![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jun 6, 2019, 4:52 PM IST
ಮುಂಬೈ: ವಿಶ್ವ ಕಪ್ ಸಂದರ್ಭದಲ್ಲಿ ಮತ್ತೊಂದು ಸಿಕ್ಸರ್ ನೊಡನೆ ಅಚ್ಚರಿಗೊಳಿಸಿದ ರಿಲಯನ್ಸ್ ಜಿಯೋ, ಇದೀಗ ಜಿಯೋ ಬಳಕೆದಾರರಿಗೆ ವಿಶ್ವಕಪ್‌ನ ಪ್ರತಿ ಪಂದ್ಯದ ನೇರಪ್ರಸಾರವನ್ನೂ ಉಚಿತವಾಗಿ ನೋಡುವ ಅವಕಾಶ ಕಲ್ಪಿಸಿಕೊಟ್ಟಿದೆ.
ಈ ಸೌಲಭ್ಯದ ಮೂಲಕ ಜಿಯೋ ಬಳಕೆದಾರರು 365 ರೂ. ಉಳಿಸಲಿದ್ದು, ಬೇರೆ ಯಾವ ಸಂಸ್ಥೆಯೂ ತನ್ನ ಗ್ರಾಹಕರಿಗೆ ಈ ಸೌಲಭ್ಯ ನೀಡುತ್ತಿಲ್ಲ. ಐಪಿಎಲ್ ನಂತರ ಎಲ್ಲ ಬಿಸಿಸಿಐ ಪಂದ್ಯಗಳು ಜಿಯೋ ಲೈವ್ ನಲ್ಲಿ ಲಭ್ಯವಾಗಲಿದೆ.
* 300+ ಮಿಲಿಯನ್ ಗ್ರಾಹಕರ ಕ್ರಿಕೆಟ್ ವೀಕ್ಷಣೆಯ ಅನುಭವವನ್ನು ತನ್ನ ಕೊಡುಗೆಯ ಮೂಲಕ ಸಮೃದ್ಧಗೊಳಿಸಿದ ನಂತರ, ಗ್ರಾಹಕರಿಗಾಗಿ ಜಿಯೋ ಇದೀಗ ಇನ್ನೊಂದು ಅಚ್ಚರಿಯನ್ನು ತಂದಿದೆ.
* ವೀಕ್ಷಿಸಿ ಜಿಯೋ ಬಳಕೆದಾರರು ವಿಶ್ವಕಪ್‌ನ ಪ್ರತಿ ಪಂದ್ಯದ ನೇರಪ್ರಸಾರವನ್ನೂ ಉಚಿತವಾಗಿ ನೋಡಬಹುದು.
* ಆಟವಾಡಿ – ಜನಪ್ರಿಯ ‘ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್’ ಗೇಮ್ ಅನ್ನು ಮೈಜಿಯೋ ಆ್ಯಪ್‌ನಲ್ಲಿ ಆಡಿ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದು
* ಆನಂದಿಸಿ 251 ರೂ. ಮೌಲ್ಯದ ಅಪರಿಮಿತ ಕ್ರಿಕೆಟ್ ಸೀಸನ್ ಡೇಟಾ ಪ್ಯಾಕ್‌ನೊಂದಿಗೆ
ವಿಶ್ವಕಪ್ ವೀಕ್ಷಣೆ ಉಚಿತ:
ವಿಶ್ವಕಪ್ ಉಚಿತ ವೀಕ್ಷಣೆಯ ಅವಕಾಶ ನೀಡುವ ಮೂಲಕ, ನೇರಪ್ರಸಾರ ನೀಡಲು ಪಾವತಿಸಬೇಕಿದ್ದ 365 ರೂ. ಮೊತ್ತದ ಉಳಿತಾಯವನ್ನು ಜಿಯೋ ತನ್ನ ಬಳಕೆದಾರರಿಗಾಗಿ ಸಾಧ್ಯವಾಗಿಸಿದೆ. ಭಾರತದ ಬೇರೆ ಯಾವ ಸಂಸ್ಥೆಯೂ ತನ್ನ ಗ್ರಾಹಕರಿಗೆ ಈ ಸೌಲಭ್ಯ ನೀಡುತ್ತಿಲ್ಲ.
ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಗೇಮ್‌ನ ಹೊಸ ಆವೃತ್ತಿಯ ಮೂಲಕ ಜಿಯೋ ಗ್ರಾಹಕರಿಗೆ ಸಂಭ್ರಮ ತರುವುದನ್ನು ಮುಂದುವರೆಸಿದೆ. ತನ್ನ ಬಳಕೆದಾರರಿಗೆ ಭಾಗವಹಿಸುವ ಅವಕಾಶ ನೀಡುವ ಜೊತೆಗೆ ಸ್ಕೋರ್‌ಗಳು, ಪಂದ್ಯಗಳ ವೇಳಾಪಟ್ಟಿ, ಫಲಿತಾಂಶ ಮತ್ತು ಇನ್ನೂ ಹಲವು ಉಪಯುಕ್ತ ಮಾಹಿತಿಯನ್ನು ಇದು ಒಂದೇ ಸ್ಥಳದಲ್ಲಿ ಒದಗಿಸಲಿದೆ.
