ಸದನದಲ್ಲಿ ಕದನ ಕೋಲಾಹಲ, ರಾಹುಲ್ ದೀಕ್ಷಾಬೋಧೆ!


ಅರಕೆರೆ ಜಯರಾಮ್‌, Jun 6, 2019, 6:05 AM IST

modi

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೊರೆತ ದಯನೀಯ ಸೋಲಿನಿಂದ ಕಾಂಗ್ರೆಸ್‌ ಪಕ್ಷ, ಅದರಲ್ಲೂ ಮುಖ್ಯವಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಯಾವುದೇ ಪಾಠ ಕಲಿತಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಜನರು ಇನ್ನೂ ತಮ್ಮ ಕಡೆಯಲ್ಲೇ ಇದ್ದಾರೆ; ತಾವು ಇನ್ನೂ ಜನಪ್ರಿಯ ನಾಯಕರೇ ಎಂದು ಯೋಚಿಸುವುದನ್ನು ಅವರು ಇನ್ನೂ ಮುಂದುವರಿ ಸಿರುವಂತೆ ಕಂಡು ಬರುತ್ತಿದೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ ರಾಗಿರುವ ರಾಹುಲ್ ಗಾಂಧಿ ತಮ್ಮ ಪಕ್ಷದ ಸಂಸತ್ಸದಸ್ಯರಿಗೆ ನೀಡಿರುವ ಕರೆ ನಿಜಕ್ಕೂ ಆಘಾತಕಾರಿಯಾಗಿದೆ. ಕಾಂಗ್ರೆಸ್‌ ಸಂಸದೀಯ ಪಕ್ಷದ ಪ್ರಥಮ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ರಾಹುಲ್ ಅವರು ಸಂಸತ್ತಿನಲ್ಲಿ ಕಾಂಗ್ರೆಸ್‌ ಸದಸ್ಯರು ಇನ್ನಷ್ಟು ಜೋರಾಗಿ ಬೊಬ್ಬೆ ಹೊಡೆಯಬೇಕು; ಅವರು ಇನ್ನಷ್ಟು ಆಕ್ರಮಣಕಾರಿ ಆಗಬೇಕು ಎಂಬ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ. ‘ನೀವು ಈ ಅವಕಾಶವನ್ನು (ಸಂತೋಷದಿಂದ) ಅನು ಭವಿಸಿ. ಎಂದಿಗಿಂತ ಸ್ವಲ್ಪ ಹೆಚ್ಚಾಗಿಯೇ ಕೂಗಾಡಿ. ಇನ್ನೂ ಹೆಚ್ಚು ಆಕ್ರಮಣಕಾರಿಗಳಾಗಿ’ ಎಂದವರು ಅಪ್ಪಣೆ ಕೊಡಿಸಿದ್ದಾರೆ.

ರಾಹುಲ್ ಅವರ ಈ ಮಾತುಗಳನ್ನು, ಸಂಸದೀಯ ಕಲಾಪಗಳನ್ನು ಅಸ್ತವ್ಯಸ್ತಗೊಳಿಸಲು ಹಾಗೂ ಕಲಾಪ ನಡೆಸುವುದಕ್ಕೆ ಸರಕಾರಕ್ಕೆ ಕಷ್ಟಕರವೆನಿಸುವಂತೆ ಮಾಡಲು ನೀಡಲಾಗಿರುವ ಕರೆ ಎಂದೂ ವ್ಯಾಖ್ಯಾನಿಸಬಹುದಾಗಿದೆ. ವಿಪಕ್ಷೀಯರ ಇಂಥ ನಡವಳಿಕೆ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಲ್ಲಿ ಪ್ರತೀಕಾರ ಭಾವನೆ ಮೂಡಿಸಲಿದೆ; ಸದನದಲ್ಲಿ ಅವರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅಲ್ಪಸಂಖ್ಯಾತರಾಗಿರುವ ಕಾಂಗ್ರೆಸ್‌ ಸದಸ್ಯರ ಮೇಲೆ ಇನ್ನಷ್ಟು ಕೂಗಾಡಿ ಅವರ ಬಾಯಿ ಮುಚ್ಚಿಸಲಿದ್ದಾರೆ. 17ನೆಯ ಲೋಕಸಭೆಗೆ ಆಯ್ಕೆಯಾಗಿ ಬರಲಿರುವ ಸ್ಪೀಕರ್‌ ಅವರು ಕಲಾಪವನ್ನು ಅಡ್ಡಿಪಡಿಸುವ ವಿಪಕ್ಷೀಯರ ಇಂಥ ಉದ್ದೇಶಕ್ಕೆ ಅವಕಾಶ ನೀಡದೇ, ಅವರನ್ನು ಸದನದಿಂದ ಹೊರಗಟ್ಟಬೇಕು. ಸಂಸತ್ತನ್ನು ಪ್ರತಿಭಟನೆಗಳ ವೇದಿಕೆಯಾಗಿಸುವ ಮೂಲಕ ಅದರ ಘನತೆಯನ್ನು ತಗ್ಗಿಸುವುದಕ್ಕೆ ಯಾವ ತೆರನ ಅವಕಾಶವನ್ನೂ ನೀಡಕೂಡದು.

