ಪಾಠ ಕಲಿಸುತ್ತಿವೆ ಮಲಿನ ನಗರಗಳು
ವಿಶ್ವ ಪರಿಸರ ದಿನ
Team Udayavani, Jun 5, 2019, 6:10 AM IST
ಪರಿಸರ ದಿನ ಬಂತೆಂದರೆ ಸಾಕು, ಶಾಲೆಗಳು, ಕಚೇರಿಗಳು ಹಾಗೂ ಸಂಘ – ಸಂಸ್ಥೆಗಳಲ್ಲಿ ಗಿಡ ನೆಡುವ, ಪರಿಸರ ಶುಚಿತ್ವದ ಕೆಲಸಗಳು ಶುರುವಾಗುತ್ತವೆ. ತಿಂಗಳು ಕಳೆಯುವಷ್ಟರಲ್ಲಿ ಸ್ವತ್ಛತೆಯ ಕಾರ್ಯ ಹಳ್ಳ ಹಿಡಿಯುತ್ತದೆ. ನೆಟ್ಟ ಗಿಡಗಳು ಬಾಡಿ ಹೋಗುತ್ತವೆ. ಕಸ, ವಾಹನಗಳು, ಕಾರ್ಖಾನೆಗಳ ಹೊಗೆ, ಕಲುಷಿತ ನೀರು, ಅಂಗಡಿ ಮುಂಗಟ್ಟುಗಳ ತ್ಯಾಜ್ಯ, ದುರ್ವಾಸನೆ ಎಲ್ಲವೂ ಮತ್ತೆ ನಮ್ಮ ಪರಿಸರವನ್ನು ಹದಗೆಡಿಸುತ್ತವೆ.
ನಮ್ಮ ಪರಿಸರವನ್ನು ಗಮನಿಸಿದರೆ ಸಾಕು, ಶುಚಿತ್ವದ ಕುರಿತಾಗಿ ನಮಗಿರುವ ಕಾಳಜಿ ತಿಳಿಯುತ್ತದೆ. ವಿಶ್ವ ಆರೋಗ್ಯ ಸಂಸ್ಥೆ 2018ರಲ್ಲಿ ಜಗತ್ತಿನ 30 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 22 ನಗರಗಳನ್ನು ಸೇರಿಸಿರುವುದು ನಮ್ಮಲ್ಲಿ ಸ್ವತ್ಛತೆಯ ಜಾಗೃತಿ ಎಷ್ಟರ ಮಟ್ಟಿಗಿದೆ ಎನ್ನುವುದನ್ನು ಸೂಚಿಸುತ್ತದೆ. ಎರಡನೇ ಸ್ಥಾನದಲ್ಲಿ ಚೀನದ ಐದು ನಗರಗಳನ್ನು ಗುರುತಿಸಲಾಗಿದೆ.
ದಕ್ಷಿಣ ಏಷ್ಯದಲ್ಲೇ ಪರಿಸರ ಮಾಲಿನ್ಯ ಅತೀ ಹೆಚ್ಚು ಎಂಬುದು ಸಂಶೋಧನ ವರದಿಗಳಿಂದ ರುಜುವಾತಾಗಿದೆ. ಭಾರತದ ಗುರುಗ್ರಾಮ, ಗಾಝಿಯಾಬಾದ್, ಫರೀದಾಬಾದ್, ಬಿವದಿ, ನೋಯ್ಡಾ, ಪಟನಾ, ಲಕ್ನೋ ನಗರಗಳನ್ನು ಗರಿಷ್ಠ ಕಲುಷಿತ ನಗರಗಳ ಪಟ್ಟಿಗೆ ಸೇರಿಸಲಾಗಿದೆ. ಚೀನದ ಹಾಟನ್, ಪಾಕಿಸ್ಥಾನದ ಫೈಸಲಾಬಾದ್ ನಗರಗಳೂ ಈ ಪಟ್ಟಿಯಲ್ಲಿ ಬರುತ್ತವೆ.
ಮಾಲಿನ್ಯಕ್ಕೇನು ಕಾರಣ?