* ಜಿಯೋಟೀವಿ ಮೂಲಕ ಹಾಟ್‌ಸ್ಟಾರ್‌ನಲ್ಲಿ ಕ್ರಿಕೆಟ್ ನೇರಪ್ರಸಾರ ವೀಕ್ಷಿಸುವಾಗ ಡೇಟಾ ಮುಗಿದುಹೋಗದಂತೆ ನೋಡಿಕೊಳ್ಳಲು, ರೂ. 251ರ ಕ್ರಿಕೆಟ್ ಸೀಸನ್ ಡೇಟಾ ಪ್ಯಾಕ್‌ನೊಡನೆ ರೀಚಾರ್ಜ್ ಮಾಡಿಕೊಳ್ಳುವ ಅವಕಾಶವೂ ಜಿಯೋ ಬಳಕೆದಾರರಿಗೆ ಸಿಗುತ್ತಿದೆ.
ವಿಶ್ವಕಪ್ ಪಂದ್ಯಗಳ ಉಚಿತ ನೇರಪ್ರಸಾರ ವೀಕ್ಷಿಸುವುದು ಹೇಗೆ
ಗಮನಿಸಿ ಉಚಿತ ಎನ್ನುವುದು ಕಾರ್ಯಕ್ರಮದ ಚಂದಾಗೆ ಅನ್ವಯಿಸುತ್ತದೆ. ಡೇಟಾ ಬಳಕೆಗೆ ಡೇಟಾ ಪ್ಯಾಕ್ ದರಗಳಂತೆ ಶುಲ್ಕ ವಿಧಿಸಲಾಗುತ್ತದೆ.
ಜಿಯೋ ಕ್ರಿಕೆಟ್ ಸೀಸನ್ ಡೇಟಾ ಪ್ಯಾಕ್:
ಜಿಯೋ ಕ್ರಿಕೆಟ್ ಸೀಸನ್ ವಿಶೇಷ ಡೇಟಾ ಪ್ಯಾಕ್ ಅನ್ನು ರೂ. 251 ಪಾವತಿಸುವ ಮೂಲಕ ಎಲ್ಲ ಜಿಯೋ ಬಳಕೆದಾರರೂ ಪಡೆದುಕೊಳ್ಳಬಹುದಾಗಿದೆ. ಹೆಚ್ಚು ಡೇಟಾ ಬಳಕೆಯಾಗುವ ಇಂತಹ ಸನ್ನಿವೇಶಗಳಿಗೆ ಸೂಕ್ತವಾಗುವಂತೆ ಎಲ್ಲ ಕ್ರಿಕೆಟ್ ಪ್ರೇಮಿಗಳಿಗಾಗಿ ಈ ವಿಶೇಷ ಅವಕಾಶವನ್ನು ರೂಪಿಸಲಾಗಿದೆ. 51 ದಿನಗಳ ಅವಧಿಗೆ ಈ ಪ್ಯಾಕ್ ಒಟ್ಟು 102 ಜಿಬಿ ಅತಿವೇಗದ ಡೇಟಾ ಒದಗಿಸಲಿದ್ದು, ಅದು ಎಲ್ಲ ಕ್ರಿಕೆಟ್ ಪಂದ್ಯಗಳ ವೀಕ್ಷಣೆಗೆ ಸಾಕಾಗುವಷ್ಟಿರಲಿದೆ.
ಕ್ರಿಕೆಟ್ ಪಂದ್ಯಗಳಷ್ಟೇ ಅಲ್ಲದೆ ಈ ಡೇಟಾ ಅನ್ನು ಅಂತರಜಾಲದಿಂದ ಯಾವುದೇ ಮಾಹಿತಿ ಪಡೆಯಲು ಬಳಸಿಕೊಳ್ಳಬಹುದು.
ಇದರೊಡನೆ, ಕ್ರಿಕೆಟ್ ಪ್ರೇಮಿಗಳು ತಮ್ಮ ಅಚ್ಚುಮೆಚ್ಚಿನ ಎಲ್ಲ ಪಂದ್ಯಗಳನ್ನೂ, ಯಾವುದೇ ಅಡಚಣೆ ಅಥವಾ ದೈನಂದಿನ ಡೇಟಾ ಮಿತಿಯನ್ನು ಮೀರುವ ಚಿಂತೆಯಿಲ್ಲದೆ, ಜಿಯೋಟೀವಿ ಮೂಲಕ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.
ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್:
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
You seem to have an Ad Blocker on.
To continue reading, please turn it off or whitelist Udayavani.