ಕೇರಳದ ವಯನಾಡಿನ ಲೋಕಸಭಾ ಸದಸ್ಯ ಪ್ರಜಾಪ್ರಭುತ್ವದಲ್ಲಿ ಸಂಸತ್ತಿನ ಪಾತ್ರವೇನೆಂಬುದರ ಬಗ್ಗೆ ವಿಚಿತ್ರ ಕಲ್ಪನೆಗಳನ್ನು ಇರಿಸಿಕೊಂಡಿರುವಂತೆ ತೋರಿ ಬರುತ್ತಿದೆ. ಲೋಕಸಭೆಯೆಂದರೆ ತೋಳ್ಬಲ ಪ್ರದರ್ಶನದ ಕಣ ಎಂದು ಅವರು ತಿಳಿದುಕೊಂಡಿರುವಂತೆ ಕಾಣುತ್ತಿದೆ. ಸಂಸತ್ತು ರೌಡಿಸಂನ ಪ್ರದರ್ಶನಕ್ಕಾಗಿ ಇರುವ ವೇದಿಕೆ ಅಲ್ಲ. ಭಾರತೀಯ ಹಾಗೂ ಬ್ರಿಟಿಷ್‌ ಸಂಸತ್ತುಗಳಿಗೆ ಹಾಗೂ ಉಭಯ ರಾಷ್ಟ್ರಗಳ ಸಂವಿಧಾನಗಳಿಗೆ ಸಂಬಂಧಿಸಿದ ಅಧಿಕೃತ ಗ್ರಂಥಗಳನ್ನು ಓದಿ ನೋಡುವಂತೆ ಯಾರಾದರೂ ರಾಹುಲ್ ಗಾಂಧಿಗೆ ಸಲಹೆ ನೀಡಬೇಕಾಗಿದೆ. ವಾಲ್ಟರ್‌ ಬೇಗ್‌ಹಾಟ್ ಅವರು ಬ್ರಿಟಿಷ್‌ ಸಂವಿಧಾನ ಕುರಿತು ಬರೆದಿರುವ ಗ್ರಂಥ ಇಂಥ ಅಧ್ಯಯನಾರ್ಹ ಕೃತಿಗಳಲ್ಲಿ ಒಂದು. ಸೋನಿಯಾ ಗಾಂಧಿಯಾಗಲಿ, ಆಕೆಯ ಪುತ್ರ ರಾಹುಲ್ ಗಾಂಧಿಯಾಗಲಿ ಜವಾಹರಲಾಲ್ ನೆಹರೂರವರಂತೆ ಬುದ್ಧಿಜೀವಿಗಳಲ್ಲ. ನೆಹರೂ ಅವರು ವಿದ್ವತ್ಪೂರ್ಣ ಗ್ರಂಥಗಳ ಕರ್ತೃ, ಜತೆಗೆ ಓರ್ವ ಮಾದರಿ ಸಂಸದೀಯ ಪಟುವಾಗಿದ್ದವರು. ಸಂಸತ್ತಿನ ಎರಡೂ ಸದನಗಳು ಅತ್ಯಂತ ಪವಿತ್ರವಾದವು; ಘನತೆ ಗೌರವಗಳನ್ನು ಹೊಂದಿರುವ ವೇದಿಕೆಗಳು; ರಾಷ್ಟ್ರೀಯ ವ್ಯವಹಾರಗಳ ಬಗ್ಗೆ ಚರ್ಚೆ – ಸಂವಾದಗಳನ್ನು ನಡೆಸಲು ಅವಕಾÍ ‌ವಿರುವ ಗೌರವಾನ್ವಿತ ಚಿಂತನ ಚಾವಡಿಗಳು, 17ನೆಯ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವಲ್ಲದಿದ್ದರೂ ಪ್ರಮುಖ ವಿರೋಧ ಪಕ್ಷವಾಗಿ ಭಾಗಿಯಾಗಬೇಕಿರುವ ಕಾಂಗ್ರೆಸ್‌ ನಮ್ಮ ಸಂಸತ್ತಿನ ಮರ್ಯಾದೆಯನ್ನು ಎತ್ತಿ ಹಿಡಿಯಬೇಕಾದ ಪಕ್ಷ.

