ಜೈ ಶ್ರೀರಾಮ್ ಗೆ ಕುಗ್ಗಿದ ಟಿಆರ್ಪಿ, ಬಿಜೆಪಿಯಿಂದ ಈಗ ಜೈ ಮಾ ಕಾಳಿ: ಟಿಎಂಸಿ ಸಂಸದ
Team Udayavani, Jun 5, 2019, 5:27 PM IST
ಕೋಲ್ಕತ : ಜೈ ಮಾ ಕಾಳೀ ಘೋಷಣೆಯನ್ನು ಪರಿಚಯಿಸುವ ಬಿಜೆಪಿಯ ನಿರ್ಧಾರವನ್ನು ಟಿಎಂಸಿ ಸಂಸದ ಹಾಗೂ ಮಮತಾ ಬ್ಯಾನರ್ಜಿ ಅವರ ಸೋದರ ಸಂಬಂಧಿಯಾಗಿರುವ ಅಭಿಷೇಕ್ ಬ್ಯಾನರ್ಜಿ ಅವರು ಲೇವಡಿ ಮಾಡಿದ್ದಾರೆ.
ಜೈ ಶ್ರೀರಾಮ್ ಘೋಷಣೆ ಟೆಲಿವಿಷನ್ ರೇಟಿಂಗ್ ಪಾಯಿಂಟ್ – ಟಿಆರ್ಪಿ ಯಲ್ಲಿ ಕುಸಿಯುತ್ತಿದ್ದು ಜೈ ಮಾ ಕಾಳೀ ಘೋಷಣೆಯ ಟಿಆರ್ಪಿ ಹೆಚ್ಚುತ್ತಿರುವುದು ಇದಕ್ಕೆ ಕಾರಣ ಎಂದು ಅಭಿಷೇಕ್ ಬ್ಯಾನರ್ಜಿ ವ್ಯಂಗ್ಯವಾಡಿದ್ದಾರೆ.
ಬಿಜೆಪಿಯವರ ಘೋಷಣೆ ಜೈ ಶ್ರೀರಾಮ್ ಆದಲ್ಲಿ ನಮ್ಮ ಘೋಷಣೆ ಜೈ ಹಿಂದ್ ಆಗಿರುತ್ತದೆ ಎಂದವರು ಹೇಳಿದರು.
ನಾನು ದೇವರಲ್ಲಿ ಪ್ರಾರ್ಥಿಸುವಾಗ ಜೈ ಶ್ರೀರಾಮ್ ಎನ್ನುತ್ತೇನೆ. ಆದರೆ ರಾಜಕೀಯ ಅಂಗಣದಲ್ಲಿ ನಾನು ಜೈ ಹಿಂದ್ ಎನ್ನುತ್ತೇನೆ ಎಂದಿರುವ ಅಭಿಷೇಕ್ ಬ್ಯಾನರ್ಜಿ, ದೇಶದಲ್ಲಿ ನಿರುದ್ಯೋಗ ಮತ್ತು ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರ ಜೈ ಶ್ರೀರಾಮ್ ಆಗಿತ್ತು ಎಂದು ಅಭಿಷೇಕ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.