75 ವರ್ಷದ ಬಳಿಕ ಬಂತು ಚಿತಾಭಸ್ಮ
2ನೇ ಮಹಾಯುದ್ಧದಲ್ಲಿ ಹುತಾತ್ಮರಾಗಿದ್ದ ಪಾಲು ರಾಮ್, ಹರಿ ಸಿಂಗ್
Team Udayavani, Jun 5, 2019, 6:06 AM IST
ಹಿಸ್ಸಾರ್: ಎರಡನೇ ಮಹಾಯುದ್ಧದಲ್ಲಿ ಹುತಾತ್ಮರಾಗಿದ್ದ ಇಬ್ಬರು ಭಾರತೀಯ ಯೋಧರ ಚಿತಾಭಸ್ಮ ಬರೋಬ್ಬರಿ 75 ವರ್ಷಗಳ ಬಳಿಕ ಸ್ವಗ್ರಾಮಗಳನ್ನು ತಲುಪಿದೆ! ಅಚ್ಚರಿಯಾದರೂ ಇದು ಸತ್ಯ. ಯೋಧರ ಚಿತಾಭಸ್ಮವನ್ನು 75 ವರ್ಷಗಳ ನಂತರ ಇಟಲಿಯಿಂದ ಹರ್ಯಾಣದ ಹಿಸಾರ್ ಹಾಗೂ ಝಜ್ಜರ್ ಗ್ರಾಮಗಳಿಗೆ ಮಂಗಳವಾರ ತಂದು ಸಂಬಂಧಿಗಳಿಗೆ ಒಪ್ಪಿಸಲಾಯಿತು. 1939ರಿಂದ 1945ರವರೆಗೆ ನಡೆದಿದ್ದ 2ನೇ ಮಹಾ ಯುದ್ಧದಲ್ಲಿ ಈ ಯೋಧರು ಹುತಾತ್ಮರಾಗಿದ್ದರು.
ಭಾರತೀಯ ಸೇನೆಯ ನಿವೃತ್ತ ಅಧಿಕಾರಿಯಾದ ಕ್ಯಾ. ಪ್ರದೀಪ್ ಬಾಲಿ ಎಂಬುವರ ಹೇಳಿಕೆ ಪ್ರಕಾರ, ಯುದ್ಧದಲ್ಲಿ ಬ್ರಿಟನ್ ಪರವಾಗಿ ಕಾದಾಡಲು ಭಾರತದಿಂದ ಬ್ರಿಟನ್ಗೆ ತೆರಳಿದ್ದ ಭಾರತೀಯ ಸೈನಿಕರ 4ನೇ ಬೆಟಾಲಿಯನ್ನಲ್ಲಿದ್ದ 19 ವರ್ಷದ ಪಾಲು ರಾಮ್ ಹಾಗೂ 18 ವರ್ಷದ ಹರಿ ಸಿಂಗ್, ಜರ್ಮನಿ ವಿರುದ್ಧ ಯುದ್ಧ ಮಾಡುವಾಗ ಸಾವನ್ನಪ್ಪಿದ್ದರು.
ಯುದ್ಧ ಮುಗಿದು ದಶಕಗಳೇ ಉರುಳಿದ್ದರೂ ಈಗಲೂ ಐರೋಪ್ಯ ರಾಷ್ಟ್ರಗಳಲ್ಲಿ ಯುದ್ಧದ ಅವಶೇಷಗಳು ಸಿಗುತ್ತಿವೆ. ಅದರಂತೆ, ಪಾಲು ಮತ್ತು ಹರಿಯವರ ಮೃತದೇಹದ ಅವಶೇಷಗಳು, 1960ರ ದಶಕದಲ್ಲೇ ಸಿಕ್ಕಿದ್ದವು. ಆದರೆ, ಆಗ ಅವುಗಳ ಗುರುತು ಪತ್ತೆಯಾಗಿರಲಿಲ್ಲ. ಅವಶೇಷಗಳು ಯಾರವೆಂದು ಪತ್ತೆ ಮಾಡಲು ದಶಕಗಳೇ ಉರುಳಿದವು.
ಆರು ವರ್ಷಗಳ ಹಿಂದೆ, ಪಾಲು ರಾಮ್ ಹಾಗೂ ಹರಿ ಸಿಂಗ್ ಅವರ ಮೂಲ, ಡಿಎನ್ಎ ಪರೀಕ್ಷೆಯಿಂದ ದೃಢಪಟ್ಟಿತ್ತು. ಅವರು ಯುರೋಪಿಯನ್ ಯೋಧರಲ್ಲ ಎಂಬುದು ಸ್ಪಷ್ಟವಾದೊಡನೆ, ಭಾರತೀಯ ಸೇನೆಯ ನೆರವು ಪಡೆದು ಯೋಧರ ಕುಟುಂಬಗಳನ್ನು ಪತ್ತೆ ಹಚ್ಚಲಾಯಿತು.
ಯೋಧರಿಬ್ಬರ ಚಿತಾಭಸ್ಮ ಸ್ವಗ್ರಾಮಗಳಿಗೆ ಆಗಮಿಸಿದೊಡನೆ, ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಲ್ಲಿ ಸೇರಿದ್ದ ನೂರಾರು ಮಂದಿ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿ ಹುತಾತ್ಮರಿಗೆ ನಮನ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.