ಮೈಗ್ರೇನ್ ಸಮಸ್ಯೆಗಳಿಗೆ ಹೋಮಿಯೋಕೇರ್ ಪರಿಹಾರ
Team Udayavani, Jun 5, 2019, 6:00 AM IST
ಸುಮಾರು 32 ವರ್ಷ ವಯಸ್ಸಿನ ಸಾಫ್ಟ್ವೇರ್ ಉದ್ಯೋಗಿ ನಮ್ಮ ಕ್ಲಿನಿಕ್‌ಗೆ ಬಂದರು. ಆತ ಕೆಲವು ಕಾಲದಿಂದ ವಿಪರೀತ ತಲೆ ನೋವಿನಿಂದ ಬಳಲುತ್ತಿದ್ದರು. ನೋವು ಶುರುವಾದರೆ ಬಹಳ ತೀವ್ರವಿರುತ್ತದೆ. ಮತ್ತು ನೋವು ಒಂದೇ ಕಡೆ ಇರುತ್ತದೆ. ಆ ಸಂದರ್ಭದಲ್ಲಿ ದೈನಂದಿನ ಕೆಲಸ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ವಾಕರಿಕೆ ಬಂದ ಹಾಗೆ ಅನಿಸುವುದು. ಬೆಳಕು ನೋಡುವುದಕ್ಕೆ ಆಗುತ್ತಿಲ್ಲ. ಶಬ್ದಗಳನ್ನು ಸರಿಯಾಗಿ ಕೇಳಿಸಿಕೊಳ್ಳಲೂ ಆಗುತ್ತಿಲ್ಲ. ವೈದ್ಯರನ್ನು ಸಂಪರ್ಕಿಸಿದಾಗ ಮೈಗ್ರೇನ್ ಎಂದು ಹೇಳಿದ್ದಾರೆ. ಔಷಧ ಉಪಯೋಗಿಸಿದಾಗ ತಾತ್ಕಾಲಿಕವಾಗಿ ನೋವು ಕಡಿಮೆಯಾಗುತ್ತದೆ. ನಂತರ ಮತ್ತೆ ತಲೆನೋವು ಶುರು.
ಮೇಲಿನ ಲಕ್ಷಣಗಳಿಂದ ಅವರು ಪಾರ್ಶ್ವ ತಲೆ ನೋವಿನಿಂದ ಬಳಲುತ್ತಿದ್ದಾರೆಂದು ಅರ್ಥವಾಯಿತು. ಪಾರ್ಶ್ವ ತಲೆ ನೋವು ಎಂದರೆ ಬಹಳ ತೀವ್ರವಾದ ತಲೆ ನೋವು. ಸಾಮಾನ್ಯವಾಗಿ ಒಂದು ಕಡೆ ತಲೆ ನೋವು ಬರುವುದನ್ನು ನೋಡುತ್ತೇವೆ. ಸಾಧಾರಣವಾಗಿ ಇದು ಕುತ್ತಿಗೆಯ ಹಿಂಭಾಗದಲ್ಲಿ ಪ್ರಾರಂಭವಾಗಿ ಕಣ್ಣುಗಳವರೆಗೆ ವಿಸ್ತಾರವಾಗಿರುತ್ತದೆ. ಮೈಗ್ರೇನ್ ನೋವಿಗೆ ಕಾರಣವಾದ ಜೀವ ಪ್ರಕ್ರಿಯೆ ವ್ಯವಸ್ಥೆ ಬಗ್ಗೆ ಯಾವುದೇ ವೈಜ್ಞಾನಿಕ ಆಧಾರಗಳು ಈವರೆಗೆ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ತಲೆಯಲ್ಲಿರುವ ನರಗಳಲ್ಲಿ ಕೆಲವು ರೀತಿಯ ರಾಸಾಯನಿಕಗಳು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಆದಾ ಕಾರಣ ಪಾರ್ಶ್ವ ತಲೆ ನೋವು ಬರುತ್ತದೆ ಎಂಬುದಷ್ಟೇ ತಿಳಿದಿರುವುದು. ಇದಕ್ಕೆ ಉದ್ವೇಗರಾಗುವ ಅವಶ್ಯಕತೆಯಿಲ್ಲ. ಹೋಮಿಯೋಕೇರ್ ಇಂಟರ್‌ನ್ಯಾಷನಲ್ ಚಿಕಿತ್ಸೆಯಿಂದ ನಿಮ್ಮ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡುವ ಅವಕಾಶವಿದೆ. ಹೋಮಿಯೋಕೇರ್ ಇಂಟರ್‌ನ್ಯಾಷನಲ್‌ನಲ್ಲಿ ಐದು ತಿಂಗಳು ಚಿಕಿತ್ಸೆ ತೆಗೆದುಕೊಂಡ ಮೇಲೆ ವಾಕರಿಕೆ ಕಡಿಮೆ ಆಗಿದೆ, ತಲೆ ನೋವಿನಲ್ಲಿ ಸ್ವಲ್ಪ ಗಮನಾರ್ಹ ಇಳಿಕೆ ಕಂಡುಬಂದಿದೆ.
ಮತ್ತೆ ಆರು ತಿಂಗಳು ಚಿಕಿತ್ಸೆ ತೆಗೆದುಕೊಂಡಲ್ಲಿ ಕ್ರಮವಾಗಿ ತಲೆ ನೋವು ಕಡಿಮೆಯಾದುದರ ಜೊತೆಗೆ, ಆತನು ಬೆಳಕನ್ನು ನೋಡಬಲ್ಲ ಸಾಮರ್ಥ್ಯ ಮತ್ತು ಶಬ್ದಗಳನ್ನು ಕೇಳಬಲ್ಲ ಸಾಮರ್ಥ್ಯವು ಹಿಂದಿರುಗಿ ಬಂದಿತು. ಈಗ ಆತನಿಗೆ ಯಾವ ತೊಂದರೆಯೂ ಇಲ್ಲ. ತನ್ನೆಲ್ಲಾ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಿದ್ದಾನೆ.
ಹೋಮಿಯೋಕೆರ್ ಇಂಟರ್‌ನ್ಯಾಷನಲ್‌ನಲ್ಲಿ ನೀಡುವ ಜೆನೆಟಿಕ್ ಕಾನ್ಸ್‌ಟಿಟ್ಯೂಷನಲ್ ಚಿಕಿತ್ಸಾ ವಿಧಾನದಿಂದ ರೋಗಿಯ ಮಾನಸಿಕ ಹಾಗೂ ಶಾರೀರಿಕ ಲಕ್ಷಣಗಳನ್ನು ಪರಿಗಣಿಸಿ ಚಿಕಿತ್ಸೆ ನೀಡುವುದರಿಂದ ಪಾರ್ಶ್ವನೋವಿಂದ ಪರಿಹಾರ ಪಡೆಯಬಹುದು. ಅಲ್ಲದೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಸುರಕ್ಷಿತವಾಗಿ ಚಿಕಿತ್ಸೆ ಕೊಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.