ಸದನದಲ್ಲಿ ಬೊಬ್ಬಿಡಿರಿ ಎಂಬ ಸಲಹೆಯನ್ನು ಮಗ ರಾಹುಲ್ ನೀಡುತ್ತಿದ್ದಾಗ ತಾಯಿ ಸೋನಿಯಾ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಲಿಲ್ಲವೆನ್ನುವುದು ಅಚ್ಚರಿ ಹಾಗೂ ವಿಚಿತ್ರ ಸಂಗತಿಯೇ ಹೌದು. ಆಕೆ ಕೂಡ ಸಂಸತ್ತಿನ ಕಲಾಪಗಳನ್ನು ಅಡ್ಡಿಪಡಿಸುವ ಗದ್ದಲ ರಾಜಕೀಯದಲ್ಲಿ ನಂಬಿಕೆಯಿರಿಸಿಕೊಂಡಿರುವವರೇ. ಈ ಹಿಂದೆ ಕೂಡ ತನ್ನ ಪಕ್ಷದ ಸದಸ್ಯರನ್ನು ಆಕ್ರಮಣಕಾ ರಿಯಾಗಿ ನಡೆದುಕೊಳ್ಳುವಂತೆ ಹುರಿದುಂಬಿಸಿದವರೇ. ನರೇಂದ್ರ ಮೋದಿ ಅವರು ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆಯಾಗಿ ಬಂದಿರುವ ಈ ದೇಶದ ಪ್ರಧಾನ ಮಂತ್ರಿಯೆಂಬ ವಾಸ್ತವವನ್ನು, ಬಿಜೆಪಿ ಮುಂದಿನ ಐದು ವರ್ಷಗಳ ಕಾಲ ದೇಶವನ್ನು ಆಳಲು ಬೇಕಾದ ಜನಾದೇಶ ಪಡೆದುಕೊಂಡಿದೆ ಎಂಬ ಸತ್ಯವನ್ನು ಈ ಗಾಂಧಿಗಳು ಅರ್ಥ ಮಾಡಿಕೊಳ್ಳಬೇಕಿದೆ. ಈ ವಾಸ್ತವವನ್ನು ಒಪ್ಪಿಕೊಳ್ಳಬೇಕಿದೆ. ಜನರು ಕಾಂಗ್ರೆಸನ್ನು ಎರಡನೇ ಬಾರಿಗೆ ತಿರಸ್ಕರಿಸಿದ್ದಾರೆ; ಕನಿಷ್ಠ ಅಧಿಕೃತ ವಿರೋಧ ಪಕ್ಷವಾಗಿರಲು ಕೂಡ ಅಸಮ್ಮತಿ ತೋರಿಸಿದ್ದಾರೆ.

