ಬಬಲ್ ಧಮಾಕಾ
Team Udayavani, Jun 5, 2019, 6:00 AM IST
ಒಂದಿಂಚು ಉದ್ದದ, ಸಕ್ಕರೆಯ ಬಿಲ್ಲೆಯಂಥ, ಎಳೆದಷ್ಟೂ ಉದ್ದವಾಗುವ, ನಾಲಿಗೆಯಿಂದ ಮುಂದೆ ತಳ್ಳಿ ಊದಿದರೆ ಗುಳ್ಳೆ ಸೃಷ್ಟಿಸುವ ಅದನ್ನು ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಂತೆ. ಯಾವುದಪ್ಪಾ ಅದು ಅಂದಿರಾ? ನಾವು ಹೇಳಿದ್ದು ಬಬಲ್ ಗಮ್/ಚಿವಿಂಗ್ ಗಮ್ ಬಗ್ಗೆ. ಸುಮ್ಮನೆ ಟೈಮ್‌ಪಾಸ್‌ಗೆ ಅಂತ ಬಾಯಿಗೆ ಹಾಕ್ಕೊಂಡು, ಒಂದಷ್ಟು ಹೊತ್ತು ಜಗಿದು ಉಗೀತೀವಲ್ಲ ಆ ಬಬಲ್ ಗಮ್‌ನಿಂದ ಕೂಡಾ ಅನೇಕ ಉಪಯೋಗಗಳಿವೆ.
ಬಬಲ್‌ಗಮ್ ಜಗಿಯುವುದರಿಂದ ಆಲಸಿತನ, ನಿದ್ದೆ ದೂರವಾಗಿ, ಏಕಾಗ್ರತೆ ಹೆಚ್ಚುತ್ತದೆ. ಹಲ್ಲು ಮತ್ತು ಬಾಯಿಯ ಸ್ನಾಯುಗಳ ಆರೋಗ್ಯಕ್ಕೆ ಒಳ್ಳೆಯದು. ಈರುಳ್ಳಿ, ಬೆಳ್ಳುಳ್ಳಿಯಂಥ ಪದಾರ್ಥಗಳನ್ನು ತಿಂದ ನಂತರ ಬಬಲ್‌ಗಮ್ ಜಗಿದರೆ ಬಾಯಿ ವಾಸನೆಯಿಂದ ಮುಕ್ತರಾಗಬಹುದು. ಸದಾ ಕುರುಕಲು ತಿನ್ನಬೇಕು ಅಂತ ಹಪಹಪಿಸುವ ಮಂದಿಯ ಬಾಯಿ ಚಪಲವನ್ನೂ ಬಬಲ್‌ಗಮ್ ದೂರ ಮಾಡುತ್ತದೆ. ಬಬಲ್ ಗಮ್ ಜಗಿಯುತ್ತಾ ಗಂಟೆಗೆ 11 ಕ್ಯಾಲೊರಿ ಕಳೆದುಕೊಳ್ಳಬಹುದು ಅಂತಾವೆ ಸಮೀಕ್ಷೆಗಳು. ಅಂದರೆ, ಬಬಲ್‌ಗಮ್‌ನಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು ಅಂತಾಯ್ತು.
ಬಬಲ್‌ಗಮ್ ಜಗಿಯುವುದರಿಂದ, ಮೆದುಳಿಗೆ ರಕ್ತ ಸಂಚಾರ ಸರಾಗವಾಗಿ ನೆನಪಿನ ಶಕ್ತಿಯೂ ವೃದ್ಧಿಸುತ್ತದಂತೆ. 2011ರಲ್ಲಿ ನಡೆದ ಸಂಶೋಧನೆಯ ಪ್ರಕಾರ, ದಿನವೂ ಬಬಲ್‌ಗಮ್ ಜಗಿಯುವುದರಿಂದ ಒತ್ತಡ, ಖನ್ನತೆಯಂಥ ಮಾನಸಿಕ ರೋಗಗಳನ್ನು ಹತೋಟಿಯಲ್ಲಿಡಬಹುದಂತೆ. ಬಬಲ್‌ಗಮ್ ಅನ್ನು ಜಗಿಯುವಾಗ ಬಿಡುಗಡೆಯಾಗುವ ಲಾಲಾರಸವು, ಹೊಟ್ಟೆಯಲ್ಲಿನ ಆ್ಯಸಿಡ್‌ಗಳನ್ನು ನಿಯಂತ್ರಿಸಿ ಜೀರ್ಣಶಕ್ತಿಯನ್ನು ಸರಾಗಗೊಳಿಸುತ್ತದೆ. ಅಷ್ಟೇ ಅಲ್ಲದೆ, ಸಿಗರೇಟ್-ಗುಟ್ಕಾ ಮುಂತಾದ ದುಶ್ಚಟಗಳಿಂದ ದೂರವಾಗಲು ಬಬಲ್‌ಗಮ್ ಸಹಾಯ ಮಾಡುತ್ತದೆ. ಬಬಲ್‌ಗಮ್ ಜಗಿಯುವುದರಿಂದ ಮುಖದ ಸ್ನಾಯುಗಳಿಗೆ ವ್ಯಾಯಾಮ ಸಿಕ್ಕಂತಾಗಿ, ಮುಖದ ಸೌಂದರ್ಯವೂ ಇಮ್ಮಡಿಸುತ್ತದಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.