ಹೆಸರೊಂದೇ ಸಾಕಾ ಗುರು?
ಸ್ಯಾಂಡಲ್‌ವುಡ್‌ನಲ್ಲಿ ಟೈಟಲ್ ಟ್ರೆಂಡ್
Team Udayavani, Jun 7, 2019, 6:00 AM IST
ಕಳೆದ ಒಂದು ದಶಕದಿಂದ ಕನ್ನಡ ಚಿತ್ರರಂಗದಲ್ಲಿ ನಿರಂತರವಾಗಿ ಸದ್ದು ಮಾಡುತ್ತ, ಇಂದಿಗೂ ಸುದ್ದಿಯಾಗುತ್ತಿರುವ ವಿಷಯ ಯಾವುದು? ಇಂಥದ್ದೊಂದು ಪ್ರಶ್ನೆಯನ್ನು ಚಿತ್ರರಂಗದ ಮಂದಿಗೆ, ಸಿನಿಮಾ ಆಸಕ್ತರ ಮುಂದಿಟ್ಟರೆ ಮೊದಲು ಸಿಗುವ ಉತ್ತರವೇ “ಟೈಟಲ್ ವಿವಾದ’.
ಹೌದು, ಕಳೆದ ಒಂದು ದಶಕದಿಂದ ಚಿತ್ರದ ಟೈಟಲ್‌ಗಳು ಸಿನಿಮಾವಾಗಿ ಸುದ್ದಿ ಮಾಡಿದ್ದಕ್ಕಿಂತ ವಿವಾದಗಳಾಗಿ ಸುದ್ದಿ ಮಾಡಿದ್ದೇ ಹೆಚ್ಚು. ಒಂದು ಟೈಟಲ್ ಹಿಡಿದು ನಾಲ್ಕಾರು ನಿರ್ದೇಶಕರು – ನಿರ್ಮಾಪಕರು ಕಿತ್ತಾಡುವುದು, ಇಲ್ಲವಾದರೆ ಆ ಟೈಟಲ್‌ಗೆ ಮುಂದೆ ಹಿಂದೆ ಬೇರೆ ಪದ ಸೇರಿಸಿ ತಮ್ಮ ಚಿತ್ರಕ್ಕೆ ಶೀರ್ಷಿಕೆ ಇಡುವುದು. ತಮ್ಮ ಪ್ರತಿಷ್ಠೆಗಾಗಿ, ಪ್ರಚಾರಕ್ಕಾಗಿ ಟೈಟಲ್ ಹೆಸರಿನಲ್ಲಿ ವಾದ-ವಿವಾದ ಮಾಡಿಕೊಳ್ಳುವುದು. ಆ ಟೈಟಲ್ ಸಿನಿಮಾವಾಗುತ್ತೋ, ಇಲ್ಲವೋ, ಆದರೆ, ಅದೇ ವಿವಾದಿತ ಟೈಟಲ್‌ನಲ್ಲಿ ಒಂದಷ್ಟು ಪ್ರಚಾರ ಪಡೆದುಕೊಳ್ಳುವುದು ಗುಟ್ಟಾಗಿ ಉಳಿದಿಲ್ಲ. ದಶಕಗಳಿಂದ ಸಿನಿಮಾ ಮಾಡದಿರುವವರು, “ಮಾಜಿ’ ಎಂಬ ಟ್ಯಾಗ್‌ಲೈನ್ ಹಾಕಿಕೊಂಡವರು ಕೂಡ ಟೈಟಲ್ ಮೂಲಕವೇ ಆಗಾಗ್ಗೆ ಒಂದಷ್ಟು ಹವಾ… ಎಬ್ಬಿಸುವುದು ಮುಂದುವರೆಯುತ್ತಲೇ ಇದೆ.
ಇಲ್ಲಿ ಇನ್ನೊಂದು ಸಂಗತಿ ಹೇಳಲೇಬೇಕು. ಇದು ನಿಮಗೆ ಅಚ್ಚರಿ ಎನಿಸಿದರೂ ಸತ್ಯ. ಕಳೆದ ಒಂದು ದಶಕಗಳ ಅಂಕಿ-ಅಂಶಗಳನ್ನು ತೆಗೆದುಕೊಂಡರೆ, ಡಬ್ಬಿಂಗ್, ಪರಭಾಷಾ ಚಿತ್ರಗಳ ಹಾವಳಿ, ಥಿಯೇಟರ್ ಸಮಸ್ಯೆ, ಮಿಟೂ ಪ್ರಕರಣ, ಚಿತ್ರತಂಡದೊಳಗಿನ ಕಿತ್ತಾಟ, ಚಿತ್ರರಂಗದ ಕಾರ್ಮಿಕರ ಹೋರಾಟ ಇವೆಲ್ಲದಕ್ಕಿಂತ ಹೆಚ್ಚು ಸುದ್ದಿಯಾಗಿದ್ದು, ವಾದ-ವಿವಾದಗಳಿಗೆ ಕಾರಣವಾಗಿರುವುದು ಸಿನಿಮಾದ ಟೈಟಲ್‌ಗಳು ಅಂದರೆ ನಂಬಲೇಬೇಕು. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಚಿತ್ರರಂಗದ ಮಟ್ಟಿಗೆ ಇಂದು ಟೈಟಲ್‌ಗಳೇ ಗಂಭೀರ ಸಮಸ್ಯೆ ಎನ್ನುವಂತಾಗಿದೆ.
