JK ವಿಧಾನಸಭಾ ಕ್ಷೇತ್ರ ಪುನರ್ ವಿಂಗಡನೆ: ಅಮಿತ್ ಶಾ ದಿಟ್ಟ ಹೆಜ್ಜೆಗೆ ಶಿವ ಸೇನೆ ಪ್ರಶಂಸೆ
Team Udayavani, Jun 6, 2019, 11:35 AM IST
ಹೊಸದಿಲ್ಲಿ : ಭಾರತೀಯ ಜನತಾ ಪಕ್ಷ ಮತ್ತು ಅದರ ನೀತಿಗಳನ್ನು ಹಿಂದೆಲ್ಲ ಕಟುವಾಗಿ ಟೀಕಿಸುತ್ತಿದ್ದ ಮಿತ್ರ ಪಕ್ಷ ಶಿವ ಸೇನೆ ಇದೀಗ ತನ್ನ ಮುಖವಾಣಿ ಸಾಮ್ನಾ ದಲ್ಲಿ ಜಮ್ಮು ಕಾಶ್ಮೀರದ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡನೆ ಕೈಗೊಳ್ಳುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ದಿಟ್ಟ ನಿರ್ಧಾರವನ್ನು ಬಹುವಾಗಿ ಕೊಂಡಾಡಿದೆ.
ಕಳೆದ ಆವರ ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಮಿತ್ ಶಾ ಅವರು ಜಮ್ಮು ಕಾಶ್ಮೀರ ಕುರಿತ ತಮ್ಮ ದೃಢ ಉದ್ದೇಶಗಳನ್ನು ದಿಟ್ಟತನದಿಂದ ಬಹಿರಂಗ ಪಡಿಸಿದ್ದಾರೆ. ಇಂತಹ ಒಂದು ದೃಢ ಉಪಕ್ರಮವು ಬಹಳ ಹಿಂದಿನ ಅಗತ್ಯವಾಗಿ ಬಾಕಿ ಉಳಿದು ಬಂದಿತ್ತು ಎಂದು ಶಿವ ಸೇನೆ ಹೇಳಿದೆ.
ಜಮ್ಮು ಕಾಶ್ಮೀರ ವಿಧಾನ ಸಭಾ ಕ್ಷೇತ್ರಗಳ ಪುನರ್‌ವಿಂಗಡನೆ ಬಗ್ಗೆ ಕೇಂದ್ರ ಸರಕಾರ ಅಧಿಕೃತವಾಗಿ ತನ್ನ ನಿರ್ಧಾರ ಈ ವರೆಗೆ ಪ್ರಕಟಿಸಿಲ್ಲವಾದರೂ ಅದರ ಉದ್ದೇಶಗಳು ಅನೌಪಚಾರಿಕವಾಗಿ ಈಗ ದೃಢೀಕರಿಸಲ್ಪಟ್ಟಿವೆ ಎಂದು ಸಾಮ್ನಾ ಸಂಪಾದಕೀಯದಲ್ಲಿ ಪ್ರಶಂಸಿಸಲಾಗಿದೆ.
‘ಜಮ್ಮು ಕಾಶ್ಮೀರದ ಪ್ರಾದೇಶಿಕ ಪಕ್ಷಗಳು ಸ್ಥಳೀಯರು ಸಿಟ್ಟಿಗೇಳುತ್ತಾರೆ ಎಂಬ ನೆಪ ಒಡ್ಡಿ ರಾಜ್ಯದಲ್ಲಿನ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡನೆಯನ್ನು ವಿರೋಧಿಸುತ್ತಾ ಬಂದಿದ್ದವು. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಅದರ ಗೃಹ ಸಚಿವರು ಜಮ್ಮು ಕಾಶ್ಮೀರ ವಿಷಯದಲ್ಲಿ ಸಂಪೂರ್ಣ ಶರಣಾಗತಿ ತೋರಿದ್ದರು. ಈಗ ಕಾಲ ಬದಲಾಗಿದೆ; ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮೀರದ ವಿಷಯಗಳಿಗೆ ಆದ್ಯತೆ ನಿಡುತ್ತಿದ್ದಾರೆ; ಈಗಿನ ಕೇಂದ್ರ ಸರಕಾರ ಅನಗತ್ಯ ಮತ್ತು ನಿಷ್ಪ್ರಯೋಜಕ ಚರ್ಚೆಯಲ್ಲಿ ಕಾಲ ಹರಣ ಮಾಡದು’ ಎಂದು ಶಿವ ಸೇನೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.