ಈಗ ಮಲ್ಲಿಕಾರ್ಜುನ ಖರ್ಗೆ ಹಾಗೂ ವೀರಪ್ಪ ಮೊಯ್ಲಿಯವರಂಥ ಅನುಭವೀ ರಾಜಕಾರಣಿಗಳನ್ನು ಲೋಕಸಭೆಯಿಂದ ಹೊರಗಿಡಲಾಗಿರುವುದರಿಂದ, ಕಾಂಗ್ರೆಸ್‌ನ ಪ್ರಥಮ ಕುಟುಂಬವೇ ಕಾಂಗ್ರೆಸ್‌ ಸಂಸದೀಯ ಪಕ್ಷ (ಸಿಎಲ್ಪಿ)ದ ನಾಯಕತ್ವವನ್ನು ತನ್ನಲ್ಲಿ ಉಳಿಸಿಕೊಳ್ಳಲಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳ ಬೇಕಾದ ಅಗತ್ಯವಿಲ್ಲ. ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಇನ್ನೊಂದು ಆಯ್ಕೆ ಶಶಿ ತರೂರ್‌ ಎಂಬುದೇನೋ ನಿಜವೇ. ಆದರೆ ರಾಹುಲ್ ತಮ್ಮ ಮನಸ್ಸಿನಲ್ಲಿ ಇರಿಸಿಕೊಂಡಿರುವ ಮಾನದಂಡಕ್ಕೆ ಸರಿಹೊಂದಲಾರದಷ್ಟು ನಾಜೂಕಿನ ವ್ಯಕ್ತಿತ್ವ ಶಶಿ ತರೂರ್‌ ಅವರದು. ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಸ್ಥಾನಕ್ಕೆ ಶಶಿ ತರೂರ್‌ ಆಯ್ಕೆಯಾಗಲೆಂದು ಕಾಂಗ್ರೆಸ್‌ ಮನಮೋಹನ್‌ ಸಿಂಗ್‌, ತರೂರ್‌ ಪರ ಪ್ರಚಾರವನ್ನೇನೋ ಮಾಡಿಸಿತ್ತು; ಆದರೆ ಆ ಯತ್ನ ನಿಷ್ಫಲವಾದದ್ದು ಗೊತ್ತೇ ಇದೆ.

ಕಾಂಗ್ರೆಸ್‌ ಸಂಸದೀಯ ಪಕ್ಷವನ್ನು ‘ಬೊಬ್ಬಿರಿಯುವ ಸೇನಾದಳ’ವನ್ನಾಗಿ ಪರಿವರ್ತಿಸಬೇಕೆಂಬುದು ರಾಹುಲ್ ಗಾಂಧಿಯವರ ಬಯಕೆ. ಕರ್ನಾಟಕದ ವಿಧಾನ ಸಭೆ ಹಾಗೂ ವಿಧಾನ ಪರಿಷತ್‌ಗಳಲ್ಲೂ 1980ರ ದಶಕದಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗುವ ಮುನ್ನ ಹಾಗೂ ಆಮೇಲೆ ಕೂಡ ಇಂಥ ಕೂಗಾಟದ ಬಣಗಳು ಇದ್ದವು. ಸಾರ್ವಜನಿಕ ಕಲಾಪಗಳ ಹಾಗೂ ಸಂಸದೀಯ ಘನತೆ ಗೌರವಗಳ ಬಗ್ಗೆ ತಿಳಿವಳಿಕೆಯಿಲ್ಲದಿದ್ದ ಕೆಲ ಕಾಂಗ್ರೆಸ್‌ ಎಂ.ಎಲ್.ಎ.ಗಳು ವಿಪಕ್ಷೀಯ ಸದಸ್ಯರ ಹೇಳಿಕೆ/ಭಾಷಣಗಳಿಗೆ ಅಡ್ಡಿಪಡಿಸುತ್ತಿದ್ದರು. ಇವರಲ್ಲಿ ಕೆಲವರಿಗೆ ಮಂತ್ರಿಗಿರಿಯ ಉಡುಗೊರೆ ದೊರೆಯಿತು. ರಾಜ್ಯದ ಕೆಲ ಕಾಂಗ್ರೆಸ್‌ ನಾಯಕರು ಉಭಯ ಸದನಗಳಲ್ಲೂ ಕಲಾಪಕ್ಕೆ ಅಡ್ಡಿಪಡಿಸುವಂತೆ ತಮ್ಮ ಪಕ್ಷದ ಸದಸ್ಯರನ್ನು ಹುರಿದುಂಬಿಸುತ್ತಿದ್ದರು.