ಹಾಗಾದರೆ, ನಿಜಕ್ಕೂ ಕನ್ನಡ ಚಿತ್ರರಂಗದಲ್ಲಿ ಆಗಾಗ್ಗೆ ಟೈಟಲ್ ಕಾಂಟ್ರವರ್ಸಿ ಭುಗಿಲೇಳಲು ಕಾರಣವೇನು ಅಂತ ಹುಡುಕುತ್ತ ಹೊರಟರೆ, ಅದಕ್ಕೆ ಸಿಗುವ ಉತ್ತರ ಕ್ಯಾಚಿ ಟೈಟಲ್‌ಗಳಿಂದ ಸಿಗುವ ಪುಕ್ಕಟೆ ಪ್ರಚಾರ. ಜನ ಸಾಮಾನ್ಯರ ಬಾಯಲ್ಲಿ ಸರಾಗವಾಗಿ ಹರಿದಾಡುವ ಹೆಸರುಗಳನ್ನು ಸಿನಿಮಾಗಳಿಗೆ ಇಟ್ಟರೆ ಅವು ಪ್ರೇಕ್ಷಕರಿಗೆ ಬಹುಬೇಗ ತಲುಪುತ್ತದೆ. ಚಿತ್ರದ ಪ್ರಚಾರ ಕೂಡ ಸುಲಭವಾಗುತ್ತದೆ.
ಹಾಗಾಗಿ ಹೊಸ ಟೈಟಲ್‌ಗಳನ್ನು ಹುಡುಕಿ ಅದನ್ನು ಜನಪ್ರಿಯಗೊಳಿಸುವುದಕ್ಕಿಂತ, ಜನಪ್ರಿಯ ಆಡುಭಾಷೆಯ ಹೆಸರುಗಳನ್ನೆ ತಮ್ಮ ಸಿನಿಮಾಗಳಿಗೆ ಇಟ್ಟು ಜನಪ್ರಿಯತೆ ಪಡೆದುಕೊಳ್ಳುವುದು ಉತ್ತಮ ಎನ್ನುವ ಐಡಿಯಾ ನಿರ್ಮಾಪಕ, ನಿರ್ದೇಶಕರದ್ದು.
ಹೀಗಾಗಿಯೆ, “ಮಿಟೂ’, “ಬ್ಲ್ಯೂವೇಲ್’, “ನಿಖೀಲ್ ಎಲ್ಲಿದ್ದೀಯಪ್ಪಾ..?’, “ಜೋಡೆತ್ತು’, “ಕಳ್ಳೆತ್ತು’, “ಮಂಡ್ಯದ ಹೆಣ್ಣು’, “ರೆಬಲ್ ಲೇಡಿ’, “ಚೌಕಿದಾರ್’, “ಚಾಯ್‌ವಾಲಾ’ ಹೀಗೆ ಜನರ ಬಾಯಲ್ಲಿ ಅನಾಯಾಸವಾಗಿ ಓಡಾಡಿದ ನೂರಾರು ಪದಗಳು “ಕ್ಯಾಚಿ’ ಎನಿಸಿಕೊಂಡವು, ಇನ್ನು “ಕ್ಯಾಚಿ ಟೈಟಲ್’ಗಳನ್ನೇ ಕ್ಯಾಚ್ ಹಾಕಿಕೊಳ್ಳಲು ತುದಿಗಾಲಿನಲ್ಲಿ ನಿಂತ ಅನೇಕ ನಿರ್ಮಾಪಕ, ನಿರ್ದೇಶಕರಿಗೆ ಶಬ್ದಕೋಶದಲ್ಲಿ ಹುಡುಕಿದರೂ ಸಿಗದಂಥ ಒಂದಷ್ಟು “ಕ್ಯಾಚಿ ಟೈಟಲ್’ಗಳು ಆಗಾಗ್ಗೆ ಸಿಗುತ್ತಿರುವುದಂತೂ ಸುಳ್ಳಲ್ಲ.
