ಹೂಳೆತ್ತುವ ಕಾಮಗಾರಿಗೆ 2ನೇ ವರ್ಷವೂ ನೀತಿ ಸಂಹಿತೆ ಅಡ್ಡಿ !
ಈ ಬಾರಿಯೂ ಕಲ್ಸಂಕ ತೋಡಿನಿಂದ ನೆರೆ ಭೀತಿ
Team Udayavani, Jun 5, 2019, 6:10 AM IST
ಉಡುಪಿ: ರಾಜಕಾಲುವೆ ಯೆನಿಸಿರುವ ಕಲ್ಸಂಕ ತೋಡು ಈ ವರ್ಷವೂ ಉಕ್ಕಿ ಹರಿದು ನೆರೆ ಉಂಟಾಗುವ ಆತಂಕ ಎದುರಾಗಿದೆ. ತೋಡಿನ ಹೂಳೆತ್ತಬೇಕು, ಗಿಡಗಂಟಿ, ಕಸಗಳನ್ನು ತೆಗೆದು ನೀರು ಹರಿವಿಗೆ ದಾರಿ ಮಾಡಿಕೊಡಬೇಕು ಎಂಬ ಬೇಡಿಕೆ ಈ ಬಾರಿಯೂ ಈಡೇರಿಲ್ಲ.
ಕಲ್ಸಂಕ ತೋಡು ಮಣಿಪಾಲದ ಮಣ್ಣಪಳ್ಳದಿಂದ ಮಲ್ಪೆ ಕಲ್ಮಾಡಿವರೆಗೆ ಸರಿಸುಮಾರು 10 ಕಿ.ಮೀ. ಉದ್ದಕ್ಕೆ ಹರಿಯುತ್ತದೆ. ಇಂದ್ರಾಣಿ ದೇವಸ್ಥಾನದ ಸಮೀಪ ಹಾದುಹೋಗುವ ಈ ತೋಡನ್ನು ಇಂದ್ರಾಣಿ ಹೊಳೆ ಎಂದೂ ಕರೆಯಲಾಗುತ್ತದೆ. ಪ್ರತೀ ವರ್ಷ ಇದು ತುಂಬಿ ಹರಿಯುತ್ತದೆ. ಆದರೆ ಕಳೆದ ವರ್ಷ ಹೂಳು ತೆಗೆಯದೆ ಇದ್ದುದರಿಂದ ಬೈಲಕೆರೆ, ಕಲ್ಸಂಕ, ಮಠದಬೆಟ್ಟು, ಗರೋಡಿ ರಸ್ತೆ ಪ್ರದೇಶಗಳಲ್ಲಿ ನೆರೆಹಾವಳಿ ಉಂಟಾಗಿತ್ತು. ಈ ಬಾರಿಯೂ ಅದೇ ಆತಂಕ ಸ್ಥಳೀಯರಲ್ಲಿದೆ.
ನೀತಿ ಸಂಹಿತೆ ಅಡ್ಡಿ
ಕಳೆದ ವರ್ಷ ವಿಧಾನಸಭಾ ಚುನಾವಣೆಯ ನೀತಿಸಂಹಿತೆಯಿಂದಾಗಿ ತೋಡಿನ ಹೂಳೆತ್ತುವ ಕಾಮಗಾರಿ ನಡೆಸಲು ಸಾಧ್ಯವಾಗಲಿಲ್ಲ. ನೀತಿಸಂಹಿತೆ ಮುಗಿದು ಕಾಮಗಾರಿ ಆರಂಭಿಸುವಷ್ಟರಲ್ಲಿ ಮಳೆ ಬಂದು ತೋಡು ತುಂಬಿ ಹರಿದು ಹಲವು ಮನೆಗಳಿಗೆ ನೆರೆ ನುಗ್ಗಿತ್ತು. ರಸ್ತೆ ಸಂಪರ್ಕವೂ ಕಡಿದು ಹೋಗಿತ್ತು. ಈ ಬಾರಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆಯಿಂದಾಗಿ ಇದುವರೆಗೆ ಕಾಮಗಾರಿ ನಡೆದಿಲ್ಲ.
ಕಿರಿದಾಗುತ್ತಿದೆ
ವರ್ಷದಿಂದ ವರ್ಷಕ್ಕೆ ಕಲ್ಸಂಕ ತೋಡು ಕಿರಿದಾಗುತ್ತಿದೆ. ಕೆಲವೆಡೆ ಅತಿಕ್ರಮಣ ನಡೆಯುತ್ತಿದೆ. ಇನ್ನು ಕೆಲವೆಡೆ ಗಿಡಗಂಟಿಗಳು ಮುಚ್ಚಿ ಹೋಗಿವೆ. ತೋಡಿನ ಅಲ್ಲಲ್ಲಿ ಕಸದ ರಾಶಿಗಳಿದ್ದು ಅದು ಕೂಡ ಮಳೆನೀರು ಹರಿಯಲು ತಡೆಯಾಗಲಿದೆ.