ಹಾಗೆ ನೋಡಿದರೆ ನೆಹರೂ ಪ್ರಧಾನಿಯಾಗಿದ್ದಾಗ ಸಂಸತ್ತಿನಲ್ಲೂ ಇಂಥ ಕೆಲ ವಿಪಕ್ಷೀಯ ಸದಸ್ಯರಿದ್ದರು. ಅಲ್ಪಸ್ವಲ್ಪ ಸದಸ್ಯ ಬಲವಿದ್ದ ಸೋಶಿಯಲಿಸ್ಟ್‌ ಪಾರ್ಟಿಯಲ್ಲೂ ಭಾರೀ ‘ಗಂಟಲು ಬಲ’ದ ಸದಸ್ಯರಿದ್ದರು. ಇವರಲ್ಲಿ ರಾಜನಾರಾಯಣ್‌, ರಾಮ್‌ಸೇವಕ್‌ ಯಾದವ್‌, ಮಣಿರಾಂ ಭಾಗ್ರಿ ಪ್ರಮುಖರಾಗಿದ್ದರು. ಇದಕ್ಕೆ ವ್ಯತಿರಿಕ್ತವಾಗಿ, ಆ ಪಕ್ಷದ ನಾಯಕರಾಗಿದ್ದ ರಾಮ ಮನೋಹರ ಲೋಹಿಯಾ ಅವರು ಸರಕಾರದ ವಿರುದ್ಧ ವ್ಯಕ್ತಪಡಿಸುತ್ತಿದ್ದ ವಿರೋಧ ಸೈದ್ಧಾಂತಿಕ ಹಾಗೂ ಶಿಸ್ತುಬದ್ಧವಾಗಿತ್ತು.

ಕಾಂಗ್ರೆಸ್‌ ಹಾಗೂ ಇತರ ವಿರೋಧ ಪಕ್ಷಗಳು ನೇತ್ಯಾತ್ಮಕ ರಾಜಕಾರಣವನ್ನು ಕೈಬಿಡಬೇಕಿದೆ. ಇದೇ ಅಂಕಣದಲ್ಲಿ ಈ ಹಿಂದೆ ಸಾಕಷ್ಟು ಬಾರಿ ಹೇಳಲಾಗಿ ರುವಂತೆ ನಮ್ಮ ಸಂಸತ್ತು ಹಾಗೂ ರಾಜ್ಯ ವಿಧಾನಮಂಡಲಗಳಲ್ಲಿನ ಒಂದು ಸಮಸ್ಯೆಯೆಂದರೆ, ಉತ್ತಮ ಸಂಸದೀಯ ಪಟುಗಳ ಸಂಖ್ಯೆ ಸಣ್ಣದು; ರಾಜಕೀಯ ಪಟುಗಳ ಸಂಖ್ಯೆ ವಿಪರೀತ ಎನ್ನಿಸುವಷ್ಟು ದೊಡ್ಡದು. ವಿಶೇಷವಾಗಿ, ನಮ್ಮ ರಾಜ್ಯ ವಿಧಾನ ಮಂಡಲಗಳು ಕೇವಲ ಕೆಲವೇ ದಿನಗಳ ಕಾಲ ಬೈಠಕ್‌ ನಡೆಸುವುದರಿಂದಾಗಿ, ಸದಸ್ಯರುಗಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಾಗೂ ಜನತೆಯ ಪರವಾಗಿ ವಿಷಯಗಳನ್ನು ಮಂಡಿಸಲು ಅವಕಾಶ ಸಿಗುವುದೇ ಅಪರೂಪ. ಈಗ ರಾಹುಲ್ ಗಾಂಧಿಯವರ ಮನೋಭಾವ ಆಕ್ರಮಣಕಾರಿ ಉದ್ದೇಶದಿಂದ ಕೂಡಿರು ವುದರಿಂದ ಸಂಸತ್ತಿನೊಳಗೆ ಅವರ ಪಕ್ಷದಿಂದ ರಚನಾತ್ಮಕ ಧೋರಣೆಯ ‘ವಿರೋಧ’ವನ್ನು ಯಾರೂ ನಿರೀಕ್ಷಿಸುವ ಹಾಗಿಲ್ಲ. ತಾಂತ್ರಿಕವಾಗಿ ರಾಹುಲ್ ಓರ್ವ ಕಾಂಗ್ರೆಸ್‌ ಸಂಸದರಾಗಿದ್ದರೂ, ತಾನು ವಯನಾಡಿನಿಂದ ಮುಸ್ಲಿಂ ಲೀಗ್‌ನಂಥ ಪಕ್ಷಗಳಿರುವ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್)ದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಎಂಬ ಅರಿವು ಅವರಿಗಿರುವಂತಿದೆ.