ಬಳಸಿ ಬೇಡವಾದ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವುದು, ಬಯಲು ಶೌಚ, ಸಿಕ್ಕಲ್ಲೆಲ್ಲ ಕಸ ಚೆಲ್ಲುವುದು, ಸ್ನಾನ, ಬಟ್ಟೆ ಒಗೆಯುವುದು, ವಾಹನ ತೊಳೆಯುವುದು, ಪ್ರಾಣಿಗಳ ಮೈ ತೊಳೆಯಲೂ ನದಿ, ಕೆರೆಗಳನ್ನೇ ಬಳಸುವುದು, ಸತ್ತ ಪ್ರಾಣಿಗಳ ಶವಗಳನ್ನು ನೀರಿಗೆಸೆಯುವುದು, ಕಾರ್ಖಾನೆಗಳೂ ತ್ಯಾಜ್ಯವನ್ನು ನದಿಗಳಿಗೆ ಹರಿಯಬಿಡುವುದು, ವಾಹನಗಳು ದೊಡ್ಡ ಶಬ್ದ ಹಾಗೂ ಕರ್ಕಶ ಹಾರ್ನ್ ಬಳಸುವುದು, ಅತಿಯಾದ ಹೊಗೆ ಉಗುಳುವ ಯಂತ್ರಗಳು ಪರಿಸರ ಮಾಲಿನ್ಯಕ್ಕೆ ದೊಡ್ಡ ಕೊಡುಗೆ ನೀಡುತ್ತಿವೆ.
ಇದು ಹೀಗೆಯೇ ಮುಂದುವರಿದರೆ 22 ಅಲ್ಲ, ಎಲ್ಲ 30 ನಗರಗಳೂ ಭಾರತದಿಂದಲೇ ಈ ಪಟ್ಟಿಗೆ ಸೇರಿದರೆ ಅಚ್ಚರಿ ಏನೂ ಇಲ್ಲ. ಈಗಲೇ ಎಚ್ಚೆತ್ತುಕೊಂಡು ನಮ್ಮ ಕೈಲಾದ ಮಟ್ಟಿನಲ್ಲಿ ಪರಿಸರ ರಕ್ಷಣೆಯ ಕೈಂಕರ್ಯ ಮಾಡಬೇಕಿದೆ. ಇದು ಪರಿಸರವನ್ನಲ್ಲ, ನಮ್ಮನ್ನೇ ನಾವು ರಕ್ಷಿಸಿಕೊಳ್ಳುವ ಕ್ರಮ.
ಮಾನವನ ದುರಾಸೆಯ ಫಲವಾಗಿ ಅರಣ್ಯ ನಾಶವಾಗುತ್ತಿದೆ. ಮಳೆ ಸುರಿಯುವ ಪ್ರಮಾಣವೂ ಕಡಿಮೆಯಾಗುತ್ತಿದೆ. ಗರಿಷ್ಠ ಮಳೆ ಸುರಿಯುವ ಪ್ರದೇಶಗಳಲ್ಲೂ ಮೂರು ತಿಂಗಳು ಕಳೆಯುವಷ್ಟರಲ್ಲಿ ಅಂತರ್ಜಲ ಪಾತಾಳ ಸೇರುತ್ತಿದೆ. ನೀರಿಗಾಗಿ ಹಾಹಾಕಾರ ಮುಗಿಲು ಮುಟ್ಟಿದೆ.
ಈ ಪರಿಸ್ಥಿತಿಯಲ್ಲಿ ಜಗತ್ತನ್ನು ಕಾಪಾಡಿಕೊಳ್ಳಬೇಕಾದರೆ ನಾವು ಮೊದಲು ಬದಲಾಗಬೇಕು. ಪ್ರಕೃತಿಯನ್ನು ಉಳಿಸುವ ಮೂಲಕ ಮುಂದಿನ ಜನಾಂಗಕ್ಕೂ ಅದನ್ನು ಕಾಪಿಡಬೇಕು. ವಿಶ್ವ ಪರಿಸರ ದಿನದಂದು ಪರಿಸರ ಸಂರಕ್ಷಣೆಯ ಮೂಲಕ ಜಗತ್ತನ್ನು ಕಾಪಡುವ ಗುರಿಯನ್ನಿಟ್ಟುಕೊಂಡು ನಾವು ಇನ್ನಾದರೂ ಬದಲಾಗೋಣ.
ನಿಮಗೆ ಗೊತ್ತಿಲ್ಲದ ಸಂಗತಿಗಳು!
- ಭೂಮಿ ದಲ್ಲಿನ ಶೇ. 3ರಷ್ಟು ನೀರು ಮಾತ್ರ ಕುಡಿಯಲು ಯೋಗ್ಯವಾಗಿದ್ದು, ಉಳಿದ ಶೇ. 97 ಭಾಗ ನೀರು ಉಪ್ಪಾಗಿದೆ. ಭೂಮಿಯ ಅರ್ಧದಷ್ಟು ನೀರು ಮಾತ್ರ ಅಂತರ್ಜಲದ ರೂಪದಲ್ಲಿದ್ದು, ಉಳಿದ ಭಾಗ ಆವಿಯ ರೂಪದಲ್ಲಿದೆ.
