ಐಆರ್‌ಸಿಟಿಸಿಯಿಂದ ಭಾರತ್ ದರ್ಶನ್ ಪ್ರವಾಸ
Team Udayavani, Jun 5, 2019, 3:02 AM IST
ಬೆಂಗಳೂರು: ಕೇಂದ್ರ ಸರ್ಕಾರದ ಉದ್ಯಮವಾದ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ರಾಜ್ಯದ ಜನತೆಗೆ ಜೂ.23 ರಿಂದ 12 ದಿನಗಳ ಭಾರತ್ ದರ್ಶನ್ ಪ್ರವಾಸಿ ರೈಲಿನಲ್ಲಿ ‘ಮಾತಾ ವೈಷ್ಣೋದೇವಿ ದರ್ಶನ್ ಯಾತ್ರೆ’ ಸೇರಿದಂತೆ ಉತ್ತರ ಭಾರತ ಪ್ರವಾಸವನ್ನು ಹಮ್ಮಿಕೊಂಡಿದೆ.
ಬೆಂಗಳೂರಿನ ವೈಟ್‌ಫೀಲ್ಡ್ ರೈಲ್ವೆ ನಿಲ್ದಾಣದಿಂದ ಆರಂಭವಾಗುವ ಪ್ರವಾಸ ದೆಹಲಿ, ಅಮೃತ್‌ಸರ್, ವೈಷ್ಣೋದೇವಿ, ಹರಿದ್ವಾರ, ಮಥುರಾ ಮತ್ತು ಆಗ್ರಾ ನೋಡಿಕೊಂಡು ವಾಪಸು ವೈಟ್‌ಫೀಲ್ಡ್‌ಗೆ ಬರುವ ಪ್ರವಾಸ ಇದಾಗಿದೆ ಎಂದು ಐಆರ್‌ಸಿಟಿಸಿ ವಲಯ ವ್ಯವಸ್ಥಾಪಕ ಬಿ. ರಮೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರವಾಸಕ್ಕಾಗಿ ಮೀಸಲಿಟ್ಟಿರುವ ಪ್ರತ್ಯೇಕ ರೈಲಿನಲ್ಲಿ ಇದೇ ತಿಂಗಳ 23 ರಂದು ರಾತ್ರಿ 10ಕ್ಕೆ ಹೊರಟು ಜುಲೈ 4 ರಂದು ಮುಂಜಾನೆ ಬೆಂಗಳೂರು ತಲುಪುವ ಈ ಪ್ರವಾಸದ ಪ್ಯಾಕೇಜ್ ಒಬ್ಬರಿಗೆ 12,339 ರೂ. (ಐದು ವರ್ಷ ಮೇಲ್ಪಟ್ಟು) ಗಳಾಗಿವೆ.
ಅತಿ ಕಡಿಮೆ ಬೆಲೆಯಲ್ಲಿ ಐಆರ್‌ಸಿಟಿಸಿ ಆಯೋಜಿಸಿರುವ ಆಕರ್ಷಕ ಪ್ರವಾಸ ಇದಾಗಿದ್ದು, ಪ್ಯಾಕೇಜ್‌ನಡಿಯಲ್ಲಿ ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟದೊಂದಿಗೆ ವಸತಿ (ಡಾರ್ಮಿಟರಿ) ಸೌಲಭ್ಯ ಹಾಗೂ ಸೈಟ್ ಸೀಯಿಂಗ್ ಒಳಗೊಂಡಿರುತ್ತದೆ.
ಪ್ರತಿ ಬೋಗಿಗೂ ಒಬ್ಬ ಸೆಕ್ಯೂರಿಟಿ, ಹೌಸ್‌ಕೀಪಿಂಗ್ ಸಿಬ್ಬಂದಿ ಹಾಗೂ ಗೈಡ್ ಇರುತ್ತಾರೆ. ಕತ್ರಾದಿಂದ ವೈಷ್ಣೋದೇವಿ ದರ್ಶನಕ್ಕೆ ಕುದುರೆ, ಡೋಲಿ ಅಥವಾ ಹೆಲಿಕಾಪ್ಟರ್ ಮೂಲಕ ಹೋಗುವ ಯಾತ್ರಿಗಳು ಆ ಸೇವಾಶುಲ್ಕ ಭರಿಸಬೇಕಾಗುತ್ತದೆ. 700 ಮಂದಿ ಪ್ರಯಾಣಿಕರಿಗಾಗಿ 15 ಬೋಗಿಗಳುಳ್ಳ ರೈಲನ್ನು ಈ ಪ್ರವಾಸಕ್ಕಾಗಿ ಮೀಸಲಿಡಲಾಗಿದೆ.
ಇಷ್ಟೇ ಅಲ್ಲದೆ, ಬೆಂಗಳೂರಿನಿಂದ ಅಂತಾರಾಷ್ಟ್ರೀಯ ಟೂರ್ ಪ್ಯಾಕೇಜನ್ನು ಆರಂಭಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಗಸ್ಟ್ 2019ರಲ್ಲಿ ಚೀನಾ, ಶಾಂಗೈ ಮತ್ತು ಬೀಜಿಂಗ್‌ನತ್ತ ಹೊರಡುವ ಈ ಪ್ರವಾಸದಲ್ಲಿ ವಿಮಾನ ಪ್ರಯಾಣ ಟಿಕೆಟ್, ತ್ರಿ-ಸ್ಟಾರ್ ಹೋಟೆಲ್ ಸ್ಟೇ, ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ಸೇರಿದೆ.
87,700 ರೂ.ಗಳ ಪ್ಯಾಕೇಜ್ ಇದಾಗಿದ್ದು, ವಿಸಾ, ಸ್ಥಳೀಯ ಗೈಡ್, ಇನ್ಸೂರೆನ್ಸ್ ಮತ್ತು ಬುಲೆಟ್ ಟ್ರೈನ್ ವೆಚ್ಚ ಸೇರಿದೆ. ಇದೇ ರೀತಿ ಮತ್ತೂಂದು 14 ರಾತ್ರಿ, 15 ಹಗಲುಗಳ ಸ್ಕಾಂಡಿನೇವಿಯ (ಐಸ್‌ಲ್ಯಾಂಡ್) ಅಂತಾರಾಷ್ಟ್ರೀಯ ಪ್ರವಾಸವನ್ನು ಕೂಡ ಐಆರ್‌ಸಿಟಿಸಿ ಆಯೋಜಿಸಿದೆ.
3,48,000 ರೂ. ಪ್ಯಾಕೇಜ್‌ನ ಪ್ರವಾಸ ಇದಾಗಿದೆ. ಐಆರ್‌ಸಿಟಿಸಿ ಎಲ್ಲ ಮಾಹಿತಿಗಳಿಗೆ www.irctctourism.com ಅಥವಾ 080-22960014, 9741426474 ಸಂಪರ್ಕಿಸಬಹುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.