್‌ನ ಸಂಸ್ಥೆಯೊಂದಕ್ಕೆ ಕೆಲಸ ನಿರ್ವಹಿಸಲು ಸೂಚಿಸಲಾಗಿತ್ತು. ಇದನ್ನು ಪ್ರಶ್ನಿಸಿ ಎಂಎಸ್‌ಐಎಲ್ ಕೋರ್ಟ್ ಮೆಟ್ಟಿಲೇರಿತು. ಈ ಹಿನ್ನೆಲೆಯಲ್ಲಿ ಪದವಿ ಪ್ರಮಾಣ ಪತ್ರ ಮುದ್ರಿಸಲು ತಡ ವಾಯಿತು ಎನ್ನುತ್ತಾರೆ ವಿ.ವಿ. ಮೂಲಗಳು.
ಈ ಮಧ್ಯೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಎನ್‌ಎಫ್‌ಸಿ ತಂತ್ರಜ್ಞಾನಾ ಧಾರಿತ ಯೋಜನೆಯನ್ನು ಸಂಪೂರ್ಣವಾಗಿ ಕೈ ಬಿಡಲು ನಿರ್ಣಯಿಸ ಲಾಯಿತು. ಮಂಗಳೂರು ವಿ.ವಿ.ಗೂ ಹೊಸ ತಂತ್ರಜ್ಞಾನ ಆಧಾರಿತ ಪ್ರಮಾಣ ಪತ್ರಗಳ ಮುದ್ರಣವನ್ನು ಸ್ಥಗಿತಗೊಳಿಸಲು ಸೂಚಿಸಲಾಗಿತ್ತು ಎನ್ನುತ್ತವೆ ಮೂಲಗಳು.
ಹೊಸ ಟೆಂಡರ್
ಮೊದಲಿನ ಯೋಜನೆಯನ್ನು ಕೈ ಬಿಟ್ಟ ಕಾರಣ, ಹೊಸ ಟೆಂಡರ್ ಕರೆಯಲಾಗಿದ್ದು ಚೆನ್ನೈ ಮೂಲದ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಶೀಘ್ರವೇ ನೀಡಲಾಗುವುದು ಎನ್ನುತ್ತಾರೆ ಅಧಿಕಾರಿಗಳು.
2017ರಿಂದ ಪದವಿ ಪಡೆದು ಪದವಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ಶೇ. 10ರಷ್ಟು ಮಂದಿಗೆ ಪ್ರಮಾಣ ಪತ್ರ ನೀಡಲು ಬಾಕಿಯಿದೆ. ಉಳಿದವರಿಗೆ ಎನ್‌ಎಫ್ಸಿ ತಂತ್ರಜ್ಞಾನವಿಲ್ಲದ ಪ್ರಮಾಣ ಪತ್ರ ಮುದ್ರಿಸಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಶೀಘ್ರವೇ ಪದವೀಧರರಿಗೆ ತಲುಪಲಿದೆ.
– ಪ್ರೊ| ವಿ. ರವೀಂದ್ರಾಚಾರಿ, ಪರೀಕ್ಷಾಂಗ ಕುಲಸಚಿವರು, ಮಂಗಳೂರು ವಿಶ್ವ ವಿದ್ಯಾನಿಲಯ
ವಸಂತ ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.