ಈ ತೋಡಿಗೆ ಕೊಳಚೆ ನೀರು ಕೂಡ ಸೇರ್ಪಡೆಯಾಗುವುದರಿಂದ ಮಳೆಗಾಲದಲ್ಲಿ ನೆರೆ ಜತೆಗೆ ಕೊಳಚೆ ನೀರು ಕೂಡ ಅನೇಕ ಮನೆಯಂಗಳಗಳಿಗೆ ಪ್ರವಹಿಸುತ್ತದೆ. ಈ ಬಾರಿ ಸಾಮಾನ್ಯ ಮಳೆಗಿಂತ ತುಸು ಹೆಚ್ಚು ಮಳೆಬಂದರೂ ಕಲ್ಸಂಕ ತೋಡು ಉಕ್ಕಿ ಹರಿಯುವುದು ಖಂಡಿತ ಎಂಬ ಆತಂಕದ ಮಾತುಗಳು ತೋಡಿನ ಇಕ್ಕೆಲದ ನಿವಾಸಿಗಳಿಂದ ಕೇಳಿಬರುತ್ತಿದೆ.
ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ
ಕಲ್ಸಂಕ ತೋಡಿನ ಹೂಳೆತ್ತಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಚುನಾವಣೆ ನೀತಿಸಂಹಿತೆ ಇದ್ದುದರಿಂದ ಟೆಂಡರ್ ವಿಳಂಬವಾಗಿದೆ. ಜಿಲ್ಲಾಧಿಕಾರಿಯವರ ಒಪ್ಪಿಗೆ ದೊರೆತ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ. ಅಂದಾಜು ವಾರದೊಳಗೆ ಕಾಮಗಾರಿ ಆರಂಭವಾಗಲಿದೆ.
– ಆನಂದ ಕಲ್ಲೋಳಿಕರ್, ಆಯುಕ್ತರು, ನಗರಸಭೆ
ಡಿಸಿ ಭೇಟಿಯಾಗಿ ವಾರಗಳಾಯಿತು
ಕಲ್ಸಂಕ ತೋಡಿನ ಹೂಳೆತ್ತಬೇಕೆಂದು ನಾವು ಕಳೆದ ಹಲವು ಸಮಯದಿಂದ ಜಿಲ್ಲಾಧಿಕಾರಿ, ಪೌರಾಯುಕ್ತರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮೂರು ವಾರಗಳಾದರೂ ಪ್ರಯೋಜನವಾಗಿಲ್ಲ.
-ಸವಿತಾ ಹರೀಶ್‌ರಾಮ್, ನಗರಸಭಾ ಸದಸ್ಯರು
ತಡೆಗೋಡೆ ನಿರ್ಮಾಣ
ಬೈಲಕೆರೆ-ಕಲ್ಸಂಕ ಭಾಗದಲ್ಲಿಯೂ ಹೂಳೆತ್ತದೆ ಇರುವುದರಿಂದ ಸಮಸ್ಯೆಯಾಗಲಿದೆ. ಈ ಬಾರಿ ಇಲ್ಲಿ ಸುಮಾರು 410 ಮೀಟರ್ ಉದ್ದಕ್ಕೆ ತಡೆಗೋಡೆ ನಿರ್ಮಿಸಲಾಗಿದೆ. ಮುಂದೆ ಇದನ್ನು ವಿಸ್ತರಿಸುವ ಚಿಂತನೆ ಇದೆ. ಇದು ನೆರೆಯಿಂದ ಸ್ವಲ್ಪ ಮಟ್ಟಿನ ರಕ್ಷಣೆ ನೀಡುವ ವಿಶ್ವಾಸವಿದೆ. ತೋಡಿನ ಗಿಡಗಂಟಿ ತೆಗೆದು ಹೂಳೆತ್ತಿದರೆ ನೆರೆ ಅಪಾಯವೂ ಇಲ್ಲ. ಅಂತರ್ಜಲ ಮಟ್ಟ ಹೆಚ್ಚಳಕ್ಕೂ ಪೂರಕ.
-ಗಿರೀಶ್ ಅಂಚನ್, ನಗರಸಭಾ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ನಗರದ ಎಲ್ಲೆಡೆ ಖರೀದಿ ಭರಾಟೆ; ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಒಂದೇ ದಿನ ಬಾಕಿ
Udupi: ಸಿಗುತ್ತಿಲ್ಲ ಡಾಮರು ಮಿಶ್ರಣ!; ಹಾನಿಗೊಂಡ ರಸ್ತೆಗಳ ದುರಸ್ತಿಗೆ ಕೂಡಿಬರದ ಕಾಲ
Sports; ಕುಚ್ಚೂರು: ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
Ajekar:ಪ್ರಿಯಕರನೊಂದಿಗೆ ಸೇರಿ ಪತಿಯ ಹ*ತ್ಯೆ ಪ್ರಕರಣ:ಪೊಲೀಸರ ತಂಡದಿಂದ ಸಾಕ್ಷ್ಯಗಳ ಹುಡುಕಾಟ
Udupi: ಇಂದ್ರಾಳಿ ಮೇಲ್ಸೇತುವೆ: ಜ. 15 ರೊಳಗೆ ಮುಗಿಸಲು ಗಡುವು
MUST WATCH
ಹೊಸ ಸೇರ್ಪಡೆ
Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
ನಿರಾಶ್ರಿತ ರೋಹಿಂಗ್ಯಾ ಮಕ್ಕಳ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಿ: PIL ವಜಾಗೊಳಿಸಿದ ಹೈಕೋರ್ಟ್
Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು
ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.