ಕೇರಳದ ಯುಡಿಎಫ್ ಒಂದು ಶಿಸ್ತುಬದ್ಧ ಒಕ್ಕೂಟ; ಚುನಾವಣೆ ಯಿಂದ ಚುನಾವಣೆಗೆ ಅದು ತನ್ನ ಏಕತೆಯನ್ನು ಸಾಬೀತುಪಡಿಸುತ್ತಲೇ ಬಂದಿದೆ. ಅಲ್ಲಿನ ವಾಮ ಪ್ರಜಾಸತ್ತಾತ್ಮಕ ರಂಗ (ಎಲ್ಡಿಎಫ್) ಕೂಡ ಹೀಗೆಯೇ. ಮೈತ್ರಿಕೂಟ ರಾಜಕಾರಣ ಹಾಗೂ ಮೈತ್ರಿಕೂಟ ಸರಕಾರಗಳಿಗೆ ಕೇರಳ ಒಂದು ಮಾದರಿ. ರಾಹುಲ್ ಗಾಂಧಿ ಅಮೇಠಿಯಲ್ಲಿ ಸೋತಿರುವುದರಿಂದ ಈಗ ಕೇರಳವನ್ನು ಪ್ರತಿನಿಧಿಸುವುದನ್ನು ಹಾಗೂ ಓರ್ವ ಶಿಸ್ತು ಬದ್ಧ ಯುಡಿಎಫ್ ಸದಸ್ಯನಾಗಿರುವುದನ್ನು ಬಿಟ್ಟರೆ ಅನ್ಯ ಮಾರ್ಗ ಅವರಿಗಿಲ್ಲವಾಗಿದೆ. ಅಮೇಠಿಯಲ್ಲಿ ಅವರಿಗೆ ಉಂಟಾಗಿರುವ ಸೋಲು, ಇಂದಿರಾಗಾಂಧಿ ಕುಟುಂಬದ ಪಾಲಿಗೆ ದೊಡ್ಡ ತಪರಾಕಿ.

ಹೆಚ್ಚು ಕಡಿಮೆ 1977ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಇಂದಿರಾ ಗಾಂಧಿ ಹಾಗೂ ಸಂಜಯ್‌ ಗಾಂಧಿಗೆ ಉಂಟಾದ ಸೋಲಿನಂತೆಯೇ. ಆ ಚುನಾವಣೆಯಲ್ಲಿ ಹೆಚ್ಚು ಪರಿಚಿತರಲ್ಲದಿದ್ದ ಜನತಾಪಾರ್ಟಿ ಅಭ್ಯರ್ಥಿ ರವೀಂದ್ರ ಪ್ರತಾಪ್‌ ಸಿಂಗ್‌, ಸಂಜಯ್‌ ಗಾಂಧಿಯನ್ನು ಸೋಲಿಸಿದ್ದರು. ರಾಯ್‌ಬರೇಲಿಯಲ್ಲಿ ರಾಜ್‌ನಾರಾಯಣ್‌ ಇಂದಿರಾ ಅವರನ್ನು ಸೋಲಿಸಿ ಕೇಂದ್ರದಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಾದರು.

ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ವಿರೋಧಪಕ್ಷಗಳು ಸಾರಾಸಗಟಾಗಿ ಗಾಯಗೊಂಡಿವೆ. ಕೂಗಾಟ- ಕಿರುಚಾಟದ ಮಟ್ಟಿಗೆ ತೃಣಮೂಲ ಕಾಂಗ್ರೆಸ್‌ ಸಂಸದರು ಕಾಂಗ್ರೆಸ್‌ ಎಂ.ಪಿ.ಗಳ ಬಾಯ್‌ಬಲವನ್ನು ಬಗ್ಗು ಬಡಿಯಲಿದ್ದಾರೆ! ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ತೋರಿಸಿರುವ ನಿರ್ವಹಣೆಯನ್ನು ಕಂಡು ಉನ್ಮಾದ ಬಂದವರಂತೆ ವರ್ತಿಸುತ್ತಿದ್ದಾರೆ. ಹೊಸ ಲೋಕಸಭೆಯಲ್ಲಿ ಗೌರವಯುತ ಉಪಸ್ಥಿತಿಯ ಅವಕಾಶವನ್ನು ಸಂಪಾದಿಸಿಕೊಂಡಿರುವ ಡಿಎಂಕೆ ಸದಸ್ಯರಿಗೆ ಆಕ್ರಮಣ ನಡೆಸಲು ತಕ್ಕ ಶಸ್ತ್ರಾಸ್ತ್ರ ಸಿಕ್ಕಿಯಾಗಿದೆ. ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸುವ ಉದ್ದೇಶದ ಕೇಂದ್ರ ಸರಕಾರದ ಹೊಸ ಶೈಕ್ಷಣಿಕ ನೀತಿಯ ಅಂಗೀಕಾರ ಪ್ರಯತ್ನವನ್ನು ವಿಫ‌ಲಗೊಳಿಸಲು ಅವರು ನಿಶ್ಚಿತವಾಗಿಯೂ ಮುಂದಾಗಲಿದ್ದಾರೆ. ಹಾಗೆ ನೋಡಿದರೆ ಸೂತ್ರದಲ್ಲಿ ಹೊಸದೇನಿಲ್ಲ. 1967ರ ಆಸುಪಾಸಿನಲ್ಲಿ ತ್ರಿಗುಣ ಸೇನ್‌ ಅವರು ಶಿಕ್ಷಣ ಸಚಿವರಾಗಿದ್ದಾಗ ಇದನ್ನು ಜಾರಿಗೊಳಿಸಲಾಗಿತ್ತು.

ತಮಿಳುನಾಡು ಇದನ್ನು ಜಾರಿಗೊಳಿಸಲು ಒಪ್ಪಲಿಲ್ಲ; ಉತ್ತರದ ರಾಜ್ಯಗಳು ದಾಕ್ಷಿಣಾತ್ಯ ಭಾಷೆಗಳಲ್ಲೊಂದನ್ನು ಶಾಲಾ ಮಕ್ಕಳಿಗೆ ಕಲಿಸುವಲ್ಲಿ ವಿಫ‌ಲವಾದವು. ಹಿಂದಿ ವಿರೋಧಿ ಕೂಗು, ಡಿಎಂಕೆಯ ಜೀವರೇಖೆಯೇ ಆಗಿದೆ; ಅದಿಲ್ಲದೆ ಡಿಎಂಕೆ ಬದುಕಿರಲಾರದು! ಆದರೆ ಅದರ ಈ ನಿಲುವು ಕೇಂದ್ರದಲ್ಲಿನ ಸಮ್ಮಿಶ್ರ ಸರಕಾರಗಳೊಂದಿಗೆ ಅಧಿಕಾರ ಹಂಚಿಕೊಳ್ಳಲು ಅಡ್ಡಿಯಾಗಿ ಪರಿಣಮಿಸಿಲ್ಲ. ಹಾಗೆಯೇ ಅದರ ಈ ಧೋರಣೆ, ಈ ರೀತಿಯ ಬೆಂಬಲವನ್ನು, ಪಕ್ಷ ಹಾಗೂ ಪಕ್ಷದ ಸದಸ್ಯರ ಜೇಬು ತುಂಬಿಸಲು ಅರ್ಥಪೂರ್ಣವಾಗಿ ಬಳಸಿಕೊಳ್ಳುವಲ್ಲೂ ಅಡ್ಡಿಯಾಗಿಲ್ಲ. ಕೇಂದ್ರದಲ್ಲಿ ಈ ಪಕ್ಷದ ಎ. ರಾಜಾ ಅವರು ಸಂಪರ್ಕ ಖಾತೆಯ ಸಚಿವರಾಗಿದ್ದರು. ಅವರು ನೀಲಗಿರಿ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದಾರೆ. ಅಲ್ಲಿನ ಮತದಾರರಿಗೆ 2ಜಿ ಹಗರಣದ ಬಗ್ಗೆ ಗೊತ್ತಿಲ್ಲದಿ ರಬಹುದು.

