ವಾಯು ಮಾಲಿನ್ಯ : ಭಾರತದ 5ನೇ ಅತಿ ದೊಡ್ಡ ಕೊಲೆಗಾರ
ವಿಶ್ವ ಪರಿಸರ ದಿನ
Team Udayavani, Jun 5, 2019, 6:10 AM IST
ಜಗತ್ತು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಲ್ಲಿ ವಾಯು ಮಾಲಿನ್ಯವೂ ಒಂದು. ವಿಶ್ವದಾದ್ಯಂತ ಸಂಭವಿಸುವ ಸಾವಿಗೆ ವಾಯು ಮಾಲಿನ್ಯವೂ ಪ್ರಮುಖ ಕಾರಣವಾಗಿದೆ ಎನ್ನುತ್ತದೆ ಸಂಶೋಧನೆ. ವಿಷಕಾರಿ ರಾಸಾಯನಿಕ ತುಂಬಿದ ಮಲಿನ ಗಾಳಿಯನ್ನು ಶ್ವಾಸಕೋಶದ ಒಳಗೆ ಎಳೆದುಕೊಂಡಾಗ ಅದು ಹಲವು ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತದೆ.
ರಾಜಧಾನಿಯೂ ಹೊರತಲ್ಲ
2018ರಲ್ಲಿ ಸ್ವಿಸ್ ಮೂಲದ ಸಂಸ್ಥೆಯೊಂದು ನಡೆಸಿದ ಸಂಶೋಧನೆಯ ಪ್ರಕಾರ ಜಗತ್ತಿನ ಅತ್ಯಂತ ಹೆಚ್ಚು ವಾಯು ಮಾಲಿನ್ಯ ನಗರಗಳಲ್ಲಿ ಭಾರತದ ಗುರುಗ್ರಾಮ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಗಾಜಿಯಾಬಾದ್ ಇದ್ದರೆ ಪಾಕಿಸ್ಥಾನದ ಫೈಸಲಾಬಾದ್ ಮೂರನೇ ಸ್ಥಾನದಲ್ಲಿದೆ. ದಿಲ್ಲಿಗೆ ಈ ಪಟ್ಟಿಯಲ್ಲಿ 11ನೇ ಸ್ಥಾನ. ಆದರೆ, ಗರಿಷ್ಠ ಮಾಲಿನ್ಯವಾದ ರಾಜಧಾನಿ ಎಂಬ ಹಣೆಪಟ್ಟಿ ಕಳವಳಕಾರಿ.
ಆತಂಕಕಾರಿ ಬೆಳವಣಿಗೆ
ವಾಯು ಮಾಲಿನ್ಯ ಕಾರಣದಿಂದ ಪ್ರತಿ ವರ್ಷ ಜಗತ್ತಿನಾದ್ಯಂತ 7 ಮಿಲಿಯನ್ ಮಂದಿ ಸಾವನ್ನಪ್ಪುತ್ತಿದ್ದಾರೆ. ವಾಯು ಮಾಲಿನ್ಯ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುವುದು ಮಾತ್ರವಲ್ಲ ಹವಾಮಾನ ಬದಲಾವಣೆ, ನೀರಿನ ಸಹಜ ಗುಣದ ಮೇಲೆ ದುಷ್ಪರಿಣಾಮ ಮತ್ತು ಆಹಾರ ಉತ್ಪಾದನೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಉಷ್ಣಾಂಶ ಹೆಚ್ಚಳ
ಉಷ್ಣಾಂಶ ಹೆಚ್ಚಳಕ್ಕೂ ವಾಯು ಮಾಲಿನ್ಯದ ಕೊಡುಗೆ ಅಪಾರ. ಇಂಧನದ ಉತ್ಪಾದನೆ ಮತ್ತು ಬಳಕೆ ವಾಯು ಮಾಲಿನ್ಯಕ್ಕೆ ಮುಖ್ಯ ಕಾರಣ. ಪಳೆಯುಳಿಕೆ ಇಂಧನ ಉರಿಸಿದಾಗ ಅದು ಗ್ಯಾಸ್ ಮತ್ತು ರಾಸಾಯನಿಕವನ್ನು ಬಿಡುಗಡೆಗೊಳಿಸುತ್ತದೆ. ಇದು ವಾತಾವರಣದ ಉಷ್ಣಾಂಶ ಹೆಚ್ಚಿಸುತ್ತದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಸಂಶೋಧಕರು. ಹಿಮಗಡ್ಡೆ ಕರಗಿ ಸಮುದ್ರದ ನೀರಿನ ಮಟ್ಟ ಏರಿಕೆಯಾಗಿ ಅಪಾಯ ಎರುರಾಗುವ ಸಾಧ್ಯತೆ ಇದೆ.
ದುಷ್ಪರಿಣಾಮ
1 ಮಲಿನ ವಾಯು ಆಸ್ತಮಾಕ್ಕೆ ಕಾರಣವಾಗುತ್ತದೆ.
2 ಶ್ವಾಸಕೋಶದ ಸಾಮರ್ಥ್ಯ ಕುಗ್ಗುತ್ತದೆ.
3 ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ
4 ಕೆಮ್ಮು ಮತ್ತು ಉಬ್ಬಸ.
5 ರೋಗ ನಿರೋಧಕ ಮತ್ತು ಸಂತಾನೋತ್ಪತ್ತಿ ಶಕ್ತಿ ಕುಂಠಿತ
6 ಅತಿಯಾದ ವಾಯು ಮಾಲಿನ್ಯ ಹೃದ್ರೋಗಕ್ಕೂ ಕಾರಣವಾಗಬಲ್ಲದು.
ಮಾಲಿನ್ಯಕ್ಕೆ ಕಾರಣವಾದ ಅಂಶಗಳು
ಶೇ. 45 ಧೂಳು ಮತ್ತು ನಿರ್ಮಾಣ ಕಾಮಗಾರಿ
ಶೇ. 17 ತ್ಯಾಜ್ಯಗಳನ್ನು ಉರಿಸುವುದರಿಂದ
ಶೇ. 14 ವಾಹನಗಳು
ಶೇ. 9 ಡೀಸೆಲ್ ಜನರೇಟರ್
ಶೇ. 8 ಕಾರ್ಖಾನೆಗಳು
ಶೇ. 7 ಅಡುಗೆ ತಯಾರಿ
ಭಾರತದಲ್ಲಿ…
ಭಾರತದಲ್ಲೂ ವಾಯು ಮಾಲಿನ್ಯ ಬೀರುವ ಪರಿಣಾಮ ಭೀಕರವಾಗಿದೆ. ಈ ಕಾರಣದಿಂದ ದೇಶದಲ್ಲಿ ಪ್ರತಿ ವರ್ಷ 1.5 ಮಿಲಿಯನ್ ಜನ ಸಾಯುತ್ತಿದ್ದಾರೆ. ಇದು ಐದನೇ ಅತಿ ದೊಡ್ಡ ಕೊಲೆಗಾರ ಎನಿಸಿದೆ. ಆಸ್ತಮಾ ಸಹಿತ ಉಸಿರಾಟ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವವರ ಸಂಖ್ಯೆಯೂ ಭಾರತದಲ್ಲೇ ಅಧಿಕ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.