- 700 ಮಿಲಿಯನ್‌ಗೂ ಅಧಿಕ ಮಂದಿ ಸದ್ಯ ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. 6ರಿಂದ 8 ಮಿಲಿಯನ್ ಜನರು ನೀರಿನಿಂದ ಹರಡುವ/ ಕಲುಷಿತ ನೀರಿನಿಂದ ಬರುವ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ.
- ಕೃಷಿಗೆ ಶೇ. 70ರಷ್ಟು ನೀರನ್ನು ಬಳಕೆಯಾಗುತ್ತದೆ. ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಇದು ಶೇ. 90ರಷ್ಟಿದೆ.
- ಸೂರ್ಯನ ಶಾಖ ಭೂಮಿಯನ್ನು ನೇರವಾಗಿ ತಲುಪದಂತೆ ತಡೆಯುವ ಓಝೊàನ್ ಪದರ ಅಪಾಯ ದಲ್ಲಿದೆ. ಅದರ ರಂಧ್ರಗಳು ವಿಸ್ತರಿಸುತ್ತಿವೆ. ಸದ್ಯ 29 ಮಿಲಿಯನ್ ಚದರ ಅಡಿಯಷ್ಟು ದೊಡ್ಡ ರಂಧ್ರವಾಗಿದೆ. ಮುಂದಿನ 50 ವರ್ಷಗ ಳಲ್ಲಿ ಓಝೊàನ್ ಪರದೆ ಸಂಪೂರ್ಣ ತೂತಾಗಲಿದೆ.
- ಇತ್ತೀಚೆಗಿನ 200 ವರ್ಷಗಳಲ್ಲಿ ನಾವು 2.3 ಬಿಲಿಯನ್ ಟನ್ ಇಂಗಾಲದ ಡೈ ಆಕ್ಸೆ„ಡನ್ನು ಪರಿಸರಕ್ಕೆ ಬಿಟ್ಟಿದ್ದೇವೆ. ಈ ಪೈಕಿ ಅರ್ಧದಷ್ಟು ಕಳೆದ 35ರಿಂದ 50 ವರ್ಷಗಳಲ್ಲೇ ಸೇರಿದೆ.
- ಅಂಟಾರ್ಟಿಕಾದಲ್ಲಿರುವ ಮಂಜುಗಳು ಅಟ್ಲಾಂಟಿಕ್ ಸಾಗರದಲ್ಲಿರುವ ನೀರಿಗಿಂತ ಜಾಸ್ತಿ. ಎಲ್ಲ ಮಂಜು ಕರಗಿದರೆ ಸಮುದ್ರದ ಎತ್ತರ 66 ಮೀಟರ್ ಹೆಚ್ಚಾಗಲಿದೆ.
- ವಿಶ್ವದಲ್ಲಿ ಪ್ರತಿ ಸೆಕೆಂಡ್‌ಗೆ 1.60 ಲಕ್ಷ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಬಳಸುತ್ತಾರೆ. ಒಂದು ದಿನ ಪರಿಸರ ಸೇರುವ ಪ್ಲಾಸ್ಟಿಕ್ ಪ್ರಮಾಣ ಹಲವು ಟನ್.
- ಪ್ರತಿ ದಿನ 27 ಸಾವಿರ ಮರಗಳನ್ನು ಟಿಶ್ಯೂ ಪೇಪರ್ ತಯಾರಿಸಲು ಕಡಿಯಲಾಗುತ್ತದೆ. ಎಲ್ಲ ಬಗೆಯ ಪೇಪರ್/ಕಾಗದಗಳನ್ನು ಮರುಬಳಕೆ ಮಾಡಿದರೆ ಹಲವು ಸಾವಿರ ಮರಗಳನ್ನು ಸಂರಕ್ಷಿಸಬಹುದಾಗಿದೆ.
- ಗಾಜು ಮಣ್ಣನ್ನು ಸೇರಿದರೆ 4,000 ಸಾವಿರಕ್ಕೂ ಹೆಚ್ಚು ವರ್ಷ ಅದು ಮೂಲ ಸ್ವರೂಪವನ್ನು ಬಿಟ್ಟು ಕೊಡುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್
Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.