ಹಿಂದಿಯನ್ನು ಶಾಲೆಗಳಲ್ಲಿ ಕಡ್ಡಾಯ ವಿಷಯವನ್ನಾಗಿಸಬಾರದೆನ್ನುವುದು ನಿಜವೇ. ಆದರೂ ಜನರಿಗೆ ಹಿಂದಿವಾಲಾಗಳೊಂದಿಗೆ ಸಂವಹನ ನಡೆಸುವಷ್ಟಾದರೂ ಹಿಂದಿಯ ಜ್ಞಾನ ಅಗತ್ಯ. ಕೇಂದ್ರದ ಮಾಜಿ ಶಿಕ್ಷಣ ಸಚಿವ, ನ್ಯಾ| ಎಂ.ಸಿ. ಛಾಗ್ಲಾ ಅವರ ಮಾತನ್ನು ನೆನಪಿಸಿಕೊಳ್ಳುವುದಾದರೆ, ಹಿಂದಿಯನ್ನು ಒಲ್ಲದ ಜನರ ಗಂಟಲಿಗೆ ಬಲವಂತವಾಗಿ ತುರುಕಲಾಗದು. ಹಿಂದಿಯೊಂದೇ ರಾಷ್ಟ್ರಭಾಷೆಯಲ್ಲ; 22 ರಾಷ್ಟ್ರಭಾಷೆಗಳಲ್ಲಿ ಅದೂ ಒಂದು. ಆದರೂ ಅದು ಭಾರತ ಸರಕಾರದ ಅಧಿಕೃತ ಭಾಷೆ. ಇಂಗ್ಲಿಷ್‌ ಅಧಿಕೃತ ಸಹ-ಭಾಷೆ, ಹೆಚ್ಚು ಕಡಿಮೆ ದೇಶದ ಖಾಸಗಿ ಕ್ಷೇತ್ರದ ಭಾಷೆ.

ಬಿಜೆಪಿ ಮುಂದಿನ ಐದು ವರ್ಷಗಳ ಕಾಲ ದೇಶವನ್ನು ಆಳಲು ಬೇಕಾದ ಜನಾದೇಶ ಪಡೆದುಕೊಂಡಿದೆ ಎಂಬ ಸತ್ಯವನ್ನು ಗಾಂಧಿಗಳು ಅರ್ಥ ಮಾಡಿಕೊಳ್ಳಬೇಕಿದೆ. ಸದನದಲ್ಲಿ ಬೊಬ್ಬಿಡಿರಿ ಎಂಬ ಸಲಹೆಯನ್ನು ರಾಹುಲ್ ನೀಡುತ್ತಿದ್ದಾಗ ತಾಯಿ ಸೋನಿಯಾ ಮಧ್ಯ ಪ್ರವೇಶಿಸಲಿಲ್ಲವೆನ್ನುವುದು ಅಚ್ಚರಿ ಹಾಗೂ ವಿಚಿತ್ರ ಸಂಗತಿಯೇ ಹೌದು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.