ಇದೇ ಖುಷಿಯಲ್ಲಿ ಹತ್ತಾರು ನಿರ್ದೇಶಕರು, ನಿರ್ಮಾಪಕರು ನಾ ಮುಂದು.., ತಾ ಮುಂದು ಅಂಥ ಕಂಡ ಕಂಡ ಟೈಟಲ್‌ಗಳನ್ನೆಲ್ಲಾ ನೋಂದಣಿ ಮಾಡಿಸಲು ಮುಗಿ ಬೀಳುವುದು ನಂತರ ಅದರ ಹಿಂದೇ ಟೈಟಲ್ ವಿವಾದ ಶುರುವಾಗುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಆರಂಭದಲ್ಲಿ ಇಂಥ ಟೈಟಲ್‌ಗಳನ್ನು ಕೊಡುವುದಿಲ್ಲ ಎಂದಿದ್ದ ವಾಣಿಜ್ಯ ಮಂಡಳಿ, ಈಗ ಫಸ್ಟ್ ಇನ್ ಫಸ್ಟ್ ಔಟ್ ಎನ್ನುವಂತೆ ಮೊದಲು ಕೇಳಿದವರೆ ಮೊದಲು ಟೈಟಲ್ ಕೊಟ್ಟು ಕೈ ತೊಳೆದುಕೊಳ್ಳುತ್ತಿದೆ. ಆದರೆ ನಿಜಕ್ಕೂ ಈ ಎಲ್ಲಾ ಟೈಟಲ್‌ಗಳು ಸಿನಿಮಾ ಆಗುತ್ತವೆಯಾ..? ಈ ಟೈಟಲ್‌ಗೆ ಹೊಂದುವಂಥ ಕಥೆಗಳು ಇವೆಯಾ..? ಇಂಥ ಟೈಟಲ್‌ಗಳಲ್ಲಿ ನಮ್ಮ ಸ್ಟಾರ್ ನಟರು ಅಭಿನಯಿಸುತ್ತಾರಾ..? ಇಂಥ ಹತ್ತಾರು ಪ್ರಶ್ನೆಗಳಿಗೆ ಚಿತ್ರರಂಗದ ಒಳಗೆ ಮತ್ತು ಹೊರಗೆ ಇರುವ ಬಹುತೇಕ ಮಂದಿಯ ಉತ್ತರ ಒಂದೇ ಅದು “ಇಲ್ಲ…’
ಆದರೆ ಇಂಥ ಹೆಸರುಗಳು ಸಿನಿಮಾಗಳಿಗೆ ಟೈಟಲ್ ಆಗಿ ಎಷ್ಟರ ಮಟ್ಟಿಗೆ ಮೈಲೇಜ್ ತಂದುಕೊಡುತ್ತದೆ. ಇಂಥ ಟೈಟಲ್‌ಗಳನ್ನು ಇಟ್ಟುಕೊಂಡು ಗೆದ್ದ ಸಿನಿಮಾಗಳ ಸರಾಸರಿ ಸಂಖ್ಯೆ ಎಷ್ಟು ಎಂಬ ಪ್ರಶ್ನೆಗೆ ಕ್ಯಾಚಿ ಟೈಟಲ್ ಹಿಂದೆ ಬಿದ್ದವರೇ ಉತ್ತರಿಸಬೇಕು.
ಟೈಟಲ್-ಪ್ರಚಾರಕ್ಕೆ ಮಾತ್ರ ಸೀಮಿತ
ಕಳೆದ ಕೆಲ ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಟೈಟಲ್ ಕಾಂಟ್ರವರ್ಸಿಗಳು ಹೆಚ್ಚಾಗುತ್ತಿರುವುದು ನಿಜ. ಕೆಲವರು ಮಾತ್ರ ನಿಜಕ್ಕೂ ತಮ್ಮ ಕಥೆಗೆ ಸೂಕ್ತವಾದ ಟೈಟಲ್ ರಿಜಿಸ್ಟರ್ ಮಾಡಿಸುತ್ತಾರೆ. ಉಳಿದಂತೆ ತುಂಬ ಟೈಟಲ್‌ಗಳು ಕೇವಲ ವಿವಾದಗಳಿಗೆ, ಪ್ರಚಾರಕ್ಕೆ ಸೀಮಿತವಾಗುತ್ತವೆಯೇ ಹೊರತು ಅವುಗಳು ಸಿನಿಮಾವಾದ ಉದಾಹರಣೆ ತೀರಾ ವಿರಳ. ಇನ್ನು ಟೈಟಲ್ ವಿಷಯದಲ್ಲಿ ಫಿಲಂ ಚೇಂಬರ್ ನಿರ್ಮಾಪಕರಿಗೆ ಸಲಹೆ ಕೊಡಬಹುದೇ ವಿನಃ, ಇಂಥದ್ದೇ ಟೈಟಲ್ ಇಡಬೇಕು ಯಾರಿಗೂ ಸೂಚನೆ ಕೊಡಲಾಗುವುದಿಲ್ಲ. ಚಿತ್ರರಂಗದಲ್ಲಿ ಅನೇಕ ಗಂಭೀರ ಸಮಸ್ಯೆಗಳಿವೆ ಅದರ ಬಗ್ಗೆ ಚರ್ಚೆಯಾಗಿ ಸುದ್ದಿಯಾಗುವ ಬದಲು ಇಂಥ ವಿಷಯಗಳು ದೊಡ್ಡದಾಗಿ ಆಗಾಗ್ಗೆ ಸುದ್ದಿಯಾಗುವುದು ಬೇಸರದ ಸಂಗತಿ’
ಭಾ.ಮಾ ಹರೀಶ್, ಕಾರ್ಯದರ್ಶಿ ಫಿಲ್ಮ್ ಚೇಂಬರ್
ಜಿ.ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.