ಜೂ. 6: ನೆರೂಲ್ ಶನೀಶ್ವರ ಮಂದಿರದಲ್ಲಿ ಶ್ರೀರಾಮ ದರ್ಶನ ಯಕ್ಷಗಾನ
Shri Rama Darshana Yakshagana at Nerul Shaneeswara Mandir
Team Udayavani, Jun 5, 2019, 5:04 PM IST
ಮುಂಬಯಿ: ನೆರೂಲ್ ಶ್ರೀ ಶನೀಶ್ವರ ಮಂದಿರದ ವಿಶ್ವಸ್ತ ಮಂಡಳಿ ಹಾಗೂ ಕಲಾಭಿಮಾನಿಗಳ ಸಹಯೋಗದೊಂದಿಗೆ ಉಡುಪಿ ಚೇರ್ಕಾಡಿ ಕಲಾಶ್ರೀ ಬಾಲಕಿಯರ ಯಕ್ಷಗಾನ ಮೇಳದವರಿಂದ ಶ್ರೀರಾಮ ದರ್ಶನ ಯಕ್ಷಗಾನ ಪ್ರದರ್ಶನವು ಜೂ. 6 ರಂದು ಸಂಜೆ 5.30ಕ್ಕೆ ನೆರೂಲ್ ಶ್ರೀ ಶನೀಶ್ವರ ಮಂದಿರದ ವಠಾರದಲ್ಲಿ ಜರಗಲಿದೆ.
ಮಂಜುನಾಥ ಪ್ರಭು ಚೇರ್ಕಾಡಿ ಅವರ ನಿರ್ದೇಶನದಲ್ಲಿ ನಡೆಯ
ಲಿರುವ ಈ ಯಕ್ಷಗಾನ ಪ್ರಸಂಗದಲ್ಲಿ ಭಾಗವತರಾಗಿ ಶಶಿಕಲಾ ಪ್ರಭು ಚೇರ್ಕಾಡಿ, ಮದ್ದಳೆಯಲ್ಲಿ ಮಂಜು ನಾಥ ಪ್ರಭು ಚೇರ್ಕಾಡಿ, ಚೆಂಡೆವಾದಕರಾಗಿ ಬಸವ ಮರಕಾಲ ಮುಂಡಾಡಿ ಇವರು ಸಹಕರಿಸಲಿದ್ದಾರೆ. ಕಲಾವಿದರಾಗಿ ಕು| ವೈಷ್ಣವಿ,
ಕು| ನಿಮಿಷಾ, ಕು| ಶ್ರೀನಿಧಿ, ಕು| ವೃಂದಾ, ಕು| ಕೃತಿ, ಕು| ಸ್ಮಿತಾ, ಕು| ಪ್ರಣಮ್ಯ ಭಾಗವಹಿಸಲಿದ್ದಾರೆ.
ಡಾ| ಕೆ. ಶಿವರಾಮ ಕಾರಂತರಿಂದ 1992ರಲ್ಲಿ ಸ್ಥಾಪನೆಗೊಂಡ ಈ ಯಕ್ಷಗಾನ ಮೇಳವು ನಡುಬಡಗಿನ ಶುದ್ಧ ಸಾಂಪ್ರದಾಯಿಕ ಯಕ್ಷಗಾನ ಮೇಳವಾಗಿದೆ. ಹಾರಾಡಿ ಹಾಗೂ ಮಟ್ಟಾಡಿ ತಿಟ್ಟಿನ ಶೈಲಿಯನ್ನು ಉಳಿಸಿ ಕೊಂಡು ಇದುವರೆಗೆ ದೇಶದಾದ್ಯಂತ 2000ಕ್ಕೂ ಅಧಿಕ ಪ್ರದರ್ಶನ ನೀಡಿದ ಹೆಗ್ಗಳಿಕೆ ಈ ಮೇಳಕ್ಕಿದೆ.
ಉಚಿತ ಪ್ರವೇಶವಿರುವ ಈ ಕಾರ್ಯಕ್ರಮ ದಲ್ಲಿ ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸು ವಂತೆ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.