ಎಲ್ಲಾ ಕ್ಯಾಬಿನೆಟ್ ಸಮಿತಿಗಳಲ್ಲಿ ಶಾಗೆ ಪ್ರಾತಿನಿಧ್ಯ

Team Udayavani, Jun 7, 2019, 6:10 AM IST

shah1

ನವದೆಹಲಿ: ಬುಧವಾರವಷ್ಟೇ ‘ಆರ್ಥಿಕ ಬೆಳವಣಿಗೆ ಹಾಗೂ ಬಂಡವಾಳ ಹೂಡಿಕೆ ಸಮಿತಿ’ ಮತ್ತು ‘ಉದ್ಯೋಗ ಹಾಗೂ ಕೌಶಲ್ಯಾಭಿವೃದ್ಧಿ’ ಎಂಬ ಎರಡು ಹೊಸ ಸಮಿತಿಗಳನ್ನು ರಚಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಗುರುವಾರ ಈ ಹಿಂದಿನ ಸರ್ಕಾರದಲ್ಲಿ ರಚಿಸಲಾಗಿದ್ದ ಐದು ಸಂಪುಟ ಸಮಿತಿಗಳನ್ನು ಪುನಾರಚಿಸಿದ್ದಾರೆ.

ನೂತನ ಸಮಿತಿಗಳೂ ಸೇರಿದಂತೆ, ಈಗ ಪುನಾರಚನೆಗೊಂಡಿರುವ ಎಲ್ಲಾ 8 ಸಮಿತಿಗಳಲ್ಲೂ ಅಮಿತ್‌ ಶಾ ಅವರಿಗೆ ಸ್ಥಾನ ನೀಡಲಾಗಿದ್ದು, ಇದು ಸಂಪುಟದಲ್ಲಿ ಶಾ ಅವರ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದೆ. ಅದರಲ್ಲೂ ‘ನೇಮಕಾತಿ ಸಂಪುಟ ಸಮಿತಿ’ಯಲ್ಲಿ ಮೋದಿ ಮತ್ತು ಶಾ ಇಬ್ಬರೇ ಇರುವುದು ಗಮನಾರ್ಹ. ಆದರೆ, ಎರಡು ಸಮಿತಿಗಳನ್ನು ಬಿಟ್ಟು ಉಳಿದೆಲ್ಲವುಗಳಿಂದ ರಾಜನಾಥ್‌ ಸಿಂಗ್‌ ಅವರನ್ನು ಕೈಬಿಡಲಾಗಿತ್ತು. ಆದರೆ, ರಾತ್ರಿ ವೇಳೆಗೆ 6 ಸಮಿತಿಗಳಲ್ಲಿ ರಾಜನಾಥ್‌ಗೆ ಸ್ಥಾನ ನೀಡಲಾಗಿದೆ.

ಬುಧವಾರದ ಎರಡು ಸಮಿತಿಗಳಲ್ಲೂ ರಾಜನಾಥ್‌ ಹೆಸರಿರಲಿಲ್ಲ. ಗುರುವಾರ ಎಲ್ಲಾ ಸಮಿತಿಗಳನ್ನೂ ಪುನರ್‌ ರಚಿಸಿದ್ದು ಪ್ರಧಾನಿ ನಂತರದ ಸ್ಥಾನವನ್ನೇ ರಾಜನಾಥ್‌ಗೆ ನೀಡಲಾಗಿದೆ.

•ಭದ್ರತಾ ಸಮಿತಿ ಅತ್ಯಂತ ಮಹತ್ವವೆನಿಸಿರುವ ರಾಷ್ಟ್ರೀಯ ಸುರಕ್ಷತೆಗೆ ಸಂಬಂಧಿಸಿದ ಭದ್ರತಾ ಸಮಿತಿಯಲ್ಲಿ ಹೊಸದಾಗಿ ಅಮಿತ್‌ ಶಾ ಹಾಗೂ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರನ್ನು ಸೇರ್ಪಡೆಗೊಳಿಸಿದ್ದು ಬಿಟ್ಟರೆ, ಇನ್ನುಳಿದ ಸದಸ್ಯರನ್ನು ಹಾಗೇ ಮುಂದುವರಿಸಲಾಗಿದೆ. ಪ್ರಧಾನಿ ಮೋದಿಯವರ ಅಧ್ಯಕ್ಷತೆಯ ಈ ಸಮಿತಿಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇದ್ದಾರೆ. •ಆರ್ಥಿಕ ವ್ಯವಹಾರಗಳ ಸಮಿತಿ ನರೇಂದ್ರ ಮೋದಿ, ರಾಜನಾಥ್‌ ಸಿಂಗ್‌, ಅಮಿತ್‌ ಶಾ, ನಿರ್ಮಲಾ ಸೀತಾರಾಮನ್‌, ಜೈಶಂಕರ್‌, ನಿತಿನ್‌ ಗಡ್ಕರಿ, ಪಿಯೂಶ್‌ ಗೋಯೆಲ್, ನರೇಂದ್ರ ತೋಮರ್‌, ರವಿಶಂಕರ್‌ ಪ್ರಸಾದ್‌, ಹರ್‌ಸಿಮ್ರತ್‌ ಕೌರ್‌ ಬಾದಲ್, ಧರ್ಮೇಂದ್ರ ಪ್ರಧಾನ್‌ (ಪೆಟ್ರೋಲಿಯಂ), ಸದಾನಂದ ಗೌಡ (ರಾಸಾಯನಿಕ ಮತ್ತು ರಸಗೊಬ್ಬರ).

•ರಾಜಕೀಯ ವ್ಯವಹಾರಗಳ ಸಮಿತಿ ನರೇಂದ್ರ ಮೋದಿ, ರಾಜನಾಥ್‌ ಸಿಂಗ್‌, ಅಮಿತ್‌ ಶಾ, ನಿತಿನ್‌ ಗಡ್ಕರಿ, ನಿರ್ಮಲಾ ಸೀತಾರಾಮನ್‌ , ನರೇಂದ್ರ ತೋಮರ್‌, ರವಿಶಂಕರ್‌ ಪ್ರಸಾದ್‌, ಪಿಯೂಶ್‌ ಗೋಯೆಲ್, ಪ್ರಹ್ಲಾದ್‌ ಜೋಷಿ, ರಾಮ್‌ ವಿಲಾಸ್‌ ಪಾಸ್ವಾನ್‌, ಹರ್‌ಸಿಮ್ರತ್‌ ಕೌರ್‌ ಬಾದಲ್, ಅರವಿಂದ್‌ ಸಾವಂತ್‌, ಹರ್ಷವರ್ಧನ್‌, •ಸಂಸದೀಯ ವ್ಯವಹಾರಗಳ ಸಮಿತಿ ರಾಜನಾಥ್‌ ಸಿಂಗ್‌, ಅಮಿತ್‌ ಶಾ, ಪ್ರಹ್ಲಾದ್‌ ಜೋಷಿ, ನರೇಂದ್ರ ಸಿಂಗ್‌ ತೋಮರ್‌, ನಿರ್ಮಲಾ ಸೀತಾರಾಮನ್‌, ರವಿಶಂಕರ್‌ ಪ್ರಸಾದ್‌, ಪ್ರಕಾಶ್‌ ಜಾವಡೇಕರ್‌, ತಾವರ್‌ಚಂದ್‌ ಗೆಹ್ಲೋಟ್, ರಾಮ್‌ ವಿಲಾಸ್‌ ಪಾಸ್ವಾನ್‌ •ಸಚಿವರ ವಸತಿ ಹಂಚಿಕೆ ಸಮಿತಿ ಅಮಿತ್‌ ಶಾ, ನಿರ್ಮಲಾ ಸೀತಾರಾಮನ್‌, ನಿತಿನ್‌ ಗಡ್ಕರಿ, ಫಿಯೂಶ್‌ ಗೋಯೆಲ್, ಹರ್‌ದೀಪ್‌ ಪುರಿ (ನಗರಾಭಿವೃದ್ಧಿ) ಹಾಗೂ ವಿಶೇಷ ಆಹ್ವಾನಿತರಾಗಿ ಜಿತೇಂದ್ರ ಸಿಂಗ್‌ (ಪ್ರಧಾನಿ ಕಾರ್ಯಾಲಯ ಸಹಾಯಕ ಸಚಿವ) ಇರುತ್ತಾರೆ. ಈ ಸಮಿತಿಯಲ್ಲಿ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲ. ಇದಕ್ಕೆ ಅಮಿತ್‌ ಶಾ ನೇತೃತ್ವ ವಹಿಸಿದ್ದಾರೆ.

ಟಾಪ್ ನ್ಯೂಸ್

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mumbai Coast: ಗೇಟ್‌ವೇ ಆಫ್‌ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!

Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್‌ ಭೇಟಿ: 21ರಿಂದ ಮೋದಿ ಪ್ರವಾಸ

Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್‌ ಭೇಟಿ: 21ರಿಂದ ಮೋದಿ ಪ್ರವಾಸ

GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?

GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.