ಉಡುಪಿಗೆ ಇನ್ನು 5 ದಿನಗಳವರೆಗೆ ನೀರು ಲಭ್ಯ
Team Udayavani, Jun 6, 2019, 9:59 AM IST
ಉಡುಪಿ: ಉಡುಪಿ ನಗರಕ್ಕೆ ನೀರು ಪೂರೈಕೆಯಾಗುವ ಸ್ವರ್ಣಾ ನದಿಯ ಗುಂಡಿಗಳಲ್ಲಿರುವ ನೀರು ಮುಂದಿನ 5 ದಿನಗಳಿಗೆ ಸಾಕಾಗಬಹುದು ಎಂದು ಬುಧವಾರ ಅಂದಾಜಿಸಲಾಗಿದೆ.
ಪ್ರಸ್ತುತ ನದಿಯ ಅಲ್ಲಲ್ಲಿ ಇರುವ ಹಳ್ಳಗಳಿಂದ ನೀರನ್ನು ಪಂಪ್‌ಗ್ಳ ಮೂಲಕ ಬಜೆ ಅಣೆಕಟ್ಟಿಗೆ ಹಾಯಿಸಿ ಅಲ್ಲಿಂದ ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ. ಪುತ್ತಿಗೆ ಸೇತುವೆ, ಪುತ್ತಿಗೆ ಮಠ ಗುಂಡಿ, ಸಾೖಬ್ರಗುಂಡಿಗಳಿಂದ ಒಟ್ಟು 6 ಪಂಪ್‌ಗ್ಳಿಂದ ನೀರು ಅಣೆಕಟ್ಟಿಗೆ ಹರಿಸಲಾಗುತ್ತಿದೆ. ಕಳೆದ ರವಿವಾರ ನೀರು ಹರಿಯಲು ಅಡ್ಡವಾಗಿದ್ದ ಬಂಡೆಯೊಂದನ್ನು ತೆರವುಗೊಳಿಸಲಾಗಿದೆ. ಇದರಿಂದ ನೀರಿನ ಹರಿವು ಸರಾಗವಾಗಿದೆ.
ಮತ್ತೆ ಶ್ರಮದಾನ?
ಒಂದು ವೇಳೆ ಮಳೆ 5 ದಿನಗಳ ಅನಂತರವೂ ಬರದಿದ್ದರೆ ಸ್ವರ್ಣಾ ನದಿಯ ಭಂಡಾರಿಬೆಟ್ಟು ಪ್ರದೇಶದಲ್ಲಿರುವ ಹಳ್ಳದಿಂದ ನೀರು ಪಂಪಿಂಗ್ ಮಾಡುವ ಬಗ್ಗೆ ಹಾಗೂ ಮತ್ತೂಮ್ಮೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಶ್ರಮದಾನದ ಮೂಲಕ ನೀರು ಹರಿಯುವಿಕೆಗೆ ಇರಬಹುದಾದ ತಡೆಯನ್ನು ತೆಗೆಯುವ ಕಾರ್ಯ ನಡೆಸಲು ನಿರ್ಧರಿಸಲಾಗಿದೆ.
ಭಂಡಾರಿಬೆಟ್ಟು ಹಳ್ಳದಲ್ಲಿ ಮತ್ತೆ 5 ದಿನಗಳ ನೀರು ದೊರೆಯಬಹುದು ಎಂದು ಅಂದಾಜಿಸಲಾಗಿದೆ. ಶಾಸಕ ರಘುಪತಿ ಭಟ್ ಬುಧವಾರ ಕೂಡ ಪಂಪಿಂಗ್ ಪ್ರದೇಶಕ್ಕೆ ಭೇಟಿ ನೀಡಿ ಅವಲೋಕಿಸಿದರು. “5 ದಿನಗಳ ವರೆಗೆ ನೀರು ದೊರೆಯಬಹುದು’ ಎಂದು ಶಾಸಕರು ತಿಳಿಸಿದರು.
ಪಂಪಿಂಗ್ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು. ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ್ ಮತ್ತಿತರರು ಶಾಸಕರ